ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರ ಯುದ್ಧ ಆದಲ್ಲಿ ಒಂದೇ ತುತ್ತಿಗೆ ಕೋಟ್ಯಂತರ ಸಾವು !

By Staff
|
Google Oneindia Kannada News

ಭಾರತ ಮತ್ತು ಪಾಕಿಸ್ತಾನದ ನಡುವೆ ಅಣ್ವಸ್ತ್ರ ಚಕಮಕಿ ನಡೆದರೆ ಏನಾದೀತು?
ಒಂದೇ ಕದಲಿಕೆಯಲ್ಲಿ ಉಭಯ ರಾಷ್ಟ್ರಗಳ ಸುಮಾರು ಒಂದೂವರೆ ಕೋಟಿ ಮಂದಿ ಹತರಾಗುತ್ತಾರೆ. 70 ಲಕ್ಷಕ್ಕೂ ಹೆಚ್ಚು ಮಂದಿ ಗಂಭೀರ ಸ್ವರೂಪದ ಗಾಯಾಳುಗಳಾಗುತ್ತಾರೆ. ಇವರೆಲ್ಲರಿಗೆ ಒಮ್ಮೆಲೇ ಚಿಕಿತ್ಸೆ ಕೊಡುವುದು ಆಯಾ ದೇಶದ ಆಸ್ಪತ್ರೆಗಳಿಗೆ ಸಾಧ್ಯವಾಗದಿರಬಹುದು. ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ತೆಕ್ಕೆಗೆ ಬೀಳಬೇಕಾಗುತ್ತದೆ. ಮಾಲಿನ್ಯ ಎನ್ನುವುದು ಇಂಚಿಂಚೂ ಗಾಢವಾಗುತ್ತದೆ. ಅನ್ನ- ನೀರು ಕೂಷ ವಿಷಪೂರಿತವಾಗುತ್ತದೆ! ಎಲ್ಲಕ್ಕಿಂತ ಮಿಗಿಲಾಗಿ ನ್ಯೂಕ್ಲಿಯಾರ್‌ ದಾಳಿಯ ಪರಿಣಾಮ ಅನೇಕ ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ.

ಪೆಂಟಗಾನ್‌ನ ಅಧಿಕಾರಿಗಳು ನ್ಯೂಯಾರ್ಕ್‌ ಟೈಮ್ಸ್‌ಗೆ ಕೊಟ್ಟಿರುವ ಹೇಳಿಕೆಯ ಸಾರವಿದು.

ಭಾರತ ಮತ್ತು ಪಾಕಿಸ್ತಾನದ ನಡುವೆ ನಿರ್ಣಾಯಕ ಯುದ್ಧದ ಸಂಭವನೀಯತೆ ನಿಚ್ಚಳವಾಗಿರುವ ಇವತ್ತಿನ ಪರಿಸ್ಥಿತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಳವಳ ಹೊರಬೀಳುತ್ತಿದೆ. ಉಭಯ ರಾಷ್ಟ್ರಗಳ ನಡುವೆ ಅಣ್ವಸ್ತ್ರ ಇರುವುದೇ ವಿಶ್ವದ ಇತರೆ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿದೆ. ಅದೇ ಕಾರಣಕ್ಕೆ ವಿವಿಧ ಅಂತರರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆಗಳು ಒಂದು ವೇಳೆ ಅಣ್ವಸ್ತ್ರ ಯುದ್ಧ ನಡೆದರೆ ಆಗುವ ಅನಾಹುತದ ಬಗ್ಗೆ ದೊಡ್ಡ ಅಧ್ಯಯನವನ್ನೇ ನಡೆಸುತ್ತಿವೆ. ವಿವಿಧ ಸಂಸ್ಥೆಗಳು ಕೊಡುವ ಅಂಕಿ ಅಂಶಗಳ ಪ್ರಕಾರ ಅಣ್ವಸ್ತ್ರ ಯುದ್ಧದಿಂದ ತಕ್ಷಣಕ್ಕೇ ಕೋಟ್ಯಂತರ ಜನ ಸಾಯುವ ಭಯವಿದೆ. ಯುದ್ಧ ನಿಂತ ನಂತರ ಸಾವು ನಿತ್ಯದ ಗೋಳಾಗಿಹೋಗುತ್ತದೆ.

ಇತರೆ ಅಸ್ತ್ರಗಳಂತೆ ಅಣ್ವಸ್ತ್ರ ಗಾಳಿಯಲ್ಲಿ ಸ್ಫೋಟಿಸುವುದಕ್ಕಿಂತ ಹೆಚ್ಚಾಗಿ ಭೂಮಿಯ ಮೇಲೇ ಎರಗುವ ಶಕ್ತಿಯುಳ್ಳದ್ದು. ಪ್ರಕೃತಿ ವೈಪರೀತ್ಯಗಳಾದ ಭೂಕಂಪ, ಪ್ರವಾಹದ ಕಬಂಧಬಾಹುಗಳಿಗೆ ಸಿಕ್ಕಿ ಭಾರತ ಮತ್ತು ಪಾಕಿಸ್ತಾನ ನಲುಗುವ ಅಪಾಯವಿದೆ.

ಇಷ್ಟೆಲ್ಲಾ ಹೇಳಿರುವ ಬೇಹುಗಾರಿಕಾ ದಳಗಳ ವರದಿ ಉಲ್ಲೇಖಿಸಿ, ಜಗತ್ತು ಇವತ್ತು ಪಾಕಿಸ್ತಾನ ಮತ್ತು ಭಾರತವನ್ನು ಕೇಳಿಕೊಳ್ಳುತ್ತಿರುವುದು- ದಯವಿಟ್ಟು ಯುದ್ಧ ಮಾಡಿಬೇಡಿ. ಆದರೆ, ವಾಜಪೇಯಿ ಖದರಿದ್ದಾಗಿದೆ. ತಪ್ಪನ್ನು ತಿದ್ದಿಕೊಳ್ಳುವ ಗೊಡವೆಗೆ ಹೋಗುವ ಮನಸ್ಸನ್ನು ಮುಷರ್ರಫ್‌ ಮಾಡುತ್ತಿಲ್ಲ. ಹಾಗಾದರೆ, ಮುಂದೆ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X