• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಡ್ಡೇ ದೊಡ್ಡಪ್ಪ -3: ಬಾಂಡ್‌ ಬೇಕೆ ಬಾಂಡ್‌

By Staff
|

Not a penny less, not a penny more !ನಿಮ್ಮ ಬಳಿ ಒಂದಷ್ಟು ಹಣ ಇದೆ ಅಂದ್ಕೊಳ್ಳಿ. ಏನು ಮಾಡುತ್ತೀರಿ ಅದನ್ನು ? ಐದತ್ತು ವರ್ಷ ಅದರ ಅಗತ್ಯ ನಿಮಗಿಲ್ಲ ಅನ್ನುವುದಾದರೆ, ಬಾಂಡ್‌ಗಳನ್ನು ಕೊಳ್ಳಬಹುದು. ಇದು ಬಾಂಡ್‌ಗಳ ಕಾಲ. ಎಲ್ಲೆಡೆ ನೋಡಿ ತರಾವರಿ ಬಾಂಡ್‌ಗಳು. ಏಳು ವರ್ಷಗಳ ಹಿಂದೆ ಕೃಷ್ಣ ಜಲಭಾಗ್ಯ ನಿಗಮದ ಬಾಂಡ್‌ಗಳಿಗೆ ವರ್ಷಕ್ಕೆ ಶೇಕಡಾ 17.5ರ ಬಡ್ಡಿ ಸಿಗುತ್ತಿತ್ತು. ಈಗಲೂ ಅಂಥ ಬಾಂಡ್‌ಗಳಿವೆ. ಆದರೆ ಬಡ್ಡಿದರ ಶೇಕಡಾ 11 ಅಥವಾ 11.5. ಕರ್ನಾಟಕ-ಮಹಾರಾಷ್ಟ್ರಗಳಲ್ಲಿ ಈ ರೀತಿಯ ಬಾಂಡ್‌ಗಳಿವೆ. ಗುಜರಾತ್‌ನಲ್ಲಿ ನರ್ಮದಾ ಬಾಂಡ್‌(ಸಾಗರ ಸರೋವರ)ಇದೆ. ಆ ಬಾಂಡ್‌ಗಳನ್ನು ಬೇಕಾದಾಗ ಮಾರಲೂಹುದು. ಒಳ್ಳೆಯ ಠೇವಣಿ ಸಿಗುತ್ತದೆ.

ಏನೇ ಹೇಳಿ, ಯುವಜನಾಂಗದ ಅರ್ಜೆನ್ಸಿಗೆ ಹೋಲಿಸಿದರೆ ಇವೆಲ್ಲ ಸಪ್ಪೆ ಯೋಜನೆಗಳೇ. ಹರ್ಷದ್‌ ಮೆಹ್ತಾ ಸಾವಿರಾರು ಕೋಟಿ ಮೋಸದ ವ್ಯವಹಾರ ನಡೆಸಿದ್ದರೆ ನಮಗೇಕೆ ಅದು ಅಸಾಧ್ಯ ಎನ್ನುವ ವಿಚಾರ ಒಮ್ಮೆಯಾದರೂ ಯುವ ಜನಾಂಗದ ತಲೆಯಲ್ಲಿ ಮೂಡೇ ಮೂಡುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ, ಮನುಷ್ಯ ಮಾತ್ರದವರಿಗಲ್ಲದೆ ಮಹತ್ವಾಕಾಂಕ್ಷೆ ಮರಗಳಿಗಿರುತ್ತದೇನು? ಆದರೆ ಒಮ್ಮೆಲೇ ಆಕಾಶಕ್ಕೆ ಹಾರುವುದು ಅಪಾಯಕಾರಿ.

ಮತ್ತೆ ಬಾಂಡ್‌ಗಳ ವಿಚಾರಕ್ಕೆ ಬರೋಣ. ಈ ಬಾಂಡ್‌ಗಳಲ್ಲಿ ಅನೇಕ ವಿಧ. ಕೆಲವೇ ವಾರದ ಅವಧಿಯ ಬಾಂಡ್‌ಗಳಿಂದ ಹಿಡಿದು 30 ವರ್ಷಗಳ ದೀರ್ಘ ಅವಧಿಯ ಬಾಂಡ್‌ ಇದೆ. ಬಾಂಡ್‌ಗಳನ್ನು ಕೊನೆಯಲ್ಲಿ ಮಾರಬಹುದು, ಕೊಳ್ಳಬಹುದು.

ಸೆಕ್ಯೂರಿಟಿ ಸಮಾಚಾರ, ಗಮನವಿಟ್ಟು ಓದಿ

ಬೇಕೆಂದೇ ಕೆಲವು- ಸೆಕ್ಯೂರಿಟಿ ವ್ಯವಹಾರವನ್ನು ಕೊನೆಯಲ್ಲಿ ಪ್ರಸ್ತಾಪಿಸಿದ್ದರ ಹಿಂದೆ ಒಂದು ಉದ್ದೇಶವಿದೆ. ಕೆಲವು ಯೋಜನೆಗಳು ಎಲ್ಲರಿಗೂ ಒಗ್ಗುವುದಿಲ್ಲ . ನೀರಿಗಿಳಿಯುವ ಮುನ್ನ ಆಳ ತಿಳಿ ಅನ್ನುವಂತೆ ಹಣ ಹೂಡುವ ಮುನ್ನ ಮುಂದಾಲೋಚನೆ ಇರಬೇಕು. ಉದಾಹರಣೆಗೆ- ಕಾಸು ಮುಳುಗಿದರೆ ತಲೆ ಮೇಲೆ ಕೈ ಹೊತ್ತು ಕುಳಿತು ಸೂರು ನೋಡುವವರು ಷೇರು ವ್ಯವಹಾರಕ್ಕೆ ಇಳಿಯಲೇಬಾರದು.

ಏನಾಗುತ್ತೆ ಒಂದು ಕೈ ನೋಡೇಬಿಡೋಣ ಎನ್ನುವ ಜನ ಷೇರುಪೇಟೆಯಲ್ಲಿ ವ್ಯವಹರಿಸಬಹುದು. ಆದರೆ ಇಲ್ಲೂ ಎಚ್ಚರಿಕೆಯಿಂದಿರಬೇಕು. ನೇರವಾಗಿ ಷೇರುಗಳನ್ನು ಕೊಂಡು-ಮಾರುವುದಕ್ಕೆ ಸಮಯಬೇಕು, ಸಹನೆ ಬೇಕು. ಒಳ್ಳೆಯ-ಒಳ್ಳೆಯವರೆಲ್ಲರ ಷೇರುಗಳನ್ನು ಕೊಂಡು ಸಮತೋಲದ ವ್ಯವಹಾರ ನಡೆಸುವ ಸುಭದ್ರ ಮ್ಯೂಚುಯೆಲ್‌ ಫಂಡ್‌ನ ಯೋಜನೆಗಳು ಬೇಕಾದಷ್ಟಿವೆ. ಕೆಲವು ಲಿಕ್ವಿಡ್‌ ಫಂಡ್‌ ಯೋಜನೆಗಳೂ ಇದೆ. ಕೆಲವೇ ದಿನಗಳ ಅವಧಿಯ ವ್ಯವಹಾರವೂ ಸಾಧ್ಯ.

ಕೊನೆಯದಾಗಿ,
ಹಣ ಹೂಡುವ ಮುನ್ನ ಯೋಜನೆಯ ಬಗೆಗೆ, ಅದು ನಿಮಗೆ ಹೊಂದುವ ಬಗೆಗೆ ಹತ್ತು ಬಾರಿ ಯೋಚಿಸಿ. ದುಡ್ಡಿನ ವಿಷಯ, ಮೈಯ್ಯೆಲ್ಲಾ ಕಣ್ಣಾಗಿದ್ದರೂ ಸಾಲದು. ನಿಮಗೆ ಶುಭವಾಗಲಿ.

(ಶನಿವಾರ, ಜೂ.8 ರಂದು - ಸೈಟು ಸೈ ಚಿನ್ನಕ್ಕೆ ಜೈ)

ಭಾಗ 1 :

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more