ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಉಪರಾಷ್ಟ್ರಪತಿ, ಸಜ್ಜನ ರಾಜಕಾರಣಿ ಬಿ.ಡಿ.ಜತ್ತಿ ನಿಧನ

By Staff
|
Google Oneindia Kannada News

ಬೆಂಗಳೂರು : ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು . ಓರ್ವ ಪುತ್ರಿ ಹಾಗೂ ಮೂವರು ಗಂಡು ಮಕ್ಕಳನ್ನು ಜತ್ತಿ ಅಗಲಿದ್ದಾರೆ.

ಹೃದಯ ತೊಂದರೆಯಿಂದ ಬಳಲುತ್ತಿದ್ದ ಜತ್ತಿ ಅವರನ್ನು ಗುರುವಾರ ಬೆಳಗ್ಗೆ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಶುಕ್ರವಾರ ಬೆಳಗ್ಗೆ ವೇಳೆಗೆ ಜತ್ತಿಯವರ ದೇಹಸ್ಥಿತಿ ವಿಷಮಿಸಿದ್ದು , 12.40 ರ ವೇಳೆಗೆ ಅವರು ನಿಧನರಾದರು ಎಂದು ಆಸ್ಪತ್ರೆಯ ಹೃದಯ ಕೇಂದ್ರದ ಮುಖ್ಯಸ್ಥ ಡಾ.ಎಸ್‌.ಎಸ್‌.ರಮೇಶ್‌ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದ ಜತ್ತಿ , ಸರಳ ಹಾಗೂ ಸಜ್ಜನ ರಾಜಕಾರಣಿ ಎಂದೇ ಪ್ರಸಿದ್ಧರು. ಫಕ್ರುದ್ದೀನ್‌ ಆಲಿ ಅಹಮದ್‌ ಅವರ ನಿಧನದಿಂದ ರಾಷ್ಟ್ರಪತಿ ಸ್ಥಾನ ತೆರವಾದಾಗ, 1977 ನೇ ಇಸವಿ ಫೆಬ್ರವರಿ 11 ರಿಂದ, ಜುಲೈ 25 ರವರೆಗೆ ಹಂಗಾಮಿ ರಾಷ್ಟ್ರಪತಿಯಾಗಿ ಜತ್ತಿ ಕಾರ್ಯ ನಿರ್ವಹಿಸಿದ್ದರು. 1974 ರಿಂದ 1977 ರವರೆಗೆ ಜತ್ತಿ ಉಪ ರಾಷ್ಟ್ರಪತಿಯಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲೂ ಜತ್ತಿ ಸಕ್ರಿಯವಾಗಿ ಭಾಗವಹಿಸಿದ್ದರು.

ಬೆಂಗಳೂರು ಹೊರ ವಲಯದ ಕೆಂಗೇರಿ ಸಮೀಪದ ದೊಡ್ಡಬೆಲೆ ಗ್ರಾಮದಲ್ಲಿನ ಬಸವಾಶ್ರಮದಲ್ಲಿ ಜತ್ತಿ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಅವರ ಪುತ್ರ ಅರವಿಂದ್‌ ತಿಳಿಸಿದ್ದಾರೆ.
(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X