ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಹೆಚ್ಚು ಗಂಧದ ಮರ! ಶ್ರೀಗಂಧದಕೃಷಿಗೆ ಸರ್ಕಾರದ ಬೆಂಬಲ

By Staff
|
Google Oneindia Kannada News

ಬೆಂಗಳೂರು : ಗಂಧದಗುಡಿ ಎಂದು ಹೆಸರಾದ ರಾಜ್ಯದಲ್ಲಿ ಶ್ರೀಗಂಧದ ಕೃಷಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ ಪ್ರಕಟಿಸಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಗಂಧದ ಕೃಷಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ‘ಹೆಚ್ಚು ಹೆಚ್ಚು ಗಂಧದಮರ’ ಎನ್ನುವ ಕಮ್ಮಟವನ್ನು ಉದ್ಧಾಟಿಸಿ ಮಾತನಾಡಿದ ರವೀಂದ್ರ ಹೇಳಿದರು. ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಟ್‌ ಲಿಮಿಟೆಡ್‌ ಹಾಗೂ ಫ್ರಗ್ರನ್ಸೆಸ್‌ ಅಂಡ್‌ ಫ್ಲೇವರ್ಸ್‌ ಅಸೋಸಿಯೇಷ್‌ ಶುಕ್ರವಾರ ಈ ಕಮ್ಮಟವನ್ನು ಜಂಟಿಯಾಗಿ ಏರ್ಪಡಿಸಿದ್ದವು.

ಗಂಧದ ಮರಗಳ ಕೃಷಿ ಹಾಗೂ ಗಂಧದ ಉತ್ಪನ್ನಗಳ ತಯಾರಿಕೆಯನ್ನು ಸರ್ಕಾರ ಬೆಂಬಲಿಸಲಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಶ್ರೀಗಂಧದ ಪ್ಲಾಂಟೇಶನ್‌ಗಳನ್ನು ರೂಪಿಸಲು ಖಾಸಗಿಯವರಿಗೆ ಅವಕಾಶ ನೀಡಲಾಗುವುದು ಎಂದ ರವೀಂದ್ರ, ಗ್ರಾಮೀಣಾಭಿವೃದ್ಧಿಯಲ್ಲಿ ಗಂಧದ ಮರಗಳ ಕೃಷಿ ಆರ್ಥಿಕವಾಗಿ ವರದಾಯಕವಾಗಬಲ್ಲದು ಎಂದರು.

ಪ್ರಸ್ತುತ 15 ವರ್ಷಗಳಲ್ಲಿ ಗಂಧದ ಮರಗಳು ಪ್ರಬುದ್ಧ ವಯಸ್ಸಿಗೆ ಬರುತ್ತಿದ್ದು , ಈ ಅವಧಿಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕೆಂದು ರವೀಂದ್ರ ಕರೆ ನೀಡಿದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X