ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮ ಬದುಕಿದ್ದಾನಾ? ಹೌದೆನ್ನುತ್ತಿದೆ ಹೊಸ ವಿಡಿಯೋ ಕೆಸೆಟ್‌ !

By Staff
|
Google Oneindia Kannada News

ಲಂಡನ್‌ : ಕಲ್ಲು ಕಟ್ಟಡವೊಂದರ ಮುಂದೆ ಯಾರದ್ದೋ ಜೊತೆ ಮಾತಾಡುತ್ತಾ ನಿಂತಿರುವ ಒಸಾಮ ಬಿನ್‌ ಲ್ಯಾಡೆನ್‌ನನ್ನು ಚಿತ್ರಿಸಲಾಗಿರುವ ವಿಡಿಯೋ ಸೋಮವಾರ ಬಿಡುಗಡೆಯಾಗಿದೆ.

ಅಲ್‌-ಅನ್ಸಾರ್‌ ಎಂಬ ಇಸ್ಲಾಮಿಕ್‌ ಸುದ್ದಿ ಸಂಸ್ಥೆ ಈ ಕೆಸೆಟ್ಟನ್ನು ಬಿಡುಗಡೆ ಮಾಡಿದ್ದು, ಇದನ್ನು ಇದೇ ವರ್ಷ ಮಾರ್ಚ್‌ ತಿಂಗಳಲ್ಲಿ ಚಿತ್ರಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಈ ಹಿಂದೆ ಒಸಾಮನ ಕೆಸೆಟ್ಟುಗಳನ್ನು ಬಿಡುಗಡೆ ಮಾಡಿರುವ ಅರಬ್‌ ಉಪಗ್ರಹ ಸುದ್ದಿಸಂಸ್ಥೆ ಅಲ್‌- ಜಜೀರಾ ಪ್ರಕಾರ ಇದು ಹೊಸ ಕೆಸೆಟ್ಟಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚಿತ್ರಿಸಿರುವುದು.

ಒಂದು ವೇಳೆ ಅಲ್‌- ಅನ್ಸಾರ್‌ ಹೇಳುತ್ತಿರುವುದು ದಿಟವೇ ಆಗಿದ್ದಲ್ಲಿ ಒಸಾಮ ಮತ್ತೆ ಹುನ್ನಾರ ಹೊಸೆಯುತ್ತಿದ್ದಾನೆ. ಅಲ್‌- ಕ್ವೈದಾ ಸಂಘಟನೆ ಇನ್ನೂ ಜೀವಂತವಾಗಿದೆ!

ಪತ್ರಿಕಾ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮೆರಿಕಾ ಉಪಾಧ್ಯಕ್ಷ ಡಿಕ್‌ ಚೆನಿ ಪ್ರಕಾರ, ಅಲ್‌- ಕ್ವೆ ೖದಾ ಮತ್ತೆ ದಾಳಿಯಿಡುವುದು ಹದಿನಾರಾಣೆ ಸತ್ಯ. ಅದು ಇಂದು, ನಾಳೆ, ಇನ್ನೊಂದು ವಾರದ ನಂತರ ಯಾವಾಗಲಾದರೂ ಆಗಬಹುದು. ಸಾಕಷ್ಟು ಅಲ್‌-ಕ್ವೆ ೖದಾ ಕೇಂದ್ರಗಳನ್ನು ಅಮೆರಿಕ ನಾಶ ಮಾಡಿರುವುದು ದಿಟ. ಉಗ್ರ ಸಂಘಟನೆಯ ಜಂಘಾಬಲ ಮೊದಲಿನಷ್ಟು ಇಲ್ಲವೆಂಬುದೂ ದಿಟ. ಹಾಗಂತ ನಾವು ನಿದ್ದೆ ಮಾಡುವ ಹಾಗಿಲ್ಲ. ಅಲ್‌-ಕ್ವೆ ೖದಾ ಇನ್ನೂ ಉಸಿರಾಡುತ್ತಿದೆ. ಸೆಪ್ಟೆಂಬರ್‌ 11ರ ದಾಳಿಯಷ್ಟೇ ಸತ್ಯದ ಸಂಗತಿಯೆಂದರೆ, ಈ ಸಂಘಟನೆ ಮತ್ತೆ ದಾಳಿಯಿಡುವ ಹುನ್ನಾರ ನಡೆಸಿದೆ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X