ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಗೆ ಶಹಬ್ಭಾಸ್‌ಗಿರಿ; ಅತ್ಯುತ್ತಮ ಇ-ಗವರ್ನೆನ್ಸ್‌ ರಾಜ್ಯವಾಗಿ ಕರ್ನಾಟಕ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಪಥದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸರ್ಕಾರಕ್ಕೆ ಈಗ ಇನ್ನೊಂದು ಸಾಧನೆಯ ಗರಿ. ಕಂಪ್ಯೂಟರ್‌ ಸೊಸೈಟಿ ಆಫ್‌ ಇಂಡಿಯಾ (ಸಿಎಸ್‌ಐ)ದ 2000-01 ನೇ ಇಸವಿಯ ಅತ್ಯುತ್ತಮ ಇ-ಗವರ್ನೆನ್ಸ್‌ ಪ್ರಶಸ್ತಿ ಕೃಷ್ಣ ಕಿರೀಟಕ್ಕೆ!

ಅತ್ಯುತ್ತಮ ವಿದ್ಯುನ್ಮಾನ ಆಡಳಿತ ಪ್ರಶಸ್ತಿಯನ್ನು ಗುರುವಾರ ಸ್ವೀಕರಿಸಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಕಳೆದ ಎರಡೂವರೆ ವಷಗಳಲ್ಲಿ ವಿದ್ಯುನ್ಮಾನ ಆಡಳಿತ ಜಾರಿಯ ಹಾದಿಯಲ್ಲಿ ರಾಜ್ಯದ ಸಾಧನೆಗೆ ಸಂದ ಪ್ರತಿಫಲ ಎಂದು ಪ್ರಶಸ್ತಿಯನ್ನು ಬಣ್ಣಿಸಿದರು. ಪ್ರಶಸ್ತಿಯ ಕುರಿತು ಅವರು ಅತೀವ ಸಂತೋಷ, ಹೆಮ್ಮೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವಿದ್ಯುನ್ಮಾನ ಆಡಳಿತ ಜಾರಿ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಎಲ್ಲ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳನ್ನು ಕಂಪ್ಯೂಟರೀಕರಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಭೂಮಿ ಯೋಜನೆಯಡಿಯಲ್ಲಿ ಎಲ್ಲ ಭೂ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಳವಡಿಸಲಾಗಿದ್ದು , ಪ್ರಸ್ತುತ ಎಲ್ಲ ಟ್ರೆಜರಿಗಳನ್ನು ಕಂಪ್ಯೂಟರೀಕರಿಸಲು ಯೋಜಿಸಲಾಗುತ್ತಿದೆ. ಇದರಿಂದಾಗಿ ಟ್ರೆಜರಿ ಆಡಳಿತ ಪಾರದರ್ಶಕವಾಗುವುದಲ್ಲದೆ, ಭ್ರಷ್ಟಾಚಾರಕ್ಕೆ ಲಗಾಮು ಹಾಕಿದಂತಾಗುತ್ತದೆ ಎಂದು ಕೃಷ್ಣ ತಿಳಿಸಿದರು.

ವಿದ್ಯುನ್ಮಾನ ಆಡಳಿತದ ನಂತರದ ಹಂತದಲ್ಲಿ ನ್ಯಾಯಾಲಯದ ಆದೇಶಗಳ ಪ್ರತಿಗಳನ್ನು ಕಂಪ್ಯೂಟರೀಕರಣಗೊಳಿಸಲಾಗುವುದು. ಸಿಎಸ್‌ಐ ಮಾರ್ಗದರ್ಶನ ಪಡೆಯುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ವಿದ್ಯುನ್ಮಾನ ಆಡಳಿತ ಜಾರಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಕೃಷ್ಣ ಹೇಳಿದರು.
(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X