• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಡ್ಡೇ ದೊಡ್ಡಪ್ಪ , ದುಡ್ಡಿಡುವುದು ಎಲ್ಲಪ್ಪಾ ?

By Staff
|

*ವಿಚಾರ ಪ್ರಿಯ

Not a penny less, not a penny more !ದುಡ್ಡು ಇಡುವುದು ಎಲ್ಲಿ ?

ಇದೆಂಥ ಪ್ರಶ್ನೆ , ತಿಜೋರಿಯಿಲ್ಲವಾ ಎಂದು ಮೂಗು ಮುರಿಯುವ ಮುನ್ನ ಶೇಷಾದ್ರಿಪುರಂ ನಿವಾಸಿ ರಾಮಮೂರ್ತಿ ಅವರ ಕಥೆ ಕೇಳಿ. ಆತ್ಮಹತ್ಯೆ ಮಾಡಿಕೊಂಡ ತಿಂಗಳ ಹಿಂದಷ್ಟೇ ರಾಮಮೂರ್ತಿ ಐವತ್ತೊಂಭತ್ತು ದಾಟಿ ಅರವತ್ತಕ್ಕೆ ಕಾಲಿಟ್ಟಿದ್ದರು. ಮನೆಯಲ್ಲಿ ಹೃದಯ ಬೇನೆಯಿಂದ ಬಳಲುತ್ತಿದ್ದ ಪತ್ನಿಯಿದ್ದಳು. ಡಬ್ಬಲ್‌ ಡಿಗ್ರಿ ತಗೊಂಡು ಕೆಲಸಕ್ಕೆ ಅರ್ಜಿ ಹಾಕುವುದೇ ಉದ್ಯೋಗವಾಗಿದ್ದ ಮೂವತ್ತೆೈದರ ಹೊಸಿತಿಲಿನ ಮಗನಿದ್ದ . ವರ ಪರೀಕ್ಷೆಗಳಲ್ಲಿ ಸತತವಾಗಿ ಫೇಲಾಗುತ್ತ ಭಾವನೆಗಳನ್ನೇ ಕಳಕೊಂಡ ಕೆಟ್ಟ ಅದೃಷ್ಟದ ಸುಂದರಿ ಮಗಳಿದ್ದಳು. ಈ ಎಲ್ಲ ಜವಾಬ್ದಾರಿಗಳಿದ್ದರೂ ರಾಮಮೂರ್ತಿ ವಿಷ ಕುಡಿದರು.

ಸತ್ತು ರಾಮಮೂರ್ತಿಯೇನೋ ಬಚಾವಾದರು ; ನರಕದ ಪಾಲಾದದ್ದು ಅವರ ಕುಟುಂಬ. ನಾವಿಕನಿಲ್ಲದ ನೌಕೆಯಂತೆ ಸಂಸಾರ ಕಂಗೆಟ್ಟಿತು. ಇಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂಥಾದ್ದು ರಾಮಮೂರ್ತಿಯವರಿಗೇನಾಗಿತ್ತು ? ಇಂದಲ್ಲಾ ನಾಳೆ ಮಗನಿಗೊಂದು ಕೆಲಸ ಸಿಗುವ ಬಗ್ಗೆ ಅವರಿಗೆ ಖಾತರಿಯಿತ್ತು . ಮಗಳಿಗೊಂದು ಮದುವೆ ಮಾಡುವ ಕುರಿತೂ ಅವರಿಗೆ ಭರವಸೆ ಇತ್ತು . ಆದರೂ, ಅವರು ವಿಷ ಕುಡಿದರು. ಅವರ ಎಲ್ಲ ನಂಬಿಕೆಗಳ ಧಾತುವೇ ಏಕಾಏಕಿ ನುಚ್ಚುನೂರಾಗಿತ್ತು . ಜೀವನಿವಿಡೀ ಪೈಸೆಗೆ ಪೈಸೆ ಕೂಡಿಟ್ಟಿದ್ದ ಗಂಟು ಕೈ ತಪ್ಪಿದರೆ ಇಳಿ ಜೀವಕ್ಕೆ ಸಹಿಸಿಕೊಳ್ಳುವ ತಾಕತ್ತು ಎಲ್ಲಿಂದ ಬರಬೇಕು?

ಅವರು ಮಾಡಿದ್ದೊಂದೇ ತಪ್ಪು . ಹೆಚ್ಚಿನ ಬಡ್ಡಿಗೆ ಆಸೆ ಪಟ್ಟರು. ತಮ್ಮೆಲ್ಲ ಉಳಿತಾಯದ ಹಣವನ್ನು ಖಾಸಗಿ ಹಣಕಾಸು ಸಂಸ್ಥೆ ಯಲ್ಲಿ ಠೇವಣಿಯಿರಿಸಿದರು. ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಅನ್ನುವಂತೆ ರಾತ್ರೋರಾತ್ರಿ ಸಂಸ್ಥೆ ಕಣ್ಮರೆಯಾಗಿತ್ತು , ಇದ್ದದ್ದು ಬೋರ್ಡು, ಬಿಲ್ಡಿಂಗು ಮಾತ್ರ. ರಾಮಮೂರ್ತಿ ಮಾತ್ರವಲ್ಲ , ಸಾವಿರಾರು ಮಂದಿ ಕಾಸು ಕಳಕೊಂಡರು. ಠೇವಣಿ ಇಟ್ಟವರಲ್ಲಿ - ಗಂಡನಿಗೆ ಗೊತ್ತಾಗದಂತೆ ಹಣ ಉಳಿಸಿದ್ದ ಗೃಹಿಣಿಯರು, ಮಗಳ ಮದುವೆಗಾಗಲಿ, ಮಗನ ಭವಿಷ್ಯಕ್ಕಾಗಲಿ ಎಂದು ಹಣ ಹೂಡಿದ ಅಪ್ಪಂದಿರು, ನಿವೃತ್ತಿ ಹಣದಲ್ಲಿ ಚಿಕ್ಕಾಸೂ ಖರ್ಚು ಮಾಡದೆ ಎಲ್ಲವನ್ನೂ ತಂದು ಠೇವಣಿಯಿಟ್ಟ ಇಳಿ ವಯಸ್ಸಿನವರು.. ಹೀಗೆ ಎಲ್ಲ ವರ್ಗದ ಜನರಿದ್ದರು. ಕೋಟಿಗಟ್ಟಲೆ ಮುಂಡಾಮೋಚಿದ ಹಣಕಾಸು ಸಂಸ್ಥೆಯವನು ತಲೆ ಮರೆಸಿಕೊಂಡ. ಹಣ ಕಳಕೊಂಡವರಿಗೆ ಜೀವವೇ ಕಳೆದುಹೋದಂತೆನಿಸಿತು.

ಇದೇನು ಮೊದಲಲ್ಲ . ಇಂಥ ವಂಚನೆ ಪ್ರಕರಣಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಆದರೂ ಜನ ನಂಬುತ್ತಾರೆ, ಮೋಸ ಹೋಗುತ್ತಾರೆ. ಕೈ ಸುಟ್ಟುಕೊಂಡಾಗಲೇ ಜ್ಞಾನೋದಯವಾಗುವುದು. ಆ ಕಾರಣದಿಂದಲೇ ದುಡ್ಡನ್ನು ಎಲ್ಲಿಟ್ಟರೆ ಕ್ಷೇಮ. ಅಸಲಿಗೆ ಮೋಸವಾಗಬಾರದು, ಬಡ್ಡಿಗೆ ಕೊರೆಯಾಗಬಾರದು. ಜಾಣತನ ಇರುವುದೇ ಇಲ್ಲಿ .
ಹೇಳಿ, ನಿಮ್ಮ ದುಡ್ಡು ಎಲ್ಲಿಡುತ್ತೀರಿ?
(ಗುರುವಾರ, ಜೂ.6 ರಂದು - ನೆಮ್ಮದಿಯ ಬದುಕು....ಮಕ್ಕಳ ಭವಿಷ್ಯ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more