ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋಗೆ ಸಿಎಂಎಂಐನ 1.1 ಆವೃತ್ತಿಯ ಲೆವೆಲ್‌-5 ಶ್ರೇಣಿ

By Staff
|
Google Oneindia Kannada News

ಬೆಂಗಳೂರು : ದೇಶೀ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾದ ವಿಪ್ರೋದ ಜಾಗತಿಕ ಮಾಹಿತಿ ತಂತ್ರಜ್ಞಾನ ಸೇವಾ ವಿಭಾಗ, ಸಿಎಂಎಂಐನ 1.1 ಆವೃತ್ತಿಯ ಲೆವೆಲ್‌-5 ಶ್ರೇಣಿ ಮನ್ನಣೆಗೆ ಪಾತ್ರವಾಗಿದೆ.

ಸಿಎಂಎಂಐನ 1.1 ಆವೃತ್ತಿಯ ಲೆವೆಲ್‌-5 ಶ್ರೇಣಿ ಪಡೆದ ವಿಶ್ವದ ಮೊಟ್ಟದ ಮೊದಲ ಕಂಪನಿ ಎನ್ನುವ ಗೌರವ ವಿಪ್ರೋ ಟೆಕ್ನಾಲಜೀಸ್‌ಗೆ ಸಂದಿದೆ ಎಂದು ವಿಪ್ರೋ ಟೆಕ್ನಾಲಜೀಸ್‌ನ ಮುಖ್ಯ ಗುಣಮಟ್ಟ ಅಧಿಕಾರಿ ಶ್ಯಾಮ್‌ ಬುದ್ಧದೇವ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗ್ರಾಹಕರ ತೃಪ್ತಿಗಾಗಿ ಸದಾ ಶ್ರಮಿಸುವ ವಿಫ್ರೋ ಟೆಕ್ನಾಲಜೀಸ್‌ ಸಾಧನೆಯ ಹಾದಿಯಲ್ಲಿ ಈ ಮನ್ನಣೆ ಮಹತ್ವದ ಮೈಲುಗಲ್ಲು ಎಂದು ಸಂತಸ ವ್ಯಕ್ತಪಡಿಸಿದ ಶ್ಯಾಮ್‌, ಕಂಪನಿಯ ಸೇವೆಗಳ ವಿನ್ಯಾಸ ಹಾಗೂ ನಿರ್ವಹಣಾ ತಂತ್ರಜ್ಞಾನದ ಶ್ರೇಷ್ಠತೆಯನ್ನು ಗುರ್ತಿಸಿ ಈ ಮನ್ನಣೆ ನೀಡಲಾಗಿದೆ ಎಂದರು.
(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X