ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೊಲೊ ಗ್ರೂಪ್ಸ್‌ನಿಂದ ದೇಶದ ವಿವಿಧಭಾಗಗಳಲ್ಲಿ 250 ಆಸ್ಪತ್ರೆ

By Staff
|
Google Oneindia Kannada News

ಬೆಂಗಳೂರು : ಅಪೊಲೊ ಆಸ್ಪತ್ರೆಯ ಸಮೂಹಕ್ಕೆ ಸೇರಿದ ಅಪೊಲೊ ಹೆಲ್ತ್‌ ಅಂಡ್‌ ಲೈಫ್‌ಸ್ಟೈಲ್‌ ಲಿಮಿಟೆಡ್‌(ಎಎಚ್‌ಎಲ್‌ಎಲ್‌) ದೇಶಾದ್ಯಂತ ಆಸ್ಪತ್ರೆಗಳನ್ನು ಆರಂಭಿಸಲು ಉದ್ದೇಶಿಸಿದೆ.

ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅಪೊಲೊ ಸ್ವಾಮ್ಯಕ್ಕೆ ಸೇರಿದ 250 ಆಸ್ಪತ್ರೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಅನ್ವಯ ಡಿಸೆಂಬರ್‌ ವೇಳೆಗೆ 20 ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ. ಈ ಕ್ಲಿನಿಕ್‌ಗಳು ದಿನ ನಿತ್ಯದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿವೆ ಎಂದು ಎಎಚ್‌ಎಲ್‌ಎಲ್‌ನ ಸಿಇಒ ರತನ್‌ ಜಲನ್‌ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಯಾಂದು ಆಸ್ಪತ್ರೆ ಸ್ಥಾಪನೆಗೆ 2 ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಎಲ್ಲ ರೀತಿಯ ಅತ್ಯಾಧುನಿಕ ಸವಲತ್ತು, ತಂತ್ರಜ್ಞಾನವನ್ನು ಈ ಆಸ್ಪತ್ರೆಗಳು ಹೊಂದಿದ್ದು- ಕೊಲಂಬೊ, ಬಾಂಗ್ಲಾದೇಶ್‌, ಸಿಂಗಪುರ ಹಾಗೂ ಮಧ್ಯಪ್ರಾಚ್ಯಗಳಲ್ಲೂ ಅಪೊಲೊ ಆಸ್ಪತ್ರೆಗಳನ್ನು ಸ್ಥಾಪಿಸಲು ಮಾತುಕತೆ ನಡೆಯುತ್ತಿವೆ ಎಂದು ಜಲನ್‌ ಹೇಳಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X