ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘14 ಉಗ್ರರ ಒಪ್ಪಿಸುವವರೆಗೆ ಗಡಿ ತಣ್ಣಗಾಗಿಸುವುದು ಸುತಾರಾಂ ಇಲ್ಲ’

By Staff
|
Google Oneindia Kannada News

ಬೆಂಗಳೂರು : ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣ ದಮನ ಮಾಡುವುದರ ಜೊತೆಗೆ ಭಾರತಕ್ಕೆ ಬೇಕಿರುವ 14 ಉಗ್ರರನ್ನು ಪಾಕಿಸ್ತಾನ ಒಪ್ಪಿಸುವವರೆಗೆ ಭಾರತ ಮತ್ತು ಪಾಕಿಸ್ತಾನದ ಗಡಿ ತಣ್ಣಗಾಗುವ ಅಥವಾ ಸೌಹಾರ್ದ ಸ್ಥಾಪನೆಯ ಪ್ರಕ್ರಿಯೆಯ ಮಾತೇ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಪರ್ನಾಂಡಿಸ್‌ ಹೇಳಿದ್ದಾರೆ.

ಲಘು ಯುದ್ಧ ವಿಮಾನ ಪ್ರಾಯೋಗಿಕ ಹಾರಾಟದ ವೀಕ್ಷಕರಾಗಿದ್ದ ಫರ್ನಾಂಡಿಸ್‌ ಮಂಗಳವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ಪಾಕಿಸ್ತಾನದ ಜೊತೆ ಸೌಹಾರ್ದ ಬೆಸೆಯುವ ಮಾತಿಗೆ ಚಾಲನೆ ಕೊಡಲು ಭಾರತ ಮುಂದಾಗಿದೆ ಎಂಬುದು ವದಂತಿಯಷ್ಟೇ ಎಂದ ಫರ್ನಾಂಡಿಸ್‌, ಸುದ್ದಿಗಾರರ ಪ್ರಶ್ನೆಗಳಿಗೆ ಕೊಟ್ಟ ಬಹುತೇಕ ಉತ್ತರಗಳು ಮುಗುಮ್ಮಾಗಿದ್ದವು...

ಭಾರತದ ಬೇಡಿಕೆಗಳಿಗೆ ಪಾಕಿಸ್ತಾನ ಸ್ಪಂದಿಸಲು ಎಷ್ಟು ದಿನಗಳವರೆಗೆ ಕಾಯುತ್ತೀರಿ?
ಎಷ್ಟು ದಿನ ಕಾಯುವುದು ಅವಶ್ಯಕವೋ ಅಷ್ಟು ದಿನ.

ಪಾಕಿಸ್ತಾನದ ವಿರುದ್ಧ ಮಿಲಿಟರಿ ಛೂಬಾಣವನ್ನು ಭಾರತ ಹೆದೆಗೇರಿಸಿಕೊಂಡು ನಿಂತಿದೆಯೇ?
ಗಡಿಯಾಚೆಗಿನ ಭಯೋತ್ಪಾದಕತೆ ನಿಲ್ಲದಿದ್ದರೆ ಭಾರತ ತೊಂದರೆಗೆ ಸಿಲುಕುತ್ತದೆ. ಅದನ್ನು ನಾವೇ ಪರಿಹರಿಸಬೇಕು.

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಶಿಬಿರಗಳನ್ನು ಮುಚ್ಚಲು ಪಾಕಿಸ್ತಾನ ಆದೇಶಿಸಿದೆಯಂತೆ?
ಪಾಕಿಸ್ತಾನ ಏನೇನೂ ಬದಲಾಗಿಲ್ಲ. ನಮ್ಮ ವ್ಯಾಪ್ತಿಯ ಪ್ರದೇಶಕ್ಕೆ ನುಗ್ಗಲು ಉಗ್ರರ ಬೆನ್ನು ತಟ್ಟುವುದನ್ನು ಮುಂದುವರೆಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X