• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರ್ಜಾತಿ ವಿವಾಹ: ತವರಿನವರಿಂದಲೇ ಮಗಳು-ಅಳಿಯನ ಕೊಲೆ

By Staff
|

ಬೆಂಗಳೂರು : ಅಂತರ್ಜಾತಿ ವಿವಾಹವಾಗಿದ್ದ ದಂಪತಿಯನ್ನು ಮೃತ ಮಹಿಳೆಯ ತಂದೆ ಮತ್ತು ಅಣ್ಣಂದಿರೇ ಕೊಚ್ಚಿ ಕೊಲೆಮಾಡಿರುವ ದಾರುಣ ಘಟನೆ ನಗರದ ಕೋಡಿ ಹಳ್ಳಿಯಲ್ಲಿ ನಡೆದಿದೆ.

ಬುಧವಾರ ರಾತ್ರಿ ಪಾಲ್‌ ರಾಜ್‌(28), ಮತ್ತು ಸಮೀನಾ(22) ಮತಾಂಧರ ಆಕ್ರೋಶಕ್ಕೆ ತುತ್ತಾಗಿದ್ದು, ಜೀವನಭೀಮಾ ನಗರದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಮೀನಾಳ ತಂದೆ ವಹೀದ್‌ ಖಾನ್‌, ಸಹೋದರ ಆಸ್ಗರ್‌, ನಾಸಿರ್‌ ಮತ್ತು ಇತರ ಇಬ್ಬರು ಮಚ್ಚು ಮತ್ತು ಲಾಂಗ್‌ಗಳಿಂದ ದಂಪೆತಿ ಮೇಲೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ.

ದಂಪತಿಗೆ ಒಂದು ಪುಟ್ಟ ಹೆಣ್ಣುಮಗುವಿದೆ. ರಾತ್ರಿ ಅಪ್ಪ ಅಮ್ಮನ ರೋದನ ಕೇಳಿ ಎಚ್ಚೆದ್ದ ಮಗು ಬರ್ಬರ ದೃಶ್ಯವನ್ನು ನೋಡಿ ಕಿರುಚಿಕೊಂಡಾಗ ಮತಾಂಧರ ಗುಂಪು ಆ ಮಗುವನ್ನು ಅಪಹರಿಸಿ ಪರಾರಿಯಾಗಿದೆ. ಕಾರಿನಲ್ಲಿ ಹೊಸಕೋಟೆ ಕಡೆಗೆ ಹೋಗುತ್ತಿದ್ದಾಗ ಕೋಡಿ ಗ್ರಾಮದ ಕೆರೆ ಬಳಿ ಕಾರು ಅಪಘಾತಕ್ಕೀಡಾಯಿತು. ನಂತರ ಮಗುವನ್ನು ದ್ವಿಚಕ್ರವಾಹನದಲ್ಲಿದ್ದವರಿಗೆ ಹಸ್ತಾಂತರಿಸಿ ಉಳಿದವರು ಓಡತೊಡಗಿದರು. ಗ್ರಾಮಸ್ಥರಿಂದ ಸುದ್ದಿ ತಿಳಿದ ಪೊಲೀಸರು ಸಲೀಂ (26) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಪಾಲ್‌ರಾಜ್‌ ಕ್ರಿಶ್ಚಿಯನ್‌ ಹುಡುಗನಾಗಿದ್ದು ಸಮೀನಾ ಮುಸ್ಲಿಂ ಮತದವಳಾಗಿದ್ದಳು. ಅಂತರ್ಜಾತಿಯ ವಿವಾಹವೇ ಈ ದುರಂತಕ್ಕೆ ಎಡೆಮಾಡಿಕೊಟ್ಟಿದೆ. ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಳ್ಳಲು ಪಾಲ್‌ರಾಜ್‌ ನಿರಾಕರಿಸಿರುವುದು ಸಮೀನಾಳ ತವರಿನ ಕಡೆಯವರಿಗೆ ನುಂಗಲಾರದ ತುತ್ತಾಗಿತ್ತು. ಗಂಡ ಹೆಂಡತಿ ಇಬ್ಬರನ್ನೂ ಕೊಲ್ಲುವ ಮೂಲಕ ಸಮೀನಾ ಕುಟುಂಬದವರು ತಮ್ಮ ಎಲ್ಲ ಅಸಹನೆಯನ್ನೂ ಕಕ್ಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more