ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮುವಾದ ಬೆಂಬಲಿಗ ವಾಜಪೇಯಿಗೆ ದೇಶವಾಳೋ ಹಕ್ಕಿಲ್ಲ -ಸತ್ಯು

By Staff
|
Google Oneindia Kannada News

ಮೈಸೂರು : ಕೋಮುವಾದವನ್ನು ಬೆಂಬಲಿಸುವ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಗೆ ದೇಶವನ್ನು ಆಳಲು ಯಾವುದೇ ಹಕ್ಕಿಲ್ಲ ಎಂದು ಚಿತ್ರ ನಿರ್ದೇಶಕ ಎಂ. ಎಸ್‌. ಸತ್ಯು ಅಭಿಪ್ರಾಯಪಟ್ಟಿದ್ದಾರೆ.

ಸಿಪಿಐ ಪಕ್ಷ ಗುರುವಾರ ಏರ್ಪಡಿಸಿದ್ದ ಸೌಹಾರ್ದ ರ್ಯಾಲಿ ಸ್ನೇಹ ವಾಹಿನಿಯಲ್ಲಿ ಮಾತನಾಡಿದ ಸತ್ಯು ಬಿಜೆಪಿ ನೇತೃತ್ವದ ಸರಕಾರಕ್ಕೆ ಹಿಗ್ಗಾ ಮುಗ್ಗಾ ಬೈದರು. ಪ್ರಧಾನಿ ವಾಜಪೇಯಿಗೂ ಬೈಗಳು ಸಂದಿತು. ಬಡವರನ್ನು ಲೆಕ್ಕಿಸದ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ ಎಂದು ಸತ್ಯು ಹೇಳಿದರು.

ವಾಜಪೇಯಿ ಸರಕಾರಕ್ಕೆ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವುದಕ್ಕೆ ಸತ್ಯು ಕೊಟ್ಟ ಕಾರಣಗಳು -

  • ಗುಜರಾತ್‌ ನರಮೇಧಕ್ಕೆ ನರೇಂದ್ರ ಮೋದಿ ಮಾತ್ರ ಕಾರಣವಲ್ಲ. ಅದಕ್ಕೆ ಪರೋಕ್ಷ ಬೆಂಬಲ ನೀಡಿದ್ದು ಕೇಂದ್ರ ಸರಕಾರ. ಆದ್ದರಿಂದ ಮೊದಲು ಕೇಂದ್ರ ಸರಕಾರವನ್ನು ಕಿತ್ತು ಒಗೆಯಬೇಕು
  • ಟಿಪ್ಪು ಸುಲ್ತಾನರ ಊರು ಮೈಸೂರು. ಆ ಊರಿನಲ್ಲಿಯೇ ಟಿಪ್ಪುವಿಗೆ ಅವಮಾನ ಮಾಡುವ ಭಜರಂಗ ದಳದವರು ಅಪಪ್ರಚಾರ ನಡೆಸುತ್ತಿದ್ದಾರೆ. ಕಿತ್ತೂರು ಚೆನ್ನಮ್ಮನಿಗಿಂತಲೂ ಮುಂಚೆಯೇ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ದೇಶಪ್ರೇಮಿ ಟಿಪ್ಪೂ ಸುಲ್ತಾನ್‌ಗೆ ಅವಮಾನ ಮಾಡುವುದು ಸರಿಯೇ ?
  • ಕೋಮುವಾದವನ್ನು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ರಕ್ಷಿಸುವ ಕೇಂದ್ರ ಸರಕಾರಕ್ಕೆ ಆಳುವ ಹಕ್ಕು ಹೇಗೆ ಉಳಿದುಕೊಳ್ಳುತ್ತದೆ ?
  • ಮನುಷ್ಯತ್ವವೇ ಎಲ್ಲಕ್ಕಿಂತ ದೊಡ್ಡ ಧರ್ಮ. ಹಿಂದೂ, ಮುಸ್ಲಿಂ, ಕ್ರೆೃಸ್ತ ಮತಗಳ್ಯಾವುವೂ ಮನುಷ್ಯತ್ವಕ್ಕಿಂತ ದೊಡ್ಡದಲ್ಲ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X