ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್‌ಫಿಕ್ಸಿಂಗ್‌ ಐಕಾನ್‌ ಹ್ಯಾನ್ಸೀ ಕ್ರೊನಿಯೆವಿಮಾನ ಅಪಘಾತಕ್ಕೆ ಬಲಿ

By Staff
|
Google Oneindia Kannada News

Hansie Cronjeಜೊಹಾನ್ಸ್‌ಬರ್ಗ್‌: ಮ್ಯಾಚ್‌ಫಿಕ್ಸಿಂಗ್‌ ಹಗರಣದ ಬಲೆಗೆ ಬಿದ್ದು ಕ್ರಿಕೆಟ್‌ ಕ್ಷೇತ್ರದಿಂದ ಅಜೀವ ನಿಷೇಧಕ್ಕೆ ಒಳಗಾಗಿದ್ದ ದಕ್ಷಿಣ ಅಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೊನಿಯೆ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಜೊಹಾನ್ಸ್‌ಬರ್ಗ್‌ನ ಹೊರವಲಯದಲ್ಲಿ ಶನಿವಾರ ಬೆಳಗ್ಗೆ ಕ್ರೊನಿಯೆ ಪ್ರಯಾಣಿಸುತ್ತಿದ್ದ ವಿಮಾನ ಪರ್ವತವೊಂದಕ್ಕೆ ಅಪ್ಪಳಿಸಿದಾಗರಿ ಈ ದುರಂತ ಸಂಭವಿಸಿದೆ. ಜಾರ್ಜ್‌ಗೆ ಹೊರಟಿದ್ದ ವಿಮಾನ ಹವಾಮಾನ ವೈಪರೀತ್ಯದಿಂದ ಜಾರ್ಜ್‌ನಲ್ಲಿ ಇಳಿಯುವುದು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಕ್ರೊನಿಯೆ ಮೃತರಾಗಿರುವುದನ್ನು ದಕ್ಷಿಣ ಆಫ್ರಿಕಾ ಕ್ರೀಡಾ ಸಚಿವಾಲಯದ ವಕ್ತಾರರು ದೃಢಪಡಿಸಿದ್ದಾರೆ.

32 ವರ್ಷ ವಯಸ್ಸಿನ ಕ್ರೊನಿಯೆ 1992ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಆಡುವ ಮೂಲಕ ಕ್ರಿಕೆಟ್‌ ಲೋಕ ಪ್ರವೇಶಿಸಿದ್ದರು. ಆರು ವರ್ಷಗಳವರೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿ ಭಾರತ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಕ್ರೊನಿಯೆ ವಿರುದ್ಧ ನವದೆಹಲಿಯ ಪೊಲೀಸರು ಕ್ರಿಕೆಟ್‌ ಮೋಸದಾಟದ ಆರೋಪ ಹೊರಿಸಿದ್ದರು.

ಈ ಹಿನ್ನೆಲೆಯಲ್ಲಿ ಕ್ರೊನಿಯೆ ಅವರ ಮೇಲೆ ಅಜೀವ ನಿಷೇಧ ಹೇರಲಾಗಿತ್ತು. ನಿಷೇಧವನ್ನು ವಿರೋಧಿಸಿ ಕಾನೂನು ಸಮರಕ್ಕೆ ಇಳಿದಿದ್ದ ಕ್ರೊನಿಯೆ ಸಮರ ಮುಗಿಯುವ ಮೊದಲೇ ಬದುಕಿಗೆ ವಿದಾಯ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X