ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ- ಬ್ಯಾಂಕಿಂಗ್‌ : ಜಮೈಕ ಬ್ಯಾಂಕ್‌ನೊಂದಿಗೆಇನ್ಫೋಸಿಸ್‌ ಒಪ್ಪಂದ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲುಗಳನ್ನು ಸಾಧಿಸುತ್ತ ಮುನ್ನಡೆದಿರುವ ಇನ್ಫೋಸಿಸ್‌, ಈಗ ವಿದ್ಯುನ್ಮಾನ ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ಮುನ್ನಡೆದಿದೆ.

ರಾಷ್ಟ್ರೀಯ ಜಮೈಕ ವಾಣಿಜ್ಯ ಬ್ಯಾಂಕ್‌ ಲಿಮಿಟೆಡ್‌ನೊಂದಿಗೆ ತಂತ್ರಜ್ಞಾನ ಕುರಿತಾದ ಒಪ್ಪಂದ ಮಾಡಿಕೊಂಡಿರುವುದಾಗಿ ಇನ್ಫೋಸಿಸ್‌ ಟೆಕ್ನಾಲಜೀಸ್‌ ಶುಕ್ರವಾರ ಪ್ರಕಟಿಸಿದೆ. ಇನ್ಫೋಸಿಸ್‌ ಟೆಕ್ನಾಲಜೀಸ್‌ನ ವಿದ್ಯುನ್ಮಾನ ವಾಣಿಜ್ಯ ಬ್ಯಾಂಕಿಂಗ್‌ ನೀತಿ ಅಳವಡಿಕೆ ಹಿನ್ನೆಲೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.

ಜಮೈಕ ಬ್ಯಾಂಕ್‌ ಸಹಯೋಗದೊಂದಿಗೆ ಇನ್ಫೋಸಿಸ್‌ ಟೆಕ್ನಾಲಜೀಸ್‌ ರೂಪಿಸಿರುವ ಇ- ವೇದಿಕೆಯಲ್ಲಿ Finacle Core Banking, BankAway Multi Channel Solution ಹಾಗೂ Finacle CRM ಸೇರಿವೆ.

ಇನ್ಫೋಸಿಸ್‌ ತನ್ನ ವಿದ್ಯುನ್ಮಾನ ಬ್ಯಾಂಕಿಂಗ್‌ ವಾಣಿಜ್ಯ ಘಟಕದಡಿ ವಿವಿಧ ಮೌಲ್ಯ ವರ್ಧಿತ ಸೇವೆಗಳನ್ನು ಒದಗಿಸಲಿದೆ. ಬ್ಯಾಂಕಿಂಗ್‌ ಸೇವೆಗಳನ್ನು ಇನ್ನಷ್ಟು ಸರಳಗೊಳಿಸುವಲ್ಲಿ ಈ ಘಟಕ ಹೆಚ್ಚು ಉಪಯುಕ್ತವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X