ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಮಾಬಾದ್‌ನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ಅಪಹರಣ

By Staff
|
Google Oneindia Kannada News

ಇಸ್ಲಮಾಬಾದ್‌ : ಕ್ಷಣದಿಂದ ಕ್ಷಣಕ್ಕೆ ಭಾರತ ಹಾಗೂ ಪಾಕ್‌ ನಡುವಣ ರಾಜತಾಂತ್ರಿಕ ಸಂಬಂಧಗಳು ಹದಗೆಡುತ್ತಿರುವ ಬೆನ್ನಿಗೇ, ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಅಪರಿಚಿತ ವ್ಯಕ್ತಿಗಳು ಶನಿವಾರ ಅಪಹರಿಸಿದ್ದಾರೆ. ಪಾಕಿಸ್ತಾನದ ಗೂಢಚಾರ ಸಿಬ್ಬಂದಿ ಈ ಅಪಹರಣದಲ್ಲಿ ಭಾಗಿಯಾಗಿರಬಹುದೆಂದು ನಂಬಲಾಗಿದೆ.

ದ್ವಿಚಕ್ರ ವಾಹನದಲ್ಲಿ ತನ್ನ ಪುತ್ರನೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ಕುಲ್ವಂತ್‌ ಸಿಂಗ್‌ ಅವರನ್ನು ಬೆಳಗ್ಗೆ 11.30 ರ ಸುಮಾರಿಗೆ ಅಪಹರಿಸಲಾಗಿದೆ. ರಾಯಲ್‌ ಎನ್‌ಕ್ಲೇವ್‌ ಸಮೀಪ ಸಿಂಗ್‌ ಅವರ ಮೇಲೆ ದಾಳಿ ಮಾಡಿದ ಅಪರಿಚಿತ ವ್ಯಕ್ತಿಗಳ ಗುಂಪೊಂದು ಅವರನ್ನು ಅಪಹರಿಸಿದೆ. ದ್ವಿಚಕ್ರ ವಾಹನ ಹಾಗೂ ಸಿಂಗ್‌ ಪುತ್ರನನ್ನು ಅಪಹರಣಕಾರರು ಸ್ಥಳದಲ್ಲಿಯೇ ಬಿಟ್ಟಿದ್ದಾರೆ.

ಮನೆಗೆ ಹಿಂತಿರುಗಿದ ಸಿಂಗ್‌ ಪುತ್ರ, ತಂದೆಯ ಅಪಹರಣದ ಕುರಿತು ತನ್ನ ಅಮ್ಮನಿಗೆ ತಿಳಿಸಿದ್ದಾನೆ. ಇದು ಎರಡು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಅಪಹರಣವಾಗಿದೆ. ಏಪ್ರಿಲ್‌ ತಿಂಗಳಲ್ಲಿ ಎ.ಕೆ.ಖನ್ನ ಅವರನ್ನು ಅಪಹರಿಸಿದ್ದ ಅಪಹರಣಕಾರರು ಐದು ಗಂಟೆಗಳ ಕಾಲ ಹಿಂಸಾತ್ಮಕ ವಿಚಾರಣೆ ನಡೆಸಿ, ಅಪಹರಣ ನಡೆಸಿದ ಸಂಜೆಯೇ ಬಿಡುಗಡೆ ಮಾಡಿದ್ದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X