ಘೋರಿ, ಘಜನಿಯ ನಂತರ ಅಬ್ದಾಲಿ : ನಿಲ್ಲದ ಪಾಕ್ ದುಸ್ಸಾಹಸ
ಇಸ್ಲಮಾಬಾದ್ : ತಪ್ಪೇನೂ ಮಾಡಿಲ್ಲ , ತಪ್ಪೆಲ್ಲಾ ಭಾರತದ್ದೆ ಎಂದು ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಆರೋಪಿಸಿರುವ ಬೆನ್ನಿಗೇ ಪಾಕಿಸ್ತಾನ ತನ್ನ ಸರಣಿ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದೆ. ಮೇ 28 ರ ಮಂಗಳವಾರ ತನ್ನ ಮೂರನೇ ಕ್ಷಿಪಣಿ ಸಮೀಪ ಗಾಮಿ ಅಬ್ದಾಲಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ಮೇ 25 ರಂದು ಮಧ್ಯಮ ಅಂತರದ ಘೋರಿ ಕ್ಷಿಪಣಿ ಪ್ರಯೋಗ ನಡೆಸಿದ್ದ ಪಾಕಿಸ್ತಾನ, ಮೇ 26 ರಂದು ಘಜನಿ ಕ್ಷಿಪಣಿ ಪರೀಕ್ಷೆ ನಡೆಸಿ ಅಂತರರಾಷ್ಟ್ರೀಯ ಸಮುದಾಯದ ತೀವ್ರ ಅಸಮಾಧಾನಕ್ಕೆ ತುತ್ತಾಗಿತ್ತು . ಆದರೆ, ಅಂತರರಾಷ್ಟ್ರೀಯ ಆಕ್ಷೇಪವನ್ನು ನಿರ್ಲಕ್ಷಿಸಿ ಪಾಕ್ ಮೂರನೇ ಬಾರಿ ಕ್ಷಿಪಣಿ ಪರೀಕ್ಷೆ ದುಸ್ಸಾಹಸ ಕೈಗೊಂಡಿದೆ.
ಎರಡು ಯಶಸ್ವಿ ಕ್ಷಿಪಣಿ ಪರೀಕ್ಷೆಗಳ ನಂತರ ಮೂರನೇ ಬಾರಿಯೂ ಪಾಕ್ ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿದೆ. ಇದರಿಂದಾಗಿ ಪಾಕ್ ಮಿಲಿಟರಿ ಶಕ್ತಿ ಅಭೇದ್ಯ ಎನ್ನುವುದು ಸಾಬೀತಾಗಿದೆ ಎಂದು ಪಾಕ್‌ನ ಸ್ಟಾಫ್ ಕಮಿಟಿ ಚೇರ್‌ಮನ್ ಅರಿkುೕಜ್ ಅಹ್ಮದ್ ಖಾನ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...