ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬಿಂದೋ ಕಂಪೆನಿಯಿಂದ ಅಗ್ಗ ಬೆಲೆಗೆ ಏಡ್ಸ್‌ ನಿಯಂತ್ರಣ ಔಷಧಿ

By Staff
|
Google Oneindia Kannada News

ಹೈದರಾಬಾದ್‌: ಅರಬಿಂದೋ ಫಾರ್ಮಾ ಲಿಮಿಟೆಡ್‌ ಕಂಪೆನಿಯು ಎಚ್‌ಐವಿ ಸೋಂಕಿನ ವಿರುದ್ಧದ ಔಷಧಿಗಳ ದರವನ್ನು ಶೇ 30ರಷ್ಟು ಇಳಿಸಿದೆ.

ಎಚ್‌ಐವಿ ಸೋಂಕಿನ ವಿರುದ್ಧದ ಔಷಧಿಗಳು ( ಸ್ಟಾವುಡೈನ್‌, ಲ್ಯಾಮಿವುಡೈನ್‌ ಮತ್ತು ನೆವಿರಾವೈನ್‌ ಸಂಯುಕ್ತಗಳು) ಈಗ ಕೇವಲ 50 ರೂಪಾಯಿಗೆ ದೊರೆಯುತ್ತವೆ ಎಂದು ಭಾನುವಾರ ಕಂಪೆನಿಯ ಪ್ರಕಟಣೆ ತಿಳಿಸಿದೆ. ಜಗತ್ತಿನಾದ್ಯಂತ ಈ ಔಷಧಿಗಳಿಗೆ ಬೇಡಿಕೆಯಿದ್ದು ಎಚ್‌ಐವಿ ಸೋಕಿನ ವಿರುದ್ಧದ ಔಷಧಿಗಳಿಗೆ ವಿಪರೀತ ದರವೆಂಬ ಆಪಾದನೆ ಇತ್ತು.

ಜಗತ್ತಿನಲ್ಲಿರುವ ಎಚ್‌ಐವಿ ರೋಗಿಗಳಿಗೆ ದರ ಇಳಿಕೆ ಪ್ರಕ್ರಿಯೆಯಿಂದ ಹೆಚ್ಚಿನ ಉಪಯೋಗವಾಗಿದೆ ಎಂಬ ನಂಬಿಕೆ ನಮಗಿದೆ ಎಂದು ಕಂಪೆನಿಯ ಉಪಾಧ್ಯಕ್ಷ ಹರಿಹರನ್‌ ಅಭಿಪ್ರಾಯಪಟ್ಟಿದ್ದಾರೆ. ಎಚ್‌ಐವಿ ಸೋಂಕಿರುವ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿ ವಿತರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಬಡ ರಾಷ್ಟ್ರಗಳ ಸರಕಾರಗಳ ಮೇಲೆ ಒತ್ತಡ ಹೇರುತ್ತಲೇ ಬಂದಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X