ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್‌ಸ್ಟಂಟ್‌ : ಹೃದ್ರೋಗ ಚಿಕಿತ್ಸೆಯ ಕ್ಷೇತ್ರದಲ್ಲಿ ಕ್ರಾಂತಿ

By Staff
|
Google Oneindia Kannada News

ನವದೆಹಲಿ : ಹೃದ್ರೋಗ ಚಿಕಿತ್ಸೆಯ ಕ್ಷೇತ್ರದಲ್ಲಿ ಕ್ರಾಂತಿಕಾರ ಆವಿಷ್ಕಾರವೆನಿಸಿರುವ ‘ ಸ್ಮಾರ್ಟ್‌ ಸ್ಟೆಂಟ್‌’ ಎಂಬ ಉಪಕರಣವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಹೃದಯಕ್ಕೆ ರಕ್ತ ಪೂರೈಸುವ ಕೊರೋನರಿ ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಿಂದ ರಕ್ತ ಹರಿದಾಡುವುದು ಕಷ್ಟವಾಗುತ್ತದೆ. ಈ ಕೊಬ್ಬನ್ನು ತೆಗೆಯಲು ಈವರೆಗೆ ಆ್ಯಂಜಿಯೋಪ್ಲಾಸ್ಟಿ ಎಂಬ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತಿತ್ತು. ಈ ಚಿಕಿತ್ಸೆಯಲ್ಲಿ ಬಲೂನಿನಂಥ ವಸ್ತುವನ್ನು ರಕ್ತನಾಳದೊಳಗೆ ತಳ್ಳಿ ಅಡಚಣೆಯನ್ನು ನಿವಾರಿಸಲಾಗುತ್ತಿತ್ತು.

ಹೊಸ ಸ್ಮಾರ್ಟ್‌ ಸ್ಟೆಂಟ್‌ ಉಪಕರಣ ಔಷಧ ಲೇಪನವನ್ನು ಹೊಂದಿರುವುದರಿಂದ ರಕ್ತನಾಳಗಳಲ್ಲಿ ಮತ್ತೆ ಅಡಚಣೆ ಉಂಟಾಗುವ ಸಂಭವ ಕಡಿಮೆ ಎಂದು ಹೃದ್ರೋಗ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಡಾ. ಉಪೇಂದ್ರ ಕೌಲ್‌ ಅಭಿಪ್ರಾಯಪಡುತ್ತಾರೆ.

ಜೂನ್‌ 3ರಂದು ಸ್ಮಾರ್ಟ್‌ಸ್ಟಂಟ್‌ನ್ನು ಪ್ರಪಂಚದಾದ್ಯಂತ ಬಿಡುಗಡೆ ಗೊಳಿಸಲಾಗುತ್ತದೆ. ಇದು ಹೃದ್ರೋಗ ಚಿಕಿತ್ಸೆಯ ದಿಕ್ಕನ್ನೇ ಬದಲಿಸುವಂಥ ಆವಿಷ್ಕಾರವಾಗಿದೆ ಎಂದು ಕೌಲ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X