ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲಿಯೇ ಉಡುಪಿಯಲ್ಲಿ ಏಡ್ಸ್‌ ರೋಗಿಗಳ ಪುನರ್ವಸತಿ ಕೇಂದ್ರ

By Staff
|
Google Oneindia Kannada News

ಉಡುಪಿ : ನಗರದಲ್ಲಿ ಏಡ್ಸ್‌ ರೋಗಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲು ಬೆಂಗಳೂರಿನ ಫ್ರೀಡಂ ಫೌಂಡೇಷನ್‌ ಮುಂದೆ ಬಂದಿದೆ.

ಗುರುವಾರ ಶಾಸಕ ಯು.ಆರ್‌. ಸಭಾಪತಿ ಈ ವಿಷಯವನ್ನು ತಿಳಿಸಿದ್ದಾರೆ. ರಾಜ್ಯಸಭಾ ಕಾರ್ಯದರ್ಶಿ ಆಸ್ಕರ್‌ ಫರ್ನಾಡಿಸ್‌ ಅವರ ಕೋರಿಕೆಯ ಮೇರೆಗೆ ಉಡುಪಿ ಪರಿಸರದಲ್ಲಿ ಎಚ್‌ಐವಿ ಮತ್ತು ಏಡ್ಸ್‌ ರೋಗಿಗಳ ಪುನರ್ವಸತಿ ಕೇಂದ್ರವನ್ನು ಸದ್ಯದಲ್ಲೇ ತೆರೆಯಲಾಗುವುದು. ಪುನರ್ವಸತಿ ಕೇಂದ್ರದಲ್ಲಿ ಏಡ್ಸ್‌ ರೋಗಿಗಳನ್ನು ಸಮಾನ ದೃಷ್ಟಿಯಲ್ಲಿ ನೋಡುವುದರಿಂದ ಅವರಿಗೆ ಮಾನಸಿಕ ನೆಮ್ಮದಿ ದೊರೆಯುವುದು ಸಾಧ್ಯವಾಗುತ್ತದೆ ಎಂದು ಸಭಾಪತಿ ಅಭಿಪ್ರಾಯಪಟ್ಟರು.

ಫ್ರೀಡಂ ಫೌಂಡೇಷನ್‌ ಈಗಾಗಲೇ ಹೆನ್ನೂರು ಗ್ರಾಮದಲ್ಲಿ ಸರಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಎಚ್‌ಐವಿ ಮತ್ತು ಏಡ್ಸ್‌ ರೋಗಿಗಳ ಪುನರ್ವಸತಿ ಕೇಂದ್ರ ಹಾಗೂ ಮಾದಕ ದ್ರವ್ಯ ವ್ಯಸನಿಗಳ ಕೇಂದ್ರವನ್ನು ನಡೆಸುತ್ತಿದೆ. ಈ ಕೇಂದ್ರದಲ್ಲಿ 9 ತಿಂಗಳ ಮಗುವಿನಿಂದ ಹಿಡಿದು 60 ವರ್ಷದ ವೃದ್ಧ ಏಡ್ಸ್‌ ರೋಗಿಗಳೂ ಇದ್ದಾರೆ. ಅವರಿಗೆ ತರಬೇತಿ, ಶಿಕ್ಷಣ ಮತ್ತು ವೈದ್ಯಕೀಯ ನೆರವನ್ನೂ ಕೇಂದ್ರದಲ್ಲಿ ನೀಡಲಾಗುತ್ತಿದೆ ಎಂದು ಸಭಾಪತಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X