ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಶ್ಯಬ್ಯಾಂಕ್‌ಲಾಭಾಂಶದಲ್ಲಿ ಶೇ.78 ಹೆಚ್ಚಳ; 68.75 ಕೋಟಿ ರು.ನಿವ್ವಳಲಾಭ

By Staff
|
Google Oneindia Kannada News

ಬೆಂಗಳೂರು : ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಂಬಿಕೆಯ ಛಾಪನ್ನು ಮೂಡಿಸಿರುವ ವೈಶ್ಯ ಬ್ಯಾಂಕ್‌ 2001-02 ನೇ ಇಸವಿಯಲ್ಲಿ 68.75 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು , ಲಾಭಾಂಶದಲ್ಲಿ ಕಳೆದ ವರ್ಷಕ್ಕಿಂತ ಶೇ.78 ರ ಹೆಚ್ಚಳ ಸಾಧಿಸಿದೆ.

ಲಾಭಾಂಶ ಹೆಚ್ಚಳದ ಸಂಭ್ರಮದಲ್ಲಿರುವ ವೈಶ್ಯ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಉದ್ದೇಶದಿಂದ ಜೂನ್‌ ತಿಂಗಳಿಂದ ‘ಸಂಬಂಧ್‌’ ಹೆಸರಿನ ಡೆಬಿಟ್‌ ಕಾರ್ಡ್‌ ಹಾಗೂ ‘ಮಿ ಬ್ಯಾಂಕ್‌’ ಹೆಸರಿನ ಇಂಟರ್ನೆಟ್‌ ಬ್ಯಾಂಕಿಂಗ್‌ ಸೇವೆಗಳನ್ನು ಆರಂಭಿಸಲಿದೆ ಎಂದು ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಕೆ.ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಬಾಲಸುಬ್ರಹ್ಮಣ್ಯಂ ನೀಡಿರುವ ಅಂಕಿ ಅಂಶಗಳ ಪ್ರಕಾರ : 2001-02 ನೇ ಇಸವಿಯಲ್ಲಿ ಬ್ಯಾಂಕ್‌ನ ಒಟ್ಟಾರೆ ವಹಿವಾಟು 16 ಸಾವಿರ ಕೋಟಿ ರುಪಾಯಿಗಳನ್ನು ದಾಟಿದೆ. 8068 ಕೋಟಿ ರುಪಾಯಿ ಠೇವಣಿಗಳು, 4418 ಕೋಟಿ ರುಪಾಯಿ ಅಡ್ವಾನ್ಸ್‌ಗಳು ಹಾಗೂ 3587 ಕೋಟಿ ರು. ಹೂಡಿಕೆಗಳ ವಹಿವಾಟನ್ನು ಬ್ಯಾಂಕ್‌ ನಡೆಸಿದೆ.

ತನ್ನ 2001-02 ನೇ ಇಸವಿಯ ಯಶಸ್ವಿ ಮುನ್ನಡೆಯಿಂದ ಉತ್ತೇಜಿತವಾಗಿರುವ ವೈಶ್ಯ ಬ್ಯಾಂಕ್‌, 2002-03 ನೇ ಇಸವಿಯಲ್ಲಿ 10,085 ಕೋಟಿ ರುಪಾಯಿ ಠೇವಣಿ ಹಾಗೂ 5,147 ಕೋಟಿ ರುಪಾಯಿ ಅಡ್ವಾನ್ಸ್‌ ರೂಪವಾಗಿ ಸಂಗ್ರಹಿಸುವ ಗುರಿ ಹೊಂದಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X