ಹಿರಿಯ ನಾಗರಿಕರ ಕೇಸುಗಳ ಶೀಘ್ರ ಇತ್ಯರ್ಥ್ಯಕ್ಕೆ ಪ್ರತ್ಯೇಕ ಕೋರ್ಟ್ ಪೀಠ
ಬೆಂಗಳೂರು: ಹಿರಿಯ ನಾಗರಿಕರ ಅಹವಾಲುಗಳನ್ನು ಇತ್ಯರ್ಥಗೊಳಿಸಲು ಪ್ರತ್ಯೇಕ ಕೋರ್ಟ್ ಪೀಠವೊಂದನ್ನು ರಚಿಸಲಾಗಿದೆ.
ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಎನ್. ಕೆ. ಜೈನ್ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ನ್ಯಾಯಮೂರ್ತಿ ಜಿ.ಸಿ. ಭರೂಚಾ ಮತ್ತು ನ್ಯಾಯಮೂರ್ತಿ ಮಹ್ಮದ್ ಅನ್ವರ್ ನೇತೃತ್ವದ ಎರಡು ಏಕ ವ್ಯಕ್ತಿ ನ್ಯಾಯಪೀಠವನ್ನು ಹಿರಿಯ ನಾಗರಿಕರ ದೂರುಗಳನ್ನು ಆಲಿಸುವ ಸಲುವಾಗಿ ರಚಿಸಲಾಗಿದೆ. ಮೇ 27ರಿಂದ ಈ ವಿಭಾಗೀಯ ಪೀಠ ಕಾರ್ಯನಿರ್ವಹಿಸುತ್ತಿದೆ. ಹಿರಿಯ ನಾಗರಿಕರ ಕೇಸುಗಳು ತುಂಬಾ ಸಮಯದಿಂದ ಬಾಕಿ ಉಳಿದಿದ್ದು, ಅವುಗಳ ಶೀಘ್ರ ವಿಲೇವಾರಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮತ್ತು ನ್ಯಾಯಮೂರ್ತಿ ಎಸ್. ಆರ್. ಬನ್ನೂರಮಠ ಕೂಡ ಹಿರಿಯ ನಾಗರಿಕರು ಸಲ್ಲಿಸುವ ಎಲ್ಲ ರೀತಿಯ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೋರ್ಟ್ ಪೀಠ ಆರಂಭಿಸಿರುವ ಎನ್. ಕೆ. ಜೈನ್ ಅವರ ಕ್ರಮವನ್ನು ಬಾರ್ ಕೌನ್ಸಿಲ್ನ ಅಧಿಕಾರಿಗಳು ಶ್ಲಾಘಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...