ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಚೆಲುವೆ ಒಕ್ಸಾನಾ ಫೆಡೊರೋವಾಗೆ ವಿಶ್ವ ಸುಂದರಿ ಕಿರೀಟ

By Staff
|
Google Oneindia Kannada News

Oxana Federova, Miss Universeಸ್ಯಾನ್‌ ಜ್ಯುಆನ್‌, ಪುರ್ಟೊ ರಿಕೋ : ರಷ್ಯಾದ ಕಾನೂನು ಪದವೀಧರೆ ಒಕ್ಸಾನಾ ಫೆಡೊರೋವಾ ಈಗ ವಿಶ್ವ ಸುಂದರಿ. ಬುಧವಾರ ಇಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 74 ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಹಾಕಿಕೊಂಡಿದ್ದು ಫೆಡೊರೋವಾ.

ಪನಾಮಾದ ಜಸ್ಟಿನ್‌ ಪಸೆಕ್‌ ಹಾಗೂ ಚೀನಾದ ಲಿಂಗ್‌ ಫುವೋ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್‌ ಅಪ್‌ ಆಗಿ ಆಯ್ಕೆಯಾದರು. ಈ ಮೊದಲು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಚೀನಾ ಸುಂದರಿಯರು ಭಾಗವಹಿಸಿಯೇ ಇರಲಿಲ್ಲ. ಹೀಗಾಗಿ ಲಿಂಗ್‌ ಫುವೋ ಇತಿಹಾಸದ ಪುಟ ಸೇರಲಿದ್ದಾರೆ.

ನೀವು ನಾಚಿಕೆಯಿಂದ ಕೆಂಪಾಗುವಂತಾಗೋದು ಯಾವಾಗ ಎಂಬ ನಿರ್ಣಾಯಕ ಪ್ರಶ್ನೆಗೆ ರಷ್ಯಾ ಸುಂದರಿ ಕೊಟ್ಟ ಉತ್ತರ- ನಾನು ತಪ್ಪು ಮಾತಾಡಿದಾಗ ಎಂಬುದಾಗಿತ್ತು. ನೆರೆದಿದ್ದ 6 ಸಾವಿರಕ್ಕೂ ಹೆಚ್ಚು ಸಭಿಕರು ಈ ಉತ್ತರಕ್ಕೆ ಚಪ್ಪಾಳೆಯ ಮಳೆಗರೆದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X