ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್‌ ದೂರಿಗೆ ಓಗೊಟ್ಟ ಸಿಎಂ ಎಸ್ಸೆಂ, ಲಂಚದ ಜಾಲ ಬಯಲು

By Staff
|
Google Oneindia Kannada News

ಬೆಂಗಳೂರು : ಒಂದು ಇ-ಮೇಲ್‌ ದೂರಿನ ದೆಸೆಯಿಂದ ಸಬ್‌ ರಿಜಿಸ್ಟ್ರಾರ್‌ ರಚೇರಿಯಲ್ಲಿ ಲಂಚ ಸುಲಿಯುತ್ತಿದ್ದ ಸರ್ಕಾರಿ ಸೇವಕರೇ ಅಲ್ಲದವರ ಜಾಲವೊಂದು ಬಯಲಿಗೆ ಬಂದಿದೆ.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಮಾಹಿತಿ ತಂತ್ರಜ್ಞಾನ ಹಪಾಹಪಿತನಕ್ಕೆ ಸಂದಿರುವ ಜಯ ಇದೆನ್ನಬಹುದು.
ಕೆ.ಆರ್‌.ಪುರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮೂವತ್ತು ನಲವತ್ತು ಸೈಟಿನ ರಿಜಿಸ್ಟ್ರೇಷನ್‌ಗೆ 4 ಸಾವಿರ ರುಪಾಯಿ ಲಂಚ ಕೊಡಬೇಕು. ಇದನ್ನು ಖುಲ್ಲಂಖುಲ್ಲಾ ಕೇಳುತ್ತಾರೆ. ಸೈಟಿನ ಅಳತೆ ಹೆಚ್ಚಾದಷ್ಟೂ ಕೊಡಬೇಕಾದ ಲಂಚವೂ ಜಾಸ್ತಿ. ಲಂಚ ಕೊಡದಿದ್ದರೆ ರಿಜಿಸ್ಟ್ರೇಷನ್‌ ಮಾಡಿಕೊಡುವುದಿಲ್ಲ. ನೀವೂ ಸಾಮಾನ್ಯನಂತೆ ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳಲು ಬಂದರೆ ಕಷ್ಟ ಗೊತ್ತಾಗುತ್ತೆ. ಈ ರೀತಿ ಒಬ್ಬಾತ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಇ- ಮೇಲ್‌ ಕಳುಹಿಸಿದ್ದರು.

ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಕಚೇರಿಯವರು ಅದನ್ನು ನೋಂದಾವಣಾ ಇನ್ಸ್‌ಪೆಕ್ಟರ್‌ ಜನರಲ್‌ ಮತ್ತು ಸ್ಟ್ಯಾಂಪ್ಸ್‌ ಆಯುಕ್ತ (ಐಜಿಆರ್‌ಸಿಎಸ್‌) ಡಿ.ಸತ್ಯಮೂರ್ತಿಯವರಿಗೆ ಕಳುಹಿಸಿದರು. ಸಾಮಾನ್ಯನಂತೆ ಕೆ.ಆರ್‌.ಪುರ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋದ ಸತ್ಯಮೂರ್ತಿ ಅವರನ್ನೂ ಕೆಲವರು ಲಂಚ ಕೇಳಿದರು. ಆದರೆ ಅವರಾರೂ ಕಚೇರಿ ಅಧಿಕಾರಿಗಳಲ್ಲ. ಕೊನೆಗೆ ತಾವು ಯಾರೆಂಬುದನ್ನು ದುಡ್ಡು ಸುಲಿಯುತ್ತಿದ್ದವರಿಗೆ ಹೇಳಿದಾಗ, ಅವರು ಕಾಲಿಗೆ ಬಿದ್ದರು. ಒಬ್ಬ ಗುಮಾಸ್ತ ಹಾಗೂ ಇಬ್ಬರು ಸಹಾಯಕರು ಈ ಲಂಚದ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿಯಿದೆ. ಕಂದಾಯ ಸಚಿವ ಎಚ್‌.ಸಿ.ಶ್ರೀಕಂಠಯ್ಯ ಈ ಲಂಚ ಜಾಲದಲ್ಲಿ ಶಾಮೀಲಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇ- ಆಡಳಿತದ ಸಾಫಲ್ಯಕ್ಕೆ ಇದೊಂದು ಉದಾಹರಣೆ. ಅದನ್ನು ಯಶಸ್ವಿಯಾಗಿ ಜಾರಿಗೆ ತರಲೇಬೇಕು ಎನ್ನುತ್ತಾರೆ ಮುಖ್ಯಮಂತ್ರಿ ಕೃಷ್ಣ .

(ಇನ್ಫೋ ವಾರ್ತೆ)

ನಿಮಗೇನಾದರೂ ತೊಂದರೆಯಾಗಿದ್ದರೆ, ಸಿಎಂಗೆ ನೀವೂ ದೂರು ಕಳಿಸಿ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X