• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಜೀವಮಾನದಲ್ಲೇ ಇಂಥಾ ಕಳಪೆ ಆಡಳಿತ ಕಂಡಿಲ್ಲ-ದೇವೇಗೌಡ

By Staff
|

ಉಡುಪಿ : ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ನನ್ನ ಜೀವಮಾನದಲ್ಲೇ ಇಷ್ಟು ಕಳಪೆ ಆಡಳಿತ ಕಂಡಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ದೇವೇಗೌಡ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಚುನಾವಣೆಯ ನಂತರ ಎನ್‌ಡಿಎ ಹೇಳ ಹೆಸರಿಲ್ಲದೆ ಮರೆಯಾಗಲಿದೆ. ಇದಕ್ಕೆ ಪರ್ಯಾಯವಾದ ಸರ್ಕಾರ ರಚಿಸಲು ಒಗ್ಗಟ್ಟಿನ ಕೊರತೆಯಿದೆ. ಈ ನಿಟ್ಟಿನಲ್ಲಿ ತೃತೀಯ ರಂಗವನ್ನು ರಚಿಸಿದ್ದು, ಅದನ್ನು ಬಲ ಪಡಿಸಲು ಶತಾಯ ಗತಾಯ ಯತ್ನಿಸುತ್ತಿದ್ದೇನೆ ಎಂದರು.

ಕಾಂಗ್ರೆಸ್‌ನ ಜನಪ್ರಿಯತೆ ಮಸುಕಾಗಿದೆ. ಬಿಜೆಪಿ ಮುಳುಗಿದ ಹಡಗಿನಂತಾಗಿದೆ. ಎಸ್‌.ಎಂ.ಕೃಷ್ಣ ನಂಬರ್‌ ಒನ್‌ ಮುಖ್ಯಮಂತ್ರಿಗಳೆಂಬುದು ಮಾಧ್ಯಮದವರು ಮಾಡಿರುವ ಸೃಷ್ಟಿ ಎಂದು ದೇವೇಗೌಡ ಸುದ್ದಿಗಾರರತ್ತ ಬೆರಳು ತೋರಿದರು.

ಈಗಿನ ಎಲ್ಲಾ ಅಡಚಣೆಗಳನ್ನು ಸರಿ ಪಡಿಸಿ, ದಳ ಬಣಗಳನ್ನು ಒಗ್ಗೂಡಿಸುವ ಕೆಲಸ ಕೂಡ ಚುರುಕಾಗಲಿದೆ. ಇವತ್ತಿನ ದುಸ್ಥಿತಿಗೆ ಕೆಲವು ಮುಖಂಡರ ಧೋರಣೆಗಳೇ ಕಾರಣ ಎಂದು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more