ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲೋಕಾಯುಕ್ತರ ಕತ್ತಿ ಅಲಗಿಗೆ ಸಾಣೆ, ಸಂಪುಟ ಪುನರ್ರಚನೆ ಖಚಿತ’

By Staff
|
Google Oneindia Kannada News

ಬೆಂಗಳೂರು : ಭ್ರಷ್ಟಾಚಾರದ ವಿರುದ್ಧ ಝಳಪಿಸುತ್ತಿರುವ ಲೋಕಾಯುಕ್ತದ ಕತ್ತಿ ಅಲಗನ್ನು ಇನ್ನಷ್ಟು ಹರಿತವಾಗಿಸುವುದಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಗುರುವಾರ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ಧರ್ಮ ಯುದ್ಧ ಸಾರಿತ್ತು. ಲೋಕಾಯುಕ್ತ ಎನ್‌.ವೆಂಕಟಾಚಲ ಅವರ ಮೂಲಕ ಇದು ಸಾಕಷ್ಟು ಯಶಸ್ವಿಯಾಗಿದೆ ಕೂಡ. ವೆಂಕಟಾಚಲ ಅವರ ನಿರ್ದಾಕ್ಷಿಣ್ಯ ಕೆಲಸದಿಂದ ಸಂತೋಷವಾಗಿದೆ ಎಂದಿರುವ ಕೃಷ್ಣ, ಅವರಿಗೆ ಸದ್ಯದಲ್ಲೇ ಇನ್ನಷ್ಟು ಅಧಿಕಾರ ಬಲ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಸುದ್ದಿಗಾರರೊಡನೆ ಮಾತಾಡುತ್ತಿದ್ದ ಮುಖ್ಯಮಂತ್ರಿ ಕೃಷ್ಣ, ಕಾನೂನು ಇಲಾಖೆ ಲೋಕಾಯುಕ್ತರ ಅಧಿಕಾರವನ್ನು ವಿಸ್ತರಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಲೋಕಾಯುಕ್ತರು ಇಟ್ಟಿರುವ ಬೇಡಿಕೆಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ತಮಗೆ ಸಹಕರಿಸಲು 36 ಪೊಲೀಸರು ಬೇಕೆಂಬುದೂ ಸೇರಿದಂತೆ ಲೋಕಾಯುಕ್ತರು ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸದ್ಯದಲ್ಲೇ ಅವುಗಳನ್ನು ಈಡೇರಿಸುವುದಾಗಿ ಹೇಳಿದರು.

ಫ್ರೆಂಚ್‌ ಸಂಸ್ಥೆಗಳಿಂದ ನೀರು ಸರಬರಾಜು ಸಮೀಕ್ಷೆ : ನೀರು ಸರಬರಾಜು ಖಾಸಗೀಕರಣ ಕುರಿತ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಕೃಷ್ಣ, ಎರಡು ಫ್ರೆಂಚ್‌ ಸಂಸ್ಥೆಗಳು ಈಗಾಗಲೇ ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಸದ್ಯದಲ್ಲೇ ವರದಿ ಸಲ್ಲಿಸಲಿವೆ ಎಂದರು.

ಸಂಪುಟ ಪುನರ್ರಚನೆ ಖಚಿತ
ಮಂತ್ರಿ ಮಂಡಲ ವಿಸ್ತರಣೆಗೆ ಈಗ ಸಕಾಲ. ಆದರೆ ಯಾವಾಗ ಮಂತ್ರಿಮಂಡಲ ಪುನರ್ರಚನೆಗೆ ಕಾಲಮಿತಿ ಗೊತ್ತುಪಡಿಸಲು ಸಾಧ್ಯವಿಲ್ಲ . ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿರುವ ಸಂದರ್ಭದಲ್ಲಿ ಸಂಪುಟ ಪುನರ್ರಚನೆ ಅಪೇಕ್ಷಣೀಯವಾದರೂ, ಯಾವ ಮುಖ್ಯಮಂತ್ರಿಯೂ ದಿನಾಂಕ ಗೊತ್ತು ಪಡಿಸಲು ಸಾಧ್ಯವಿಲ್ಲ .

- ಬಹು ನಿರೀಕ್ಷಿತ ಸಂಪುಟ ಪುನರ್ರಚನೆಯ ಬಗ್ಗೆ ಕೃಷ್ಣ ಪ್ರತಿಕ್ರಿಯಿಸಿದ್ದು ಹೀಗೆ. ಸಂಪುಟ ಪುನರ್ರಚನೆ ಬಗ್ಗೆ ಮಾತನಾಡಿದರೂ, ಪ್ರಸ್ತುತ ಸಂಪುಟ ಸಹೋದ್ಯೋಗಿಗಳ ಕಾರ್ಯ ವೈಖರಿ ತಮಗೆ ತೃಪ್ತಿ ತಂದಿದೆ ಎಂದು ಹೇಳಲು ಕೃಷ್ಣ ಮರೆಯಲಿಲ್ಲ .

ನಿಗಮ ಹಾಗೂ ಮಂಡಳಿಗಳಿಗೆ ಹೊಸದಾಗಿ ನೇಮಕ ಕುರಿತ ವದಂತಿಗಳನ್ನು ಸಾರಾ ಸಗಟಾಗಿ ನಿರಾಕರಿಸಿದ ಕೃಷ್ಣ , ಈ ಕುರಿತು ಗುವಾಹತಿಯಲ್ಲಿ ನಡೆದ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಸಭೆಯ ಸಂದರ್ಭದಲ್ಲಿ ಸೋನಿಯಾ ಅವರಿಗೆ ತಿಳಿಸಿದ್ದೇನೆ ಎಂದರು.
(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X