ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಂದರ್ಯಕ್ಕಾಗಿ ನಗು... ಜೂ.14 ರಂದು ರಾಜ್ಯಮಟ್ಟದ ನಗು ಸ್ಪರ್ಧೆ

By Staff
|
Google Oneindia Kannada News

ನೀವು ಎಷ್ಟು ಹೊತ್ತು ನಗಬಲ್ಲಿರಿ ?

ಹೆಚ್ಚು ಹೆಚ್ಚು ನಗುವುದು ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆಯೇ ಅಥವಾ ಮೂಡ್‌ ಅವಲಂಬಿಸಿದೆಯೇ ? ಇದೆಂಥ ಪ್ರಶ್ನೆ ಎಂದುಕೊಂಡಿರಾ. ನೀವು ತುಂಬಾ ಹೊತ್ತು ನಗಬಲ್ಲಿರಾದರೆ ಇಲ್ಲಿ ನಿಮಗೊಂದು ಬಹುಮಾನವಿದೆ !

‘ನಾಲ್ಕೂ ನಿಟ್ಟಿನಿಂದ’ ಎಂಬ ಪತ್ರಿಕೆ ತನ್ನ ಹದಿನೈದನೇ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ. ವಾರ್ಷಿಕೋತ್ಸವದ ಅಂಗವಾಗಿ ಪತ್ರಿಕೆಯ ಆಡಳಿತ ಮಂಡಳಿಯು ನಗುವ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯ ಹೆಸರು ‘ನಿಮ್ಮ ಸೌಂದರ್ಯಕ್ಕೆ ನಗು’.

ಇದು ರಾಜ್ಯ ಮಟ್ಟದ ಸ್ಪರ್ಧೆ. ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಲಿರುವ ನಗು-ಸ್ಪರ್ಧಿಗಳು ಯಥಾನುಶಕ್ತಿ ನಕ್ಕು ಬಹುಮಾನ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಅಂದ ಹಾಗೆ ಸ್ಪರ್ಧೆ ನಡೆಯುವುದು ಜೂನ್‌ 14ರಂದು. ಶುಕ್ರವಾರ. ಸ್ಥಳ: ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣ.

ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಸ್ಪರ್ಧೆ ಸಂಜೆ 6 ಗಂಟೆಯವರೆಗೆ ಮುಂದುವರೆಯುತ್ತದೆ. ನಗು-ಸ್ಪರ್ಧಿಗಳು ಕಡ್ಡಾಯವಾಗಿ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂಬುದು ಸ್ಪರ್ಧೆಯ ನಿಯಮ. ಆಸಕ್ತ ನಗು- ಸ್ಪರ್ಧಿಗಳು ತಕ್ಷಣವೇ ಪತ್ರ ಬರೆದು ಹೆಸರು ನೋಂದಾಯಿಸಿಕೊಳ್ಳಬೇಕು. ವಿಳಾಸ: ನ.ಲಿ. ನಾಗರಾಜ್‌, ಸಂಪಾದಕರು, ‘ ನಾಲ್ಕೂ ನಿಟ್ಟಿನಿಂದ’ ಪತ್ರಿಕೆ, ನಂ. 29, 8ನೇ ಮುಖ್ಯ ರಸ್ತೆ, ದತ್ತಾತ್ರೇಯ ನಗರ, ಹೊಸಕೆರೆ ಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು 560 085, ದೂರವಾಣಿ : 080-6721270.

ಇನ್ನೇಕೆ ತಡ, ಹೆಸರು ನೋಂದಾಯಿಸಿಕೊಳ್ಳಿ, ನಗಿ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X