ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನ ಗದರಿದ ಅಮೆರಿಕ ; ಜೂ.4 ರಂದು ಶಾಂತಿದೂತನ ಆಗಮನ

By Staff
|
Google Oneindia Kannada News

ವಾಷಿಂಗ್ಟನ್‌ : ಪದೇ ಪದೇ ಭಯೋತ್ಪಾದಕರ ಆಕ್ರಮಣಗಳ ಕುರಿತು ಭಾರತ ಕೋಪಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಯಾಡಿಸದಿರುವಂತೆ ಪಾಕಿಸ್ತಾನವನ್ನು ಗದರಿಸಿದೆ.

ಉಭಯ ದೇಶಗಳ ನಡುವೆ ಉಂಟಾಗಿರುವ ತ್ವೇಷದ ವಾತಾವರಣವನ್ನು ತಿಳಿಗೊಳಿಸುವ ಉದ್ದೇಶದಿಂದ ಅಮೆರಿಕಾದ ಡೆಪ್ಯುಟಿ ಸೆಕ್ರಟರಿ ಆಫ್‌ ಸ್ಟೇಟ್‌ ರಿಚರ್ಡ್‌ ಆರ್ಮಿಟೇಜ್‌ ಜೂನ್‌ 4 ರಂದು ಇಸ್ಲಮಾಬಾದ್‌ ಹಾಗೂ ದೆಹಲಿಗೆ ಭೇಟಿ ನೀಡುವರೆಂದು ಅಮೆರಿಕ ಪ್ರಕಟಿಸಿದೆ.

ನಿರಂತರ ಉಗ್ರರ ಆಕ್ರಮಣಗಳಿಂಗ ಭಾರತ ಕೋಪಗೊಂಡಿರುವುದು ಹಾಗೂ ಹತಾಶಗೊಂಡಿರುವುದು ನಮಗೆ ಅರ್ಥವಾಗಿದೆ. ಆದರೆ, ಮಿಲಿಟರಿ ಕಾರ್ಯಾಚರಣೆ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಉಪ ವಕ್ತಾರ ಫಿಲಿಪ್‌ ರೀಕರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನಗಳ ನಡುವಣ ಮಾತುಕತೆಗೆ ಆರ್ಮಿಟೇಜ್‌ ಅವರ ಭೇಟಿ ವೇದಿಕೆ ಒದಗಿಸಲಿದೆ ಎನ್ನುವ ವಿಶ್ವಾಸವನ್ನು ರೀಕರ್‌ ವ್ಯಕ್ತಪಡಿಸಿದರು. ಉಪಖಂಡದಲ್ಲಿ ಶಾಂತಿ ಕದಡದಂತೆ ಪ್ರಯತ್ನಿಸುತ್ತಿರುವ ಅಮೆರಿಕ, ಉಭಯ ದೇಶಗಳೊಂದಿಗೆ ನಿರಂತರ ದೂರವಾಣಿ ಸಂಪರ್ಕ ಹೊಂದಿರುವುದಾಗಿ ಅವರು ಹೇಳಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X