ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 1ರಿಂದ ಅಂಚೆ ಸಾಮಗ್ರಿ ದರ ಶೇ 100ರಷ್ಟು ಹೆಚ್ಚಳ

By Staff
|
Google Oneindia Kannada News

ನವದೆಹಲಿ: ಜೂನ್‌ 1ರಿಂದ ಕವರು ಕಾರ್ಡು, ಸ್ಪರ್ಧಾ ಕಾರ್ಡುಗಳ ಬೆಲೆಯನ್ನು ಶೇ 100ರಷ್ಟು ಹೆಚ್ಚಿಸುತ್ತಿರುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ.

ಎಲ್ಲ ತರದ ಅಂಚೆ ಸಾಮಗ್ರಿಯ ಬೆಲೆ ಹೆಚ್ಚಳ ಜೂನ್‌ 1ನೇ ತಾರೀಖಿನಿಂದ ಜಾರಿಗೆ ಬರಲಿದೆ. ಪ್ರಿಂಟೆಡ್‌ ಪೋಸ್ಟ್‌ ಕಾರ್ಡ್‌, ಸ್ಪರ್ಧಾ ಪೋಸ್ಟ್‌ ಕಾರ್ಡ್‌ಗಳ ಬೆಲೆ ಅನುಕ್ರಮವಾಗಿ 6ರೂ ಹಾಗೂ 10 ರೂ. ಆಗಲಿದೆ. 20 ಗ್ರಾಂ ತೂಕದೊಳಗಿನ ಪೋಸ್ಟ್‌ ಕವರುಗಳ ಬೆಲೆ ಇದುವರೆಗೆ ನಾಲ್ಕು ರೂ. ಇದ್ದದ್ದು ಇನ್ನು ಮುಂದೆ 5 ರೂ. ಆಗಲಿದೆ. ನಂತರದ ಪ್ರತಿ 20 ಗ್ರಾಂ ತೂಕಕ್ಕೆ 5 ರೂ. ನಂತೆ ಹೆಚ್ಚುವರಿ ಸ್ಟಾಂಪ್‌ ಅಂಟಿಸಬೇಕು. 2 ರೂ. ಬೆಲೆಯ ಲೆಟರ್‌ ಬೆಲೆ 2. 50 ರೂಗೇರಲಿದೆ.

ಪುಸ್ತಕಗಳು , ಪ್ಯಾಟರ್ನ್‌ ಮತ್ತು ಸ್ಯಾಂಪಲ್‌ ಪೋಸ್ಟ್‌ ಕಾರ್ಡ್‌ಗಳ ಬೆಲೆಯನ್ನು ಈಗಿನ 3ರೂಗಳಿಂದ 4ರೂಗೆ ಏರಿಸಲಾಗಿದೆ. 500 ಗ್ರಾಂವರೆಗಿನ ಪಾರ್ಸೆಲ್‌ಗೆ ಇದುವರೆಗಿನ 16 ರೂ. ಬದಲಿದೆ 19 ರೂ., ನಂತರದ 500 ಗ್ರಾಂ ಹೆಚ್ಚುವರಿಗೆ 15ರ ಬದಲಿಗೆ 16 ರೂ. ನೀಡಬೇಕಾಗುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X