ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿವಿ ಪರೀಕ್ಷೆ : 1,060 ಅಭ್ಯರ್ಥಿಗಳಫಲಿತಾಂಶ ಅಸಿಂಧು

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾಲಯದ ಅಂಕ ಪಟ್ಟಿ ಹಗರಣಕ್ಕೆ ಸಂಬಂಧಿಸಿ 1,060 ಅಭ್ಯರ್ಥಿಗಳ ಫಲಿತಾಂಶವನ್ನು ಅಸಿಂಧು ಎಂದು ವಿಶ್ವ ವಿದ್ಯಾಲಯ ಘೋಷಿಸಿದೆ.

ಹಗರಣದಲ್ಲಿ ಭಾಗಿಗಳೆಂದು ಗುರುತಿಸಲಾಗಿರುವ ಇಬ್ಬರು ಮುಖ್ಯ ಕಸ್ಟೋಡಿಯನ್‌ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿವಿ ಶಿಫಾರಸು ಮಾಡಿದೆ. 2001ನೇ ಏಪ್ರಿಲ್‌ ತಿಂಗಳು ನಡೆದ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಈಗ ಹೊಸದಾಗಿ ಮೌಲ್ಯಮಾಪನ ಮಾಡಲಾಗುವುದು. ಇನ್ನರಡೇ ವಾರದೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿವಿ ತಿಳಿಸಿದೆ.

ಮುಖ್ಯ ಕಸ್ಟೋಡಿಯನ್‌ ಆಗಿದ್ದ ಸರಕಾರಿ ಕಾಲೇಜಿನ ಪ್ರೊ. ಎಂ. ಡಿ. ಚಾಮರಾಜ್‌ ಮತ್ತು ಮಾರ್ಕ್ಸ್‌ ಕಂಪ್ಯೂಟರೈಸಿಂಗ್‌ ಡಿಪಾರ್ಟ್‌ಮೆಂಟ್‌ನ(ಕೋಡಿಂಗ್‌) ಮುಖ್ಯ ಕಸ್ಟೋಡಿಯನ್‌ ಆಗಿದ್ದ ಎಸ್‌. ಜೆ. ಆರ್‌ ಕಾಲೇಜಿನ ಪ್ರೊ. ಎಂ. ದೊರೆಸ್ವಾಮಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X