ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಿಂದ ಕ್ಷಿಪಣಿ ಪರೀಕ್ಷೆ : ಭಾರತ ನಿರ್ಲಿಪ್ತ,ಅಮೆರಿಕಾ ತಪ್ತ

By Staff
|
Google Oneindia Kannada News

ಇಸ್ಲಮಾಬಾದ್‌ : ಅಮೆರಿಕಾದ ಎಚ್ಚರಿಕೆಯನ್ನು ಕಡೆಗಣಿಸಿ ಪಾಕಿಸ್ತಾನ ಶನಿವಾರ ಕ್ಷಿಪಣಿ ಪರೀಕ್ಷೆ ನಡೆಸಿದೆ.

ಹತಫ್‌ 5/ಘೋರಿ ಮಧ್ಯಮ ಅಂತರದ ಕ್ಷಿಪಣಿ ಪರೀಕ್ಷೆಯನ್ನು ಶನಿವಾರ ಯಶಸ್ವಿಯಾಗಿ ನಡೆಸಲಾಯಿತು ಎಂದು ಅಧಿಕೃತ ಪ್ರಕಟನೆಯನ್ನುಲ್ಲೇಖಿಸಿ ಎಫ್‌ಪಿ ವರದಿ ಮಾಡಿದೆ. ಉತ್ತರ ಪಾಕಿಸ್ತಾನದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು , ಮುಂದಿನ ದಿನಗಳಲ್ಲಿ ಪಾಕ್‌ ಸರಣಿ ಕ್ಷಿಪಣಿ ಪರೀಕ್ಷೆ ನಡೆಸುವ ಸಂಭವವಿದೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಭಾರತ ನಿರ್ಲಿಪ್ತ , ಅಮೆರಿಕಾಕ್ಕೆ ಹತಾಶೆ:
ಶನಿವಾರ ಕ್ಷಿಪಣಿ ಪರೀಕ್ಷೆ ನಡೆಸಿರುವ ಪಾಕಿಸ್ತಾನದ ಕ್ರಮದಿಂದ ಭಾರತ ಪ್ರಚೋದನೆಗೊಳ್ಳುವುದಿಲ್ಲವೆಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇಂಥ ಕ್ರಮಗಳಿಗೆ ನಮ್ಮಿಂದ ಯಾವುದೇ ಪ್ರತಿಕ್ರಿಯೆ ಇಲ್ಲ . ನೀಡಬೇಕಾದ ಪ್ರತಿಕ್ರಿಯೆಯನ್ನು ವಿದೇಶಾಂಗ ಇಲಾಖೆಯ ವಕ್ತಾರರು ಈಗಾಗಲೇ ನೀಡಿದ್ದಾರೆ ಎಂದು ರಕ್ಷಣಾ ವಕ್ತಾರ ಪಿ.ಕೆ.ಭಂಡೋಪಾಧ್ಯಾಯ ತಿಳಿಸಿದ್ದಾರೆ.

ಈ ನಡುವೆ ಕ್ಷಿಪಣಿ ಪರೀಕ್ಷೆ ನಡೆಸಿರುವ ಪಾಕಿಸ್ತಾನದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ, ಉಪಖಂಡದಲ್ಲಿ ಅಶಾಂತಿ ಮೂಡಿರುವ ಸಂದಭದಲ್ಲಿ ಪಾಕ್‌ನ ಈ ನಡವಳಿಕೆ ತನಗೆ ಹತಾಶೆ ಉಂಟು ಮಾಡಿದೆ ಎಂದಿದೆ.

ಯುದ್ಧದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಹಾಗೂ ಪಾಕಿಸ್ತಾನಗಳಿಗೆ ಹೋಗದಿರುವಂತೆಯೂ ತನ್ನ ನಾಗರಿಕರಿಗೆ ಅಮೆರಿಕ ಸೂಚಿಸಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X