• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮೂಳೆ ಮುರಿತದ ನೋವಿಗಿಂತ ಪಂದ್ಯಡ್ರಾಆಗಿದ್ದಕ್ಕಾದ ನೋವೇ ಹೆಚ್ಚು’

By Staff
|

ಬೆಂಗಳೂರು : ದವಡೆ ಮೂಳೆ ಮುರಿತದ ನೋವಿಗಿಂತ ಮೊದಲ ಇನ್ನಿಂಗ್ಸ್‌ನಲ್ಲಿ 500 ರನ್‌ ಹೊಡೆದರೂ ವಿಂಡೀಸ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳಬೇಕಾದದ್ದು ಇನ್ನೂ ನೋವುಂಟುಮಾಡಿತು ಎಂದು ಅನಿಲ್‌ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.

ಗುರುವಾರ ದವಡೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕುಂಬ್ಳೆ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಹೊರಟುವ ಮುನ್ನ ಸುದ್ದಿಗಾರರ ಜೊತೆ ಮಾತಾಡಿದರು. ಅದರ ಸಾರ ಹೀಗಿದೆ...

ಈಗ ನೋವೇನೂ ಇಲ್ಲ. ಸದ್ಯಕ್ಕೆ ಅರೆ ಗಟ್ಟಿ ಆಹಾರ ತೆಗೆದುಕೊಳ್ಳುವಂತೆ ಡಾಕ್ಟರ್‌ ಹೇಳಿದ್ದಾರೆ. ಇನ್ನೊಂದು ವಾರದೊಳಗೆ ನಾನು ನೆಟ್‌ ಪ್ರಾಕ್ಟೀಸ್‌ ಶುರುಮಾಡುತ್ತೇನೆ. ದವಡೆಯ ಮುರಿದ ಮೂಳೆ ಇನ್ನಷ್ಟು ಬಿರುಕು ಕಾಣದಂತೆ ತಂಡದ ದೈಹಿಕ ತಜ್ಞ ಆ್ಯಂಡ್ರೂ ಲೀಪಸ್‌ ಚೆನ್ನಾಗಿ ಬ್ಯಾಂಡೇಜ್‌ ಮಾಡಿದರು. ಅವರಿಗೆ ನನ್ನ ಧನ್ಯವಾದಗಳು.

ಬಹುಶಃ ನಾನು ಆ ಟೆಸ್ಟ್‌ ಪಂದ್ಯದಲ್ಲಿ ಪೂರ್ತಿ ಆಡಿದ್ದರೆ, ಭಾರತ ಗೆದ್ದಿರುತ್ತಿತ್ತೇನೋ. ಹೂಪರ್‌ನ ಔಟ್‌ ಮಾಡಿದ್ದರೆ ಅದು ಖಂಡಿತ ಸಾಧ್ಯವಾಗುತ್ತಿತ್ತು. ನಾನು ಅವರನ್ನು ಔಟ್‌ ಮಾಡಿದ್ದೆ. ಆದರೆ ದುರದೃಷ್ಟವಶಾತ್‌ ನೋ ಬಾಲ್‌ ಮಾಡಿಬಿಟ್ಟಿದ್ದೆ. ದವಡೆ ಮೂಳೆ ಮುರಿದ ನಂತರವೂ ಬೌಲ್‌ ಮಾಡಿದ್ದು ನನ್ನ ದೊಡ್ಡ ಸಾಧನೆಯೇನೂ ಅಲ್ಲ. ಈ ಹಿಂದೆ ಪಟೌಡಿ, ಬಿ.ಎಸ್‌.ಚಂದ್ರಶೇಖರ್‌, ವೆಂಕಟಪತಿ ರಾಜು, ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌ ಮೊದಲಾದವರು ಮೂಳೆ ಮುರಿದ ನಂತರವೂ ಆಡಿ, ಎಷ್ಟೋ ಪಂದ್ಯಗಳನ್ನು ಉಳಿಸಿಕೊಟ್ಟಿದ್ದಾರೆ. ಒಬ್ಬ ಅಂತರರಾಷ್ಟ್ರೀಯ ಆಟಗಾರನಾಗಿ ನೀವು ಚೆನ್ನಾಗಿ ಆಡಬೇಕಷ್ಟೆ. ಅದನ್ನು ಮಾಡುವ ಪ್ರಯತ್ನವನ್ನು ನಾನು ಮಾಡಿದೆ ಅಷ್ಟೆ.

ದವಡೆ ಮೂಳೆ ಮುರಿದಿದ್ದಕ್ಕೆ ಸ್ವಲ್ಪ ಬೇಜಾರಾಗಿದ್ದು ನಿಜ. ನನ್ನ ಹೆಂಡತಿ ಚೇತನ ನನಗೆ ಸಾಕಷ್ಟು ಚೇತನ ಕೊಟ್ಟಿದ್ದಾಳೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಜಗನ್ಮೋಹನ ದಾಲ್ಮಿಯಾ ನನಗೆ ಮೂಳೆ ಮುರಿದದ್ದು ಗೊತ್ತಾದ ಕೂಡಲೇ ಫೋನ್‌ ಮಾಡಿದ್ದರು. ಆಸ್ಪತ್ರೆಯ ಎಲ್ಲಾ ಖರ್ಚನ್ನೂ ಮಂಡಳಿಯೇ ಭರಿಸುವುದಾಗಿ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more