ಬಾಲ್ಡ್‌ವಿನ್ ಬಾಲೆ ಸಾವಿನ ಸತ್ಯಶೋಧನೆ : ತನಿಖೆಗೆ ವಿಶ್ವನಾಥ್ ಆದೇಶ
ಬೆಂಗಳೂರು : ಬಾಲ್ಡ್‌ವಿನ್ ಶಾಲೆಯ ಪಿಟಿ ಟೀಚರ್ ಕೊಟ್ಟ ಶಿಕ್ಷೆಯಿಂದಲೇ ತಮ್ಮ ಮಗಳು ಭಾಗ್ಯಶ್ರೀ ಗುಲೇಚಾ ಸತ್ತಿರುವುದು ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಲಲಿತ್ ಗುಲೇಚಾ ದೂರು ದಾಖಲಿಸಿರುವ ಬೆನ್ನಲ್ಲೇ ಪ್ರಕರಣದ ತನಿಖೆಗೆ ಸರ್ಕಾರ ಗುರುವಾರ ಆದೇಶ ಕೊಟ್ಟಿದೆ.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಸುದ್ದಿಗಾರರಿಗೆ ಸಮಗ್ರ ತನಿಖೆ ನಡೆಸುವ ತೀರ್ಮಾನವನ್ನು ಪ್ರಕಟಿಸಿದರು. ಪ್ರಕರಣದ ಬಗ್ಗೆ ಸಾಕಷ್ಟು ಅಂತೆ ಕಂತೆಗಳಿವೆ. ಖಚಿತವಾಗಿ ನಡೆದಿರುವುದೇನು ಎಂಬುದನ್ನು ಪತ್ತೆ ಹಚ್ಚಲು ತನಿಕೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕೂಲಂಕಷ ತನಿಖೆ ನಂತರ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಅದರನ್ವಯ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದರು.
ನನ್ನ ಮಗಳು ಭಾಗ್ಯಶ್ರೀ ಪಿಟಿ ಮಾಡುವಾಗ ಸತ್ತಿಲ್ಲ. ಮೆಟ್ಟಿಲು ಹತ್ತಿಳಿಯುವ ಶಿಕ್ಷೆ ಅನುಭವಿಸುವಾಗ, ಮೆಟ್ಟಿಲು ಜಾರಿ ಬಿದ್ದು ಮೃತ ಪಟ್ಟಿದ್ದಾಳೆ ಎಂದು ಲಲಿತ್ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಆರೋಪಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...