For Daily Alerts
ಟೆಸ್ಟ್ಗೆ ಶ್ರೀನಾಥ್ ಗುಡ್ಬೈ ; ಏಕದಿನ ಪಂದ್ಯಗಳಿಗೆ ಸೈ !?
*ಇಂಡಿಯಾ ಇನ್ಫೋ ವಿಶೇಷ ಪ್ರತಿನಿಧಿಯಿಂದ
ಬೆಂಗಳೂರು : ಭಾರತದ ಅಗ್ರಮಾನ್ಯ ವೇಗದ ಬೌಲರ್ ಜಾವಗಲ್ ಶ್ರೀನಾಥ್, ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದು , ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಉದ್ದೇಶಿಸಿದ್ದಾರೆ. 2003ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಶ್ರೀನಾಥ್, ಆ ಕಾರಣದಿಂದಾಗಿ ಸೀಮಿತ ಓವರ್ಗಳ ಕ್ರಿಕೆಟ್ಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟೆಸ್ಟ್ ಕ್ರಿಕೆಟ್ಗೆ ತಮ್ಮ ನಿವೃತ್ತಿಯ ನಿರ್ಧಾರವನ್ನು ಶುಕ್ರವಾರವೇ ಪ್ರಕಟಿಸಲು ಶ್ರೀನಾಥ್ ಮುಂದಾಗಿದ್ದರೂ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಜಗಮೋಹನ್ ಅವರ ದಾಲ್ಮಿಯ ನಿರ್ಧಾರವನ್ನು ಪ್ರಕಟಿಸಲು ತುಸು ವಿಳಂಬ ಮಾಡುವಂತೆ ಶ್ರೀನಾಥ್ಗೆ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಸಂಜೆ ಶ್ರೀನಾಥ್ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರೆ ಅಚ್ಚರಿಯಿಲ್ಲ .
ಮುಖಪುಟ / ಇವತ್ತು... ಈ ಹೊತ್ತು...