ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್‌ಎಂ ಕೇಂದ್ರವಾಗಿ ಜೂನ್‌ನಲ್ಲಿ ಬದಲಾಗಲಿರುವ ಮೈಸೂರು ಆಕಾಶವಾಣಿ

By Staff
|
Google Oneindia Kannada News

ಮೈಸೂರು : ದೇಶದ ಅತ್ಯಂತ ಹಳೆಯ ಆಕಾಶವಾಣಿ ಕೇಂದ್ರ ಎನ್ನುವ ಅಗ್ಗಳಿಕೆಯ ಮೈಸೂರು ಆಕಾಶವಾಣಿ ಕೇಂದ್ರ ಜೂನ್‌ ಅಂತ್ಯದಿಂದ ಬಹು ನಿರೀಕ್ಷಿತ ಎಫ್‌ಎಂ ಪ್ರಸಾರವನ್ನು ಆರಂಭಿಸಲಿದೆ.

ಈವರೆಗೂ 1 ಕಿಲೋವ್ಯಾಟ್‌ ಸಾಮರ್ಥ್ಯದ ಟ್ರಾನ್ಸ್‌ಮಿಟರ್‌ ಹೊಂದಿದ್ದ ಆಕಾಶವಾಣಿ ಕೇಂದ್ರ, ಎಫ್‌ಎಂ ಪ್ರಸಾರ ಪ್ರಾರಂಭಿಸುವುದರೊಂದಿಗೆ 10 ಕಿಲೋವ್ಯಾಟ್‌ ಟ್ರಾನ್ಸ್‌ಮಿಟರ್‌ ಸಾಮರ್ಥ್ಯ ಹೊಂದಲಿದೆ ಎಂದು ಮೈಸೂರು ಆಕಾಶವಾಣಿ ಕೇಂದ್ರದ ನಿರ್ದೇಶಕಿ ಜಯಶ್ರೀ ಜಿ. ಶಾನುಭಾಗ್‌ ತಿಳಿಸಿದ್ದಾರೆ.

ಟ್ರಾನ್ಸ್‌ಮಿಷನ್‌ ಗೋಪುರವನ್ನು ಸಿದ್ಧಪಡಿಸಲಾಗಿದ್ದು, ಗೋಪುರಕ್ಕೆ ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸುವ ಕಾರ್ಯವೂ ಮುಗಿದಿದೆ. ಎಫ್‌ಎಂ ಪ್ರಸಾರ ಆರಂಭಿಸಲು ನಿರ್ದೇಶನಾಲಯದ ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ. ಟ್ರಾನ್ಸ್‌ಮಿಟರ್‌ ಸಾಮರ್ಥ್ಯ ಹೆಚ್ಚಳದಿಂದ 100 ಕಿಮೀ ವ್ಯಾಪ್ತಿಯ ಶೋತೃಗಳು ಯಾವುದೇ ಅಡಚಣೆ ಇಲ್ಲದೆ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ಮಂಡ್ಯ, ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೆಗಾಲದ ಶೋತೃಗಳು ಕೂಡ ಇನ್ನು ಮುಂದೆ ಕೇಂದ್ರದ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಜಯಶ್ರೀ ಹೇಳಿದರು.

1935 ರಲ್ಲಿ ಡಾ.ಎಂ.ವಿ.ಗೋಪಾಲಸ್ವಾಮಿ ಅವರಿಂದ ಆರಂಭವಾದ ಮೈಸೂರು ಆಕಾಶವಾಣಿ ಕೇಂದ್ರ ದೇಶದ ಅತ್ಯಂತ ಹಳೆಯ ಆಕಾಶವಾಣಿ ಕೇಂದ್ರಗಳಲ್ಲಿ ಒಂದು. ಆಕಾಶವಾಣಿ ಎನ್ನುವ ಪದ ಪ್ರಯೋಗ ಕೂಜ ಮೈಸೂರಿನ ಕೊಡುಗೆ ಎಂದು ಜಯಶ್ರೀ ತಿಳಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X