ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್‌ ರೆಸಿಡೆನ್ಸಿಯಲ್ಲಿ ಇಕೋ-ಫ್ರೆಂಡ್ಲಿ ನೆನಪು, ಪರಿಸರ ದಿನಾಚರಣೆ !

By Staff
|
Google Oneindia Kannada News

ಸುಂದರ ನಗರಿ ಬೆಂಗಳೂರಿನಲ್ಲೀಗ ಪರಿಸರದ ಗುಂಗು. ನೀವು ತಿನ್ನುವ ಯಾವುದೋ ಆಹಾರದಿಂದ, ನೀವುಬಳಸುವ ವಸ್ತುಗಳಿಂದ.. ಮಲಗುವ ಹಾಸಿಗೆಯಿಂದಾಗಿ ಪರಿಸರಕ್ಕೇನು ತೊಂದರೆಯಾಗುತ್ತದೆ ಅಂತ ನೀವೆಂದಾದರೂ ಯೋಚನೆ ಮಾಡಿದ್ದುಂಟಾ... ?

ದಿನನಿತ್ಯದ ಜಂಜಾಟವನ್ನೇ ನಿಭಾಯಿಸಲು ಹೆಣಗಾಡುತ್ತಿರುವಾಗ ಬೇರೆಯವರಿಗೆ ತೊಂದರೆಯಾಗದಂತೆ ಜೀವಿಸಿದರೆ ಸಾಕಪ್ಪಾ ಅನ್ನುವ ಧೋರಣೆಯಿಂದ ಬದುಕುವವರೇ ಹೆಚ್ಚು. ಆದರೆ ನಮಗೆ ಗೊತ್ತಿಲ್ಲದ ಹಾಗೆಯೇ ಎಲ್ಲಿಯೋ ಎಡವಟ್ಟಾಗುತ್ತಿರುತ್ತದೆ. ನೀವು ಕಸದ ತೊಟ್ಟಿಗೆ ಸುರಿದಿರುವ ಪ್ಲಾಸ್ಟಿಕ್‌ ರಾಶಿಯನ್ನು ತಿಂದು ದನವೊಂದು ಸತ್ತು ಹೋಗಿರಬಹುದು ! ಇದಕ್ಕೆಲ್ಲಾ ನಾವು ಜವಾಬ್ದಾರಿ ಅಂತ ಅಂದುಕೊಂಡರೆ ದಿನ ಕಳೆಯುವುದು ಹೇಗೆ ಸ್ವಾಮಿ.. ಆದಿ ಕಾಲದ ಋಷಿಗಳ ಹಾಗೆ ಗಮನ ಪ್ರಾಯಶ್ಚಿತ್ತ ಮಾಡುತ್ತಾ ಕೂರೋಣವೇ...

ಆದರೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ತಾಜ್‌ ರೆಸಿಡೆನ್ಸಿಯಲ್ಲಿ ಪರಿಸರ ಕಾಳಜಿಯ ಮಾತು ಕೇಳಿ ಬರುತ್ತಿದೆ. ಇಕೋ- ಫ್ರೆಂಡ್ಲಿಯಾಗಿರಿ ಎಂಬುದು ಅವರ ಸಂದೇಶ. ಎನ್ವಿರೋ-ಎಗ್ಸಿಬಿಷನ್‌ನ್ನು ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಲಾಗಿದೆ. ಪ್ರದರ್ಶನದ ಮುಖ್ಯ ಧ್ಯೇಯ ವಿಶ್ವ ಜಾಲದೊಂದಿಗೆ ಸಂಪರ್ಕ ಹೊಂದುವುದು !

ತೆಂಗಿನ ನಾರಿನ ಕಾರ್ಪೆಟ್‌ಗಳನ್ನು ಬಳಿಸಿದರೆ ಚೆಂದಕ್ಕೆ ಚೆಂದವೂ ಆಯಿತು. ಮಣ್ಣಿನೊಂದಿಗೆ ಮಣ್ಣಾಗುವ ತೆಂಗಿನ ನಾರಿನಿಂದ ಯಾರಿಗೂ ಹಾನಿಯಿಲ್ಲ. ಪ್ಲಾಸ್ಟಿಕ್‌ ಅಥವಾ ರಬ್ಬರಿನ ಕಾರ್ಪೆಟ್ಟುಗಳಾದರೆ ಅವು ಹರಿದು ಹೋದ ನಂತರ ಎಲ್ಲಿ ಬಿಸಾಡೋಣ ಹೇಳಿ... ಕೊಳೆತು ಹೋಗದ ಸಿಂಥೆಟಿಕ್‌ ಬಟ್ಟೆಗಳನ್ನು ಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿ... ಹೀಗೆ ಪ್ಲಾಸ್ಟಿಕ್‌ ಮೊರೆ ಹೋಗುವುದನ್ನೂ ತಪ್ಪಿಸಿ ಎಂಬ ಸಂದೇಶಗಳನ್ನು ಸಾರುವ ಜೊತೆಗೆ ಈ ಪ್ರದರ್ಶನದಲ್ಲಿ ಕೊಳ್ಳುವ ಅವಕಾಶವೂ ಇದೆ. ಮಂಗಳವಾರ ಸಂಜೆ ಪ್ರದರ್ಶನ ಉದ್ಘಾ-ಟ-ನೆ. ಈ ಸಂದ-ರ್ಭ-ದ-ಲ್ಲಿ ಲೀಲಾ ಪ್ಯಾಲೇಸ್‌ಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ಮೈಸೂರು ತೋಟಗಾರಿಕಾ ಸಮಾಜ ಶಕ್ತಿ ಉಳಿತಾಯ ಮಾಡುವ ದೀಪಗಳಂತಹ ಪರಿಸರ ಸ್ನೇಹೀ ವಸ್ತುಗಳನ್ನು ತಯಾರಿಸಿದ್ದು ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X