ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಿಂದ ಇನ್ನೊಂದು ಕ್ಷಿಪಣಿ ಪರೀಕ್ಷೆ, ಅಟಲ್‌ರಿಂದ ಉಗ್ರ ನಿಗ್ರಹ ದೀಕ್ಷೆ

By Staff
|
Google Oneindia Kannada News

ಇಸ್ಲಾಮಾಬಾದ್‌ : ಪಾಕಿಸ್ತಾನ ತನ್ನ ಎರಡನೇ ಕ್ಷಿಪಣಿಯ ಪರೀಕ್ಷೆಯನ್ನೂ ಭಾನುವಾರ ಯಶಸ್ವಿಯಾಗಿ ಪೂರೈಸಿದೆ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಕ್ಷಿಪಣಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರೂ ಪಾಕ್‌ ಇಡುತ್ತಿರುವ ಹೆಜ್ಜೆ ಭಾರತಕ್ಕೆ ಕಿಚಾವಣೆಯ ಪರಮಾವಧಿ ಎನ್ನಲಾಗುತ್ತಿದೆ.

ಹೊಸದಾಗಿ ಅಭಿವೃದ್ಧಿ ಪಡಿಸಲಾಗಿರುವ ಹತಫ್‌- III ಕ್ಷಿಪಣಿ 290 ಕಿ.ಮೀ. ದೂರ ಕ್ರಮಣಾ ಶಕ್ತಿ ಹೊಂದಿದೆ. ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಪಾಕ್‌ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಶ್ಲಾಘಿಸಿದ್ದಾರೆ.

ಶನಿವಾರ ಪಾಕಿಸ್ತಾನ ಹತಫ್‌ 5/ಘೋರಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಮುಂದಿನ ದಿನಗಳಲ್ಲಿ ಪದೇ ಪದೇ ಈ ರೀತಿಯ ಕ್ಷಿಪಣಿ ಪರೀಕ್ಷೆ ನಡೆಸುವುದಾಗಿ ಸಂಬಂಧಪಟ್ಟ ಪಾಕಿಸ್ತಾನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಪಾಕ್‌ನಲ್ಲಿ ಭಯೋತ್ಪಾದನೆಗೆ ಭಾರತದ ಬೆಂಬಲ : ಪಾಕಿಸ್ತಾನದಿಂದ ಭಯೋತ್ಪಾದನೆ ರಫ್ತಾಗುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿದ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌, ಪಾಕಿಸ್ತಾನ ಸರ್ಕಾರವನ್ನು ಅಸ್ಥಿರ ಮಾಡಲು ಭಾರತ ಯತ್ನಿಸುತ್ತಿರುವುದಾಗಿ ಆಪಾದಿಸಿದರು.

ವಾಷಿಂಗ್ಟನ್‌ ಪೋಸ್ಟ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಮುಷರ್ರಫ್‌ ಈ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನದಿಂದ ಭಾರತ ಸೇರಿದಂತೆ ಯಾವ ದೇಶದಲ್ಲೂ ಭಯೋತ್ಪಾದನೆ ನಡೆಯುತ್ತಿಲ್ಲ. ಆದರೆ ಭಾರತ, ಪಾಕಿಸ್ತಾನದಲ್ಲೇ ಆಂತರಿಕ ಭದ್ರತೆಗೆ ಸವಾಲೊಡ್ಡಲು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ. ಗಡಿಯಲ್ಲಿ ಯೋಧರನ್ನು ಸಾಲಾಗಿ ನಿಲ್ಲಿಸಿ, ಕಳೆದ ಕೆಲವು ವಾರಗಳಿಂದ ನಮಗೆ ಯುದ್ಧ ಭೀತಿಯಾಡ್ಡುತ್ತಿದೆ. ಇದು ಪಾಕಿಸ್ತಾನ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದು ತರಾಟೆಗೆ ತೆಗೆದುಕೊಂಡಿರುವ ಮುಷರ್ರಫ್‌, ಈಗಲೂ ಭಾರತದ ಜೊತೆ ಕೂತು ಮಾತಾಡಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ.

ಕ್ಷಿಪಣಿ ಪರೀಕ್ಷೆಯೇನೂ ಗಂಭೀರ ಬೆಳವಣಿಗೆಯಲ್ಲ
ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ನಾವು ಇದನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಬಹಳ ಸಂಯಮದಿಂದಿದ್ದೆ. ಈಗ ಸಹನೆ ಮೀರುತ್ತಿದೆ. ಭಯೋತ್ಪಾದನೆ ಮಟ್ಟ ಹಾಕಲೇಬೇಕಾಗಿದೆ ಎಂದಿದ್ದಾರೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X