ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಟು ಬೇಕಾ ಸೈಟು- 5

By Staff
|
Google Oneindia Kannada News

*ಬಿ. ಎಸ್‌. ಮಹದೇವಪ್ಪ

Build your dream houseಸಾಧ್ಯವಾದಷ್ಟೂ ಸೈಟು ಮಾಡಿಕೊಂಡ ಮೇಲೆ ಒಂದು ಪುಟ್ಟ ಮನೆಯಾದರೂ ಕಟ್ಟುವುದು ಒಳ್ಳೆಯದು.

ಮನೆ ಕಟ್ಟದಿದ್ದರೆ ಹೊಸ ನಿಯಮದ ಪ್ರಕಾರ ಅದಕ್ಕೆ ಕಾಪೌಂಡ್‌ ಹಾಕಲೇ ಬೇಕು. ನಿಮ್ಮ ನಿವೇಶನವನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಮಹಾನಗರಪಾಲಿಕೆ ದಂಡ ಹಾಕಲು ಅವಕಾಶ ಇದೆ.

ಇನ್ನೊಂದು ಅಪಾಯ ಅಂದರೆ, ನಿಮ್ಮ ನಿವೇಶನ ಮಾತ್ರ ಖಾಲಿ ಇದ್ದರೆ ಅದು ತಿಪ್ಪೇಗುಂಡಿ ಆಗಹುದು.

ಅಕ್ಕಪಕ್ಕದವರು ತಮ್ಮ ಕಾಲು ಚಾಚಲು ಮನೆ ಕೊಂಚ ದೊಡ್ಡದಿರಲಿ ಎಂದು ನಿಮ್ಮ ನಿವೇಶನದಲ್ಲಿ ಒಂದೆರಡು ಅಡಿ ಸೇರಿಸಿಕೊಂಡು ಮನೆ ಕಟ್ಟಬಹುದು. ಒಮ್ಮೆ ಇದಾದರೆ ಆಮೇಲೆ ರಿಪೇರಿ ಬಲು ದುಬಾರಿ!

ಬಿಡಿಎ ನಿವೇಶನದಲ್ಲಿ ಮನೆ ಕಟ್ಟದಿದ್ದರೆ ನಿರ್ದಿಷ್ಟ ಅವಧಿ ಆದ ನಂತರ ಅವರು ನಿಮ್ಮ ನಿವೇಶವನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ. ಆಗ ನೀವು ನೋಟಿಸಿಗೆ ಸಮಾಜಾಯಿಷಿ ಕೊಟ್ಟು ಸಮಯ ಪಡೆಯಹುದು. ಆ ಸಮಸ್ಯೆ ಬದಲು ಪುಟ್ಟ ಮನೆ ಟ್ಟುವುದೇ ಒಳ್ಳೆಯದಲ್ಲವೇ?

ಕೆಲವೊಮ್ಮೆ ಯಾರದೋ ಸೈಟಿನಲ್ಲಿ ಯಾರೋ (ಗೊಂದಲದ ಪರಿಣಾಮ) ಮನೆ ಕಟ್ಟಿರುವ ಉದಾಹರಣೆಗಳೂ ಇವೆ.

ನಿವೇಶನ ಬಹಳ ದೊಡ್ಡದಿದ್ದರೆ, ನೀವು ಬಹುಕಾಲ ಆ ಕಡೆ ತಲೆ ಹಾಕದಿದ್ದರೆ ಅಲ್ಲಿ ಒಂದು ಮಿನಿ ಕೊಳಗೇರಿ ನಿರ್ಮಾಣ ಆದರೂ ಆಗಹುದು. ಇದಕ್ಕೆ ನೀವು ಅವಕಾಶ ಮಾಡಿಕೊಟ್ಟರೆ ನಾಳೆ ಅದನ್ನು ಖಾಲಿ ಮಾಡಿಸುವುದು ಅಷ್ಟು ಸುಲಭವಲ್ಲ.

ಬಿಡಿಎ ಸೈಟು ಮಾರಬಹುದಾ?

ಮಾರಬಹುದು. ಈ ಹಿಂದೆ 10 ವರ್ಷಗಳ ಕಾಲ ಮಾರುವಂತಿರಲಿಲ್ಲ. ಆದರೀಗ ನಿಯಮ ಬದಲಾಗಿದೆ. ನೀವು ನಿವೇಶನ ಖರೀದಿಸಿದ ದಿನವೇ ಮಾರಬಹುದು.

ಒಒ್ಬರು ಎರಡು ಸೈಟು ಕೊಳ್ಳಹುದಾ?
ಬಿಡಿಎ ಗೃಹ ಮಂಡಳಿ ಅಥವಾ ಸೊಸೈಟಿಗಳಿಂದ ಎರಡು ನಿವೇಶನ ಖರೀದಿಸುವಂತಿಲ್ಲ. ಖಾಸಗಿ ಮೂಲಗಳಿಂದ ನೀವು ಖರೀದಿಸಬಹುದು. ಆದರೆ, ಅದರಿಂದ ಆದಾಯ ತೆರಿಗೆ ಇಲಾಖೆ ನಿಮ್ಮ ಮನೆ ಬಾಗಿಲಿಗೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೇ ಇರುತ್ತದೆ. ಆದರೆ, ನಿಮಗೆ ಎರಡು ನಿವೇಶನ ಇದೆಯೇ ಅಥವಾ ಇಪ್ಪತ್ತು ಇದೆಯೇ ಎಂಬುದನ್ನು ಸರಿಯಾಗಿ ಪರೀಕ್ಷಿಸಿ ಕ್ರಮ ತೆಗೆದುಕೊಳ್ಳಲು ಸದ್ಯಕ್ಕೆ ನಮ್ಮಲ್ಲಿ ವ್ಯವಸ್ಥೆ ಇಲ್ಲ. ಇರುವ ವ್ಯವಸ್ಥೆಗೆ ಆ ಕೆಲಸ ಮಾಡುವ ಸಾಮರ್ಥ್ಯವೂ ಇಲ್ಲ. ನಿಮಗಾಗದವರು ದೂರು ಕೊಟ್ಟರೆ ಆಗ ನಿಮಗೇ ಕಷ್ಟ.

ಒಂದೇ ಸೈಟು ಇಬ್ಬರಿಗೆ ಅಲಾಟ್‌ ಆದರೆ ಹೇಗೆ ಪಾರಾಗೋದು?

ಬಿಡಿಎ ಅಥವಾ ಗೃಹಮಂಡಳಿಯಲ್ಲಿ ಈ ಚಮತ್ಕ್ಕಾರ ನಡೆದರೆ ಪರವಾಗಿಲ್ಲ. ಯಾಕೆಂದರೆ, ಅವರು ನಿಮಗೆ ಬದಲೀ ನೀವೇಶನ ಕೊಡುತ್ತಾರೆ. ಕೋ ಆಪರೇಟಿವ್‌ ಸೊಸೈಟಿ ಅಥವಾ ಖಾಸಗಿ ವ್ಯಕ್ತಿ - ಸಂಸ್ಥೆಗಳಿಂದ ಹೀಗಾದರೆ ನಿಮ್ಮ ಪರಿಸ್ಥಿತಿ ಗೋವಿಂದ! ನಿವೇಶನ ಮಾರಿದವನು ಅಥವಾ ಸಂಸ್ಥೆ ದಯಾಮಾಯಿ ಆದರೆ ನೀವು ಬಚಾವ್‌. ಇಲ್ಲವಾದರೆ ನ್ಯಾಯಲಯದ ಕಟೆಕಟೆ ಹತ್ತುವುದೊಂದೇ ದಾರಿ. ನ್ಯಾಯಾಲಯದಲ್ಲಿ ಮೊದಲು ಯಾರಿಗೆ ನಿವೇಶನ ಮಂಜೂರು ಆಗಿರುತ್ತದೋ (ಅವರು ಪೂರ್ತಿ ಹಣ ಪಾವತಿಸಿದ್ದರೆ) ಅವರ ಕೈಮೇಲಾಗುತ್ತದೆ. ನೀವು ಇನ್ನಷ್ಟು ಹಣ ಕಳಕೊಳ್ತೀರಿ.

ಅಂದಹಾಗೆ, ನೀವು ಸೈಟು ಕೊಳ್ಳೋದು ಯಾವಾಗ?

(ಈ ಲೇಖನದೊಂದಿಗೆ ಲೇಖನಮಾಲೆ ಮುಕ್ತಾಯ. ಅಂದಹಾಗೆ, ಈ ಪ್ರಯೋಗದ ಬಗ್ಗೆ ನಿಮಗೇನನ್ನಿಸಿತು? ಮುಂದಿನ ವಾರ ನಿರೀಕ್ಷಿಸಿ : ದುಡ್ಡು ಎಲ್ಲಿಡುತ್ತೀರಿ?)

ಭಾಗ-1 : ಸೈಟೆಂದರೆ ಏನೆಂದುಕೊಂಡಿದ್ದೀರಿ?
ಭಾಗ-2 : ಸೈಟು ಕೊಳ್ಳಲು ಯಾರಪ್ಪಾ ಸಹಾಯ ಮಾಡ್ತಾರೆ?
ಭಾಗ-3 : ರೆವೆನ್ಯೂ, ಗ್ರಾಮಠಾಣಾ, ಬಿಡಿಎ, ಕಾರ್ಪೋರೇಷನ್‌..
ಭಾಗ-4 : ಯಾಮಾರದೆ ಇರುವುದು ಹೇಗೆ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X