For Daily Alerts
ಸ್ಪೈಸ್ ಗ್ರಾಹಕರೇ, ನಿಮ್ಮ ಮೊಬೈಲ್ ಫೋನ್ ದರ ಕಡಿತವಾಗಿದೆ
ಬೆಂಗಳೂರು : ಸೆಲ್ಯುಲಾರ್ ಸಂಪರ್ಕ ಇದೀಗ ಇನ್ನೂ ಅಗ್ಗ. ಕ್ಷೇತ್ರದಲ್ಲಿನ ದರ ಸಮರಕ್ಕೆ ಗ್ರಾಹಕ ಧನ್ಯವಾದ ಹೇಳಬೇಕು. ಏರ್‌ಟೆಲ್ ಕಂಪನಿ ದರಗಳನ್ನು ತಗ್ಗಿಸಿದ ಬೆನ್ನಲ್ಲೇ ಸ್ಪೈಸ್ ಕೂಡ ಗ್ರಾಹಕ ಮಿತ್ರನಾಗಲು ಹೊರಟಿದೆ.
ಸ್ಪೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸೀನ್ ಡೆಕ್ಸ್‌ಟರ್ ಹೇಳಿರುವಂತೆ ಕಂಪನಿಯ ತಗ್ಗಿಸಿರುವ ದರದ ಸ್ವರೂಪದಿಂದ ಗ್ರಾಹಕರಿಗಾಗುವ ಲಾಭಗಳು...
- 30 ಹಾಗೂ 60 ಸೆಕೆಂಡ್‌ಗಳ ಬಿಲ್ಲಿಂಗ್ ವ್ಯವಸ್ಥೆ. ಗ್ರಾಹಕರು ತಮಗೆ ಅನುಕೂಲವಾಗುವಂತೆ ಬಿಲ್ಲಿಂಗ್ ಮಾಡಿಸಿಕೊಳ್ಳಬಹುದು. ಅಷ್ಟೇ ಅಲ್ಲ ಯಾವುದೇ ಸಮಯದಲ್ಲಿ ನಿಮ್ಮ ಬಿಲ್ಲಿಂಗ್ ಛಾಯ್ಸ್ ಬದಲಿಸಿಕೊಳ್ಳಬಹುದು.
- ಇನ್ನು ಮುಂದೆ ಹಗಲು ಹೊತ್ತಿನಲ್ಲೇ ಪ್ರತಿ 30 ಸೆಕೆಂಡ್ ಸ್ವೀಕೃತ (ಇನ್‌ಕಮಿಂಗ್) ಕರೆಗೆ 38 ಪೈಸೆಯಷ್ಟು ದರ ಕಡಿತವಾಗಲಿದೆ.
- ಸರಳ ಗ್ರಾಹಕರು ಈಗ ಪ್ರತಿ 30 ಸೆಕೆಂಡ್ ಸ್ವೀಕೃತ ಹಾಗೂ ಮಾಡುವ ಕರೆಗೆ 1.49 ರುಪಾಯಿ ಕಟ್ಟಬೇಕಾಗುತ್ತದೆ.
- Uth ಗ್ರಾಹಕರು ಪಾರ್ಟಿ ಅವಧಿಯಲ್ಲಿ ಪ್ರತಿ 30 ಸೆಕೆಂಡ್ ಕರೆಗೆ ಕೇವಲ 50 ಪೈಸೆ ತೆರಬೇಕು. ಈ ಮೊದಲು ಇದೇ ಕರೆಯ ದರ 75 ಪೈಸೆಯಾಗಿತ್ತು.
ಅಂದಹಾಗೆ, ಹುಚಿಸನ್ ಮತ್ತು ಬಿಸ್‌ಎನ್‌ಎಲ್ ಮೊಬೈಲ್ ದೂರವಾಣಿ ಕ್ಷೇತ್ರದಲ್ಲಿ ಇನ್ನಷ್ಟು ಸ್ಪರ್ಧೆಯಾಡ್ಡಲಿವೆ. ಆಗ ಸೆಲ್‌ಫೋನ್ ಕರೆಯ ದರ ದೂರವಾಣಿ ಕರೆಯ ದರಕ್ಕಿಂತ ಅಗ್ಗವಾದರೂ ಆದೀತು.
ಮುಖಪುಟ / ಇವತ್ತು... ಈ ಹೊತ್ತು...