• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಗೆರಡು ಗಿಡ ಕಡ್ಡಾಯ : ಮುಖ್ಯಮಂತ್ರಿ ಕೃಷ್ಣ ಪರಿಸರ ಪ್ರೇಮ

By Staff
|

ಬೆಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಮನೆ ಕಟ್ಟುವವರು ಕನಿಷ್ಠ ಎರಡು ಗಿಡ ನೆಡುವುದನ್ನು ಕಡ್ಡಾಯ ಮಾಡಬೇಕೆಂದು ಪಾಲಿಕೆಗೆ ಕರೆ ಕೊಡುವ ಮೂಲಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪರಿಸರ ಕಾಳಜಿ ವ್ಯಕ್ತಪಡಿಸಿದ್ದಾರೆ. ಸಂದರ್ಭ- ಮಂಗಳವಾರದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪುಣ್ಯ ತಿಥಿ ಆಚರಣೆ.

ಬೆಂಗಳೂರನ್ನು ಸಿಂಗಾಪೂರ್‌ ಆಗಿಸುವ ಬಗೆಗೆ ಮಾತಾಡುತ್ತಿದ್ದ ಮುಖ್ಯಮಂತ್ರಿ ಮಂಗಳವಾರದ ಮಟ್ಟಿಗಂತೂ ಅಪ್ಪಟ ಪರಿಸರ ಪ್ರೇಮಿ. ನಗರದಲ್ಲಿ 1 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು ವಿಶೇಷ. ಇದಕ್ಕೆ ಕಾರಣ ರಾಜೀವ್‌ಗಾಂಧಿಯವರ ಪರಿಸರ ಪ್ರೇಮವಂತೆ. ಉಸಿರಾಡುವ ಈ ಒಂದು ಲಕ್ಷ ಗಿಡಗಳು ರಾಜೀವ್‌ ಅವರನ್ನು ನೆನಪಿಸುತ್ತವಂತೆ.

ಈ ಸಂದರ್ಭದಲ್ಲಿ ಕೃಷ್ಣ ಕೊಂಡಾಡಿದ್ದು ಸೋನಿಯಾ ಗಾಂಧಿಯನ್ನು; ಅವರ ಪರಿಸರ ಪ್ರೇಮಕ್ಕಾಗಿ. ತರಾಟೆಗೆ ತೆಗೆದುಕೊಂಡಿದ್ದು ನರೇಂದ್ರ ಮೋದಿಯನ್ನು; ಗುಜರಾತ್‌ ಹಿಂಸಾಚಾರಕ್ಕಾಗಿ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಅಥವಾ ಅಲ್ಲಿಂದ ಬರುವಾಗ ಕಾರಿನಲ್ಲಿ ಕೂತ ಸೋನಿಯಾ ರಸ್ತೆ ಬದಿಯ ಗಿಡಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾರೆ. ಇದೇ ಅವರ ಪರಿಸರ ಕಾಳಜಿಗೆ ಸಾಕ್ಷಿ ಎಂದರು ಕೃಷ್ಣ.

ಗುಜರಾತ್‌ನಲ್ಲಿ ಕೋಮುಗಳ ನಡುವೆ ದಳ್ಳುರಿ ಹೊತ್ತಿಸಿ, ಮಾನಭಂಗ, ಹೊಡೆದಾಟಗಳಂಥಾ ದುಸ್ಥಿತಿಯನ್ನು ಸೃಷ್ಟಿಸಿರುವುದು ನರೇಂದ್ರ ಮೋದಿ. ಇದರಿಂದ ಎನ್‌ಡಿಎ ಸರ್ಕಾರಕ್ಕೆ ದೊಡ್ಡ ಪೆಟ್ಟಾಗಿದೆ. ತನ್ನ ಮಿತ್ರ ಪಕ್ಷಗಳ ಸಂಖ್ಯೆ ಇವತ್ತು 23 ಇದ್ದರೆ, ನಾಳೆ ಇಪ್ಪತ್ತೆರಡಾಗಿರುತ್ತದೆ. ಇಂಥಾ ಸಮಯದ ಲಾಭ ಪಡೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಬೇಕು ಎಂದು ಕರೆ ಕೊಟ್ಟರು.

ಬೆಂಗಳೂರಿನ 100 ಉದ್ಯಾನಗಳಿಗೆ 16 ಕೋಟಿ ರು. ವೆಚ್ಚದಲ್ಲಿ ಸಿಂಗಾರ

ಮುಖ್ಯಮಂತ್ರಿ ಪರಿಸರ ಕಳಕಳಿಗೆ ತಕ್ಷಣವೇ ಸ್ಪಂದಿಸಿದ್ದು ಪಾಲಿಕೆ ಆಯುಕ್ತ ಎಂ.ಆರ್‌.ಶ್ರೀನಿವಾಸ ಮೂರ್ತಿ. ಈ ಬಾರಿ ಪಾಲಿಕೆ ಉದ್ಯಾನಗಳ ಅಭಿವೃದ್ಧಿಗೆಂದೇ 16 ಕೋಟಿ ರುಪಾಯಿ ಮೀಸಲಿಟ್ಟಿದೆ. ಇದೇ ಮೊದಲ ಬಾರಿಗೆ ಈ ಮೊತ್ತದ ಬಜೆಟ್ಟನ್ನು ಉದ್ಯಾನಗಳನ್ನು ಉದ್ಧರಿಸಲು ಮೀಸಲಿಡಲಾಗಿದೆ. 100 ವಾರ್ಡ್‌ಗಳ ತಲಾ ಒಂದೊಂದು ಉದ್ಯಾನವನ್ನು ಪಾಲಿಕೆ ಅಭಿವೃದ್ಧಿ ಪಡಿಸಲಿದೆ ಎಂದು ಶ್ರೀನಿವಾಸ ಮೂರ್ತಿ ಹೇಳಿದರು.

ಇದಲ್ಲದೆ ಬಸವನ ಗುಡಿಯ ಎಂ.ಎನ್‌.ಕೃಷ್ಣರಾವ್‌ ಪಾರ್ಕ್‌, ಕೆಂಪಾಂಬುಧಿ ಉದ್ಯಾನ, ತಾವರೆಕೆರೆ ಪಾರ್ಕ್‌, ಮತ್ತಿಕೆರೆಯ ಜಯಪ್ರಕಾಶ್‌ ನಾರಾಯಣ್‌ ಪಾರ್ಕ್‌ ಮೊದಲಾದ 20 ಬೃಹತ್‌ ಉದ್ಯಾನಗಳನ್ನೂ ಪಾಲಿಕೆ ಅಭಿವೃದ್ಧಿ ಪಡಿಸುತ್ತಿದೆ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more