ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಸಾಮಾನ್ಯ ಬಸ್‌ ಟಿಕೆಟ್‌ ದರ ತುಟ್ಟಿ, ಪುಷ್ಪಕ್‌ ಟಿಕೆಟ್‌ ಅಗ್ಗ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಪ್ರಯಾಣ ದರವನ್ನು ಪ್ರತಿಶತ 2.1ರಷ್ಟು ಏರಿಕೆಯಾಗಿದ್ದು, ಜೂನ್‌ 9ರಿಂದ ಜಾರಿಗೆ ಬಂದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಅಧ್ಯಕ್ಷ ಹಾಗೂ ಶಾಸಕ ಆರ್‌.ವಿ.ದೇವರಾಜ್‌ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಡೀಸೆಲ್‌ ಬೆಲೆ ಏರಿಕೆಯ ಕಾರಣ ಬಿಎಂಟಿಸಿಗೆ ವಾರ್ಷಿಕ 7.61 ಕೋಟಿ ರುಪಾಯಿ ಹೊರೆಯಾಗಿದ್ದರಿಂದ ದರ ಏರಿಕೆ ಅನಿವಾರ್ಯವಾಯಿತು. ಪರಿಷ್ಕೃತ ದರದ ಪ್ರಕಾರ ನಗರ ಮಿತಿಯ ಸಾಮಾನ್ಯ ಬಸ್‌ಗಳ ಕನಿಷ್ಠ ಟಿಕೆಟ್‌ ದರ 1 ರುಪಾಯಿಯಿಂದ 2 ರುಪಾಯಿಯಾಗಿದೆ. ಕೆಂಪು ಫಲಕದ ಬಸ್‌ಗಳ ಕನಿಷ್ಠ ಟಿಕೆಟ್‌ ದರ 2.50 ರುಪಾಯಿಯಿಂದ 2 ರುಪಾಯಿಗೆ ಇಳಿದಿದೆ ಎಂದು ದೇವರಾಜ್‌ ಹೇಳಿದರು.

ಬಿಎಂಟಿಸಿ ಪರಿಷ್ಕರಣೆ ವಿವರಣೆ...

  • ನಗರ ಮತ್ತು ಹೊರ ವಲಯದ ಬಸ್‌ಗಳಿಗೆ ಏಕ ಪ್ರಕಾರದ ಸ್ಟೇಜ್‌ ಪದ್ಧತಿ.
  • ಪುಷ್ಪಕ್‌ ಮತ್ತು ಜನಪ್ರಿಯ ವಾಹಿನಿ ಬಸ್‌ ಟಿಕೆಟ್‌ ದರಗಳು ಅಗ್ಗ.
  • ವಿದ್ಯಾರ್ಥಿಗಳ ಬಸ್‌ ಪಾಸ್‌ ದರದಲ್ಲಿ ಕೊಂಚ ಏರಿಕೆ.
  • ನಗರ ಮಿತಿಯ ಕಪ್ಪು ಫಲಕ ಬಸ್‌ಗಳ ಮಾಸಿಕ ಪಾಸ್‌ ದರ 10 ರುಪಾಯಿ ತುಟ್ಟಿ.
  • ನಗರ ಮತ್ತು ಹೊರ ವಲಯದ ಮಾಸಿಕ ಬಸ್‌ ಪಾಸ್‌ ದರದಲ್ಲಿ 20 ರುಪಾಯಿ ಹಾಗೂ ಪುಷ್ಪಕ್‌ ಸೇರಿದಂತೆ ಎಲ್ಲಾ ಬಸ್‌ಗಳಲ್ಲೂ ಓಡಾಡಬಹುದಾದ ಮಾಸಿಕ ಪಾಸ್‌ ದರದಲ್ಲಿ 15 ರುಪಾಯಿ ಏರಿಕೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X