• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಟು ಬೇಕಾ ಸೈಟು- 2

By Staff
|

*ಬಿ. ಎಸ್‌. ಮಹದೇವಪ್ಪ

Bangalore Site Seeing! A visionಸರ್ಕಾರಿ ಸಂಸ್ಥೆಗಳು, ಕೋ-ಆಪರೇಟಿವ್‌ ಸೊಸೈಟಿಗಳು, ಹೌಸಿಂಗ್‌ ಬೋರ್ಡ್‌ಗಳು ನಿಮ್ಮ ನೆರವಿಗೆ ಬರುತ್ತವೆ. ಸರ್ಕಾರಿ ಸಂಸ್ಥೆಗಳ ಪೈಕಿ ನಿಮಗೆ ನಿವೇಶನ ನೀಡಬಹುದಾದ ಸಂಸ್ಥೆಗಳು ಎರಡೇ ಎರಡು. ಮೊದಲನೆಯದು ಬಿಡಿಎ, ಎರಡನೆಯದು ಕರ್ನಾಟಕ ಗೃಹ ಮಂಡಳಿ. ಈ ಎರಡೂ ಸಂಸ್ಥೆಗಳು ತೋಚಿದಂತೆ ಸೈಟು ಕೊಡಲಾಗದು. ಈ ಸಂಸ್ಥೆಗಳು ಹಂಚುವ ನಿವೇಶನಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ಇವರು ಜಾಹೀರಾತು ಕೊಟ್ಟು, ಹಲವಾರು ನಿಯಮಗಳ ಪಾಲನೆ ನಂತರವೇ ನಿವೇಶನ ಮಂಜೂರು ಮಾಡೋದು.

ಕೋ-ಆಪರೇಟಿವ್‌ ಸೊಸೈಟಿಗಳೂ ಸೈಟುಗಳನ್ನು ಮಾರುತ್ತವೆ. ಆದರೆ, ಇದನ್ನು ಪಡೆಯಲು ನೀವು ಅದರ ಸದಸ್ಯರಾಗಿರಬೇಕು. ಕೆಲವೊಮ್ಮೆ ಸೊಸೈಟಿಗಳಲ್ಲಿ ಯಾವುದೋ ಸದಸ್ಯನ ಹೆಸರಿನಲ್ಲಿ ಸೈಟು ಮಂಜೂರಿ ಮಾಡಿ ನಿಮಗೆ ವರ್ಗಾಯಿಸಿ ಕೊಡುವ ಆಫರ್‌ ಬರುತ್ತದೆ. ಈ ಬಗ್ಗೆ ಎಚ್ಚರದಿಂದ ಇರಿ. ಯಾಕೆಂದರೆ ಮುಂದೆ ಇದು ಬೆಳಕಿಗೆ ಬಂದರೆ ನಿಮ್ಮ ದುಡ್ಡಿಗೇ ಸಂಚಕಾರ .

ಕೋ ಆಪರೇಟಿವ್‌ ಸೊಸೈಟಿಗಳ ಕಾರ್ಯ ವ್ಯಾಪ್ತಿಯೂ ಈಗ ಹಿಂದಿನದಷ್ಟು ಇಲ್ಲ. ಈಗ ಸೊಸೈಟಿಗಳಿಗೆ ಸರ್ಕಾರವೇ ಜಮೀನು ಸ್ವಾಧೀನಪಡಿಸಿಕೊಂಡು ಕೊಡುವುದಿಲ್ಲ. ಆ ಬದಲು ಸೊಸೈಟಿಗಳು ಬೇರೆಲ್ಲರಂತೆ ತಾವೇ ನೇರವಾಗಿ ಜಮೀನು ಮಾಲೀಕರ ಜೊತೆ ವ್ಯವಹರಿಸಿ ಜಮೀನು ಪಡೆದು ಬಡಾವಣೆ ಮಾಡಬೇಕು. ಅಂದರೆ, ಇದೂ ಒಂದು ಖಾಸಗಿ ವ್ಯವಹಾರವಾಗಿದೆ. ಟೋಪಿ ಹಾಕುವ ಭಯವೂ ಇದೆ.

ಇನ್ನು ಉಳಿದುಕೊಳ್ಳುವುದು ಸಂಪೂರ್ಣ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು. ಇವರು ಸಾಮಾನ್ಯವಾಗಿ ನಿವೇಶನ ಮಾರಲು ನಿಮ್ಮ ಬೆನ್ನ ಹಿಂದೆ ಬೀಳುತ್ತಾರೆ. ಯಾವುದು ಅತೀ ಸುಲಭವಾಗಿ ಸಿಗುತ್ತದೆಯೋ ಅದರ ಬಗ್ಗೆ ಮೈಯೆಲ್ಲಾ ಕಣ್ಣಾಗಿರಲೇಬೇಕು.

ನೆನಪಿರಲಿ, ನೀವು ಇಂಥದ್ದೇ ಸಂಸ್ಥೆಯಿಂದ, ಹೀಗೆಯೇ ನಿವೇಶನ ಖರೀದಿಸಬೇಕು ಎಂದು ನಿಮಗೆ ಬುದ್ಧಿವಾದ ಹೇಳಲು, ದಾರಿ ತೋರಲು ಸದ್ಯಕ್ಕೆ ನಮ್ಮಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯವಸ್ಥೆ ಇಲ್ಲ.

ಸೈಟು ಕೊಳ್ಳುವಾಗ ಏನೇನು ಗಮನಿಸಬೇಕು?

  • ನಿಮ್ಮ ಕನಸಿನ ಮನೆ ಸುತ್ತಮುತ್ತಲಿನ ಪರಿಸರ ಹೇಗಿದೆ ನೋಡಿಕೊಳ್ಳಿ.
  • ಆ ಬಡಾವಣೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ನಾಳೆ ಯಾವ ರೀತಿ ಅಭಿವೃದ್ಧಿಯಾಗಬಹುದು. ಅಂದರೆ, ಅದು ಮಿನಿ ವಾಣಿಜ್ಯ ಪ್ರದೇಶವಾಗುತ್ತದೆಯೇ ಅಥವಾ ಪೂರ್ಣವಾಗಿ ಮನೆಗಳಿಂದಲೇ ಅಭಿವೃದ್ಧಿ ಆಗುತ್ತದೆಯೇ ಅನ್ನುವುದನ್ನು ಅರಿತುಕೊಳ್ಳಿ.
  • ಅಕ್ಕ ಪಕ್ಕದಲ್ಲಿ ವಾಹನ ಸಂಚಾರ ಹೇಗಿದೆ. ಮುಖ್ಯರಸ್ತೆಗೆ ಅಂಟಿಕೊಂಡು ಇದ್ದರೆ ಶಬ್ದ ಮಾಲಿನ್ಯ, ಧೂಳು ಎಷ್ಟು ಕಾಡಬಹುದು ಅನ್ನುವ ಪರಿವೆ ಇರಲಿ.
  • ದಾಖಲೆಗಳ ಬಗ್ಗೆ ಎಚ್ಚರೆಚ್ಚರ..

    • ಬಿಡಿಎ ಅಥವಾ ಗೃಹ ಮಂಡಳಿಯಿಂದ ನಿವೇಶನ ಖರೀದಿಸುವುದಾದರೆ ನೀವು ದಾಖಲೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.
    • ಮಹಾನಗರ ಪಾಲಿಕೆಯಿಂದ ನಿಮಗೆ ನಿವೇಶನ ಮಂಜೂರು ಆಗುವ ಪ್ರಮೇಯವೇ ಒದಗಿ ಬರುವುದಿಲ್ಲ. ಯಾಕೆಂದರೆ, ಅದು ಪಾಲಿಕೆ ಕೆಲಸ ಅಲ್ಲ.
    • ಕೋ ಆಪರೇಟಿವ್‌ ಸೊಸೈಟಿಯಿಂದ ಮಂಜೂರಾದರೆ - ಮೊದಲು ಆ ಸೊಸೈಟಿಯ ಪದಾಧಿಕಾರಿಗಳು ಕೆಲಸವನ್ನು ಕಾನೂನಿನ ಪ್ರಕಾರವೇ ಮಾಡಿದ್ದಾರಾ ಎಂಬುದನ್ನು ಗಮನಿಸಿ. ನಿಮಗೆ ಸೈಟು ಕೊಟ್ಟು ತಾವು ಹೆಸರು (ಅಥವಾ ಬೇರೆ ಆಸೆಗಳು!) ಮಾಡಲು ಅಥವಾ ಮತ್ತೊಂದು ಚುನಾವಣೆ ಎದುರಿಸಲು ಆತುರಾತುರವಾಗಿ ನಿವೇಶನ ಹಂಚಿಕೆ ಆಗುತ್ತಿದೆಯೇ ಎಂಬ ಬಗ್ಗೆ ನಿಗಾ ಇರಲಿ.
    • ಬಡಾವಣೆ ಮಾಡಲು ಸೊಸೈಟಿ ಸಂಬಂಧ ಪಟ್ಟ ಸರ್ಕಾರಿ ಸಂಸ್ಥೆಗಳಿಂದ ಅಂದರೆ ಸಿಎಂಸಿ ಅಥವಾ ಬಿಡಿಎ, ಭೂಸ್ವಾಧೀನಾಧಿಕಾರಿಗಳು, ಯೋಜನಾ ಪ್ರಾಧಿಕಾರ, ಅರ್ಬನ್‌ ಲ್ಯಾಂಡ್‌, ವಿದ್ಯುತ್‌, ನೀರು, ಒಳಚರಂಡಿ ಇಲಾಖೆಗಳಿಂದ ಅಗತ್ಯ ಪರವಾನಗಿ ಪಡೆದಿದ್ದಾರಾ? ವಿಚಾರಿಸಿ.
    • ನಿವೇಶನ ಇರುವ ಜಮೀನು, ನ್ಯಾಯಾಲಯದಲ್ಲಿ ಯಾವುದೋ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿಲ್ಲವೇ ಎಂಬುದನ್ನು ಸೊಸೈಟಿಯ ಪದಾಧಿಕಾರಿಗಳಿಂದ ಖಚಿತಪಡಿಸಿಕೊಳ್ಳಿ.
    • ನಿವೇಶನಕ್ಕೆ ಒಮ್ಮೆಲೆ ಹಣ ಕೊಡುವ ಬದಲು ಹಂತಹಂತವಾಗಿ ಕೆಲಸ ಪೂರ್ಣವಾದಂತೆಲ್ಲಾ ಹಣ ಪಾವತಿಸಲು ಪ್ರಯತ್ನಿಸಿ.
    • ನಿಯಮಗಳ ಪ್ರಕಾರ ಸೊಸೈಟಿಯ ಪದಾಧಿಕಾರಿಗಳು ಪಾರ್ಕ್‌, ಶಾಪಿಂಗ್‌ ಕಾಂಪ್ಲೆಕ್ಸ್‌ ಮುಂತಾದವುಗಳಿಗೆ ಜಾಗ ಬಿಟ್ಟಿದ್ದಾರಾ? ಗಮನವಿರಲಿ. ಸಾಧ್ಯವಾದಷ್ಟೂ ನಿಮಗೆ ನೀಡಿರುವ ಆಶ್ವಾಸನೆಗಳ ಪಟ್ಟಿ ಪೈಕಿ ಎಲ್ಲವನ್ನೂ ನಿವೇಶನವನ್ನು ಪಡೆಯುವುದಕ್ಕೇ ಮೊದಲು ಪೂರೈಸುವಂತೆ ಮಾಡಿ.
    • ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಸೈಟು ಖರೀದಿ...

      ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಂದ ನಿವೇಶನ ಖರೀದಿಸುವ ಮೊದಲು ದಾಖಲೆಗಳನ್ನು ಎರಡು ಬಾರಿ ಪರೀಕ್ಷಿಸಿ. ವಕೀಲರಿಗೆ ದಾಖಲೆ ತೋರಿಸೋದು ಒಳ್ಳೆಯದು. ಬಿಡಿಎ ಅಥವಾ ಗೃಹ ಮಂಡಳಿಗೆ ಸಂಬಂಧಿಸಿದ ಮಂಜೂರಾತಿ ಪತ್ರಗಳು ನಿಜವಾದವೇ ಅಥವಾ ನಕಲಿಯೇ ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳಿಂದಲೇ ಖಾತರಿಪಡಿಸಿಕೊಳ್ಳಿ. ಯಾಕೆಂದರೆ, ಬಿಡಿಎ ಹೆಸರಿನಲ್ಲಿ ಬೇಕಾ ಬಿಟ್ಟಿ ನಕಲಿ ದಾಖಲೆ ಸೃಷ್ಟಿಯಾಗಿರುವ ನೂರಾರು ನಿದರ್ಶನಗಳು ನಮ್ಮ ಮುಂದಿವೆ.

      ಪಹಣೆ, ಖಾನಾ, ಮೂಲ ಮಾರಾಟ ಪತ್ರ, ವಿವಿಧ ಸರ್ಕಾರಿ ಸಂಸ್ಥೆಗಳ ನಿರಪೇಕ್ಷಣಾ ಪತ್ರ, ಎನ್‌ಕಂಬರೆನ್ಸ್‌, ಸಿಎಂಸಿ ಅಥವಾ ಸ್ಥಳೀಯ ಸಂಸ್ಥೆಯ ‘ಆಕ್ಷೇಪ ಇಲ್ಲ’ ಪತ್ರ ಈ ಎಲ್ಲವನ್ನೂ ಕಡ್ಡಾಯವಾಗಿ ಪರಿಶೀಲಿಸಲೇಬೇಕು. ನಕಲಿ ದಾಖಲೆ ಬಗ್ಗೆ ಜಾಗ್ರತೆ. ಅನುಮಾನ ಬಂದರೆ ಹತ್ತಿರದ ಕಂದಾಯ ಇಲಾಖೆ ಅಧಿಕಾರಿಗಳ ಜೊಚೆ ಚರ್ಚಿಸಿ.

      (ಗುರುವಾರ, ಮೇ 30: ರೆವೆನ್ಯೂ, ಗ್ರಾಮ ಠಾಣಾ, ಬಿಡಿಎ, ಕಾರ್ಪೋರೇಷನ್‌ ಸೈಟು ನಡುವಿನ ವ್ಯತ್ಯಾಸ ಏನು?)

      ಮುಖಪುಟ / ಇವತ್ತು... ಈ ಹೊತ್ತು...

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more