ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಬೆಟ್ಟಿಯನ್ನರ ಸೌಂದರ್ಯ ಸ್ಪರ್ಧೆ : ಕಾರ್ಯಾರ್ಥೇ ಸೌಂದರ್ಯ ಸಾಧನ !

By Staff
|
Google Oneindia Kannada News

ಸುರ ಸುಂದರಿ ರಾಜಕುಮಾರಿಯಾಬ್ಬಳಿದ್ದಾಳೆ ಎನ್ನುವ ಕಾರಣಕ್ಕೆ ಪ್ರಸಿದ್ಧವಾಗಿರುವ ರಾಜ್ಯಗಳು, ಆ ರಾಜಕುಮಾರಿಗಾಗಿ ನಡೆವ ಯುದ್ಧಗಳು, ಪ್ರತಿಷ್ಠೆಯಾಗಿ, ಸವಾಲಾಗಿ ರಕ್ತದ ಕೋಡಿ ಹರಿಸುವ ಈ ಸೌಂದರ್ಯವತಿಯರ ಕಥೆಗಳು ಎಷ್ಟೊಂದು ಮಜವಾಗಿರುತ್ತವೆ ಅಲ್ಲವೇ..?

ಕಾರ್ಯಾರ್ಥೇ ಮಿತ್ರಬಾಂಧವಾ ಎನ್ನುವಂತೆ ಕಾರ್ಯಾರ್ಥೇ ಸೌಂದರ್ಯ ಸಾಧನ ಎನ್ನುವುದು ತಪ್ಪಾಗಲಿಕ್ಕಿಲ್ಲವೇನೋ. ಆದರೆ ಸೌಂದರ್ಯ ಎನ್ನುವುದು ಪ್ರತಿಭಟನೆಯ ಧ್ಯೋತಕವಾಗಿ, ಸ್ವಾತಂತ್ರ್ಯದ ಗುರುತಾಗಿ ಬಳಕೆಯಾಗಿರುವ ಉದಾಹರಣೆಯನ್ನು ಕೇಳಿದ್ದೀರಾ...? ಇದು ಸೌಂದರ್ಯ ಸ್ಪರ್ಧೆಗೆ ಸಂಬಂಧಿಸಿದ ವಿಷಯ. ತಮ್ಮ ಹೋರಾಟವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೋಸ್ಕರ ಟಿಬೆಟಿಯನ್ನರು ಸೌಂದರ್ಯ ಸ್ಪರ್ಧೆ ಮೊರೆ ಹೋಗಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಮುಖಾಂತರ ಟಿಬೆಟಿಯನ್ನರು ಎರಡು ಉದ್ದೇಶಗಳನ್ನು ಈಡೇರಿಸಿಕೊಂಡಂತಾಗುತ್ತದೆ. ನಾವು ಪ್ರತ್ಯೇಕದ ಅಸ್ತಿತ್ವ ಹೊಂದಿರುವವರು ಎಂದು ಚೀನಾಕ್ಕೆ ಸೂಚಿಸುವುದು ಮತ್ತು ಟಿಬೆಟಿಯನ್ನರ ಬಳಿಯೂ ಸಾಮರ್ಥ್ಯ ಪ್ರತಿಭೆಗಳಿವೆ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು.

ವಿಶ್ವ ಸುಂದರಿ ಸ್ಪರ್ಧೆಗೆ ಮುಂಚಿತವಾಗಿ ಟಿಬೆಟ್‌ ಸುಂದರಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ತಯಾರಿ ನಡೆದಿದೆ. ಟಿಬೆಟ್‌ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವರು ಕನಿಷ್ಠ ಐದು ಅಡಿ, ಐದು ಇಂಚು ಎತ್ತರ ಇರಬೇಕು. 18ರಿಂದ 26 ವರ್ಷದೊಳಗಿನವರಾಗಿರಬೇಕು. ಕುಳ್ಳಿಯರಿಗೆ ಅವಕಾಶ ಇಲ್ಲ ಎಂದು ಸ್ಪರ್ಧೆಯನ್ನು ಆಯೋಜಿಸುತ್ತಿರುವ ಪತ್ರಕರ್ತೆ, ಲಾಬ್‌ಸ್ಯಾಂಗ್‌ ವಾಂಗ್ಯಲ್‌ ಹೇಳುತ್ತಾರೆ.

ವಿಶ್ವಸುಂದರಿ ಸ್ಪರ್ಧೆಯನ್ನು ಏನಿಲ್ಲವೆಂದರೂ ಒಂದು ಬಿಲಿಯನ್‌ ಜನರು ವೀಕ್ಷಿಸುತ್ತಾರೆ. ಆ ವೇದಿಕೆಯಲ್ಲಿ ಟಿಬೆಟ್‌ ಸುಂದರಿ, ಅಭಿಮಾನಿಗಳತ್ತ ಕೈ ಆಡಿಸಿ ಕಿರೀಟ ಧರಿಸುವುದು ಎಂಥ ಖುಷಿಯ ಸಂಗತಿ ಎಂದು ವಾಂಗ್ಯಲ್‌ ಪುಳಕಗೊಳ್ಳುತ್ತಾರೆ. ಮಿಸ್‌ ಟಿಬೆಟ್‌ ಸ್ಪರ್ಧೆಯು ಅಕ್ಟೋಬರ್‌ 12ರಂದು ನಡೆಯಲಿದೆ.

ಈ ಸ್ಪರ್ಧೆಯನ್ನು ಚೀನೀಯರು ವಿರೋಧಿಸುತ್ತಾರೆ ಎಂಬುದು ಟಿಬೆಟಿಯನ್ನರಿಗೆ ಗೊತ್ತಿದೆ. ಚೀನೀಯರಿಗೆ ಕಿರಿಕಿರಿಯಾಗಲೆಂದೇ ಟಿಬೆಟಿಯನ್ನರು ಈ ಸ್ಪರ್ಧೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಜೇತರಾಗುವ ಮೂವರು ಸುಂದರಿಯರಿಗೆ ಐದು ಸಾವಿರ ಡಾಲರ್‌ ಶೈಕ್ಷಣಿಕ ವಿದ್ಯಾರ್ಥಿ ವೇತನ ನೀಡಲಾಗುವುದು. ಟಿಬೆಟಿಯನ್‌ ಸಂಸ್ಕೃತಿಯನ್ನು ತುಳಿದು ಹಾಕಲು ಪ್ರಯತ್ನಿಸುತ್ತಿರುವ ಚೀನೀಯರಿಗೆ ತಮ್ಮ ಸಂಸ್ಕೃತಿಯ ಮಹತ್ವ ಸಾರುವುದು ಟಿಬೆಟಿಯನ್ನರ ಉದ್ದೇಶ.

ಟಿಬೆಟಿನ ಸೌಂದರ್ಯ ರಾಣಿಯಾಬ್ಬಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರೆ, ಟಿಬೆಟಿಯನ್ನರಿಗೆ ಅದೇ ದೊಡ್ಡ ಬಹುಮಾನ ಎಂದು ವಾಂಗ್ಯಲ್‌ ಪುಳಕಗೊಳ್ಳುತ್ತಾರೆ. ಅಕ್ಟೋಬರ್‌ 12ರ ಮಿಸ್‌ ಟಿಬೆಟ್‌ ಸ್ಪರ್ಧೆ ಆಯೋಜಿಸುವುದರಲ್ಲಿ ಸದ್ಯಕ್ಕೆ ವಾಂಗ್ಯಲ್‌ ವ್ಯಸ್ತರು.

(ಇನ್ಫೋ ವಾರ್ತೆ)

Post your views

ಇದನ್ನೂ ಓದಿ...
ಮಾಯಾಬಜಾರಿನಲ್ಲಿ ಶೃತಿ

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X