ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಪಾಪಿಗಳ ಲೋಕದ ಕುಖ್ಯಾತ ಮುತ್ತಪ್ಪ ರೈ ಬಂಧನ

By Staff
|
Google Oneindia Kannada News

ಬೆಂಗಳೂರು : ದುಬೈನಲ್ಲಿ ತಲೆ ಮರೆಸಿಕೊಂಡಿದ್ದ ಭೂಗತ ಲೋಕದ ಕುಖ್ಯಾತ ಮುತ್ತಪ್ಪ ರೈ ದುಬೈ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಇಂಟರ್‌ಪೋಲ್‌ ಅಧಿಕಾರಿಗಳ ನೆರವಿನೊಂದಿಗೆ ದುಬೈ ಪೊಲೀಸರು ಮುತ್ತಪ್ಪ ರೈನನ್ನು ಆತನ ನಿವಾಸದಲ್ಲಿಯೇ ಸೋಮವಾರ ರಾತ್ರಿ ಬಂಧಿಸಿದ್ದಾರೆ. ಬೆಂಗಳೂರಿನ ಭೂಗತ ಚಟುವಟಿಕೆಗಳನ್ನು ದುಬೈನಿಂದಲೇ ನಿಯಂತ್ರಿಸುತ್ತಿದ್ದ ಕುಖ್ಯಾತ ಮುತ್ತಪ್ಪನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಬೆಂಗಳೂರು ಪೊಲೀಸರು ಇಂಟರ್‌ಪೋಲ್‌ನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಈ ನಡುವೆ ದೆಹಲಿ ಹಾಗೂ ಮುಂಬಯಿ ಪೊಲೀಸರು ಕೂಡ ಮುತ್ತಪ್ಪ ರೈನನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಮುತ್ತಪ್ಪ ರೈ ನಿವಾಸವನ್ನು ಸುತ್ತುವರಿದ ಪೊಲೀಸರು ಮೊದಲಿಗೆ ಆತನ ಪತ್ನಿ ಹಾಗೂ ಪುತ್ರಿಯನ್ನು ಬಂಧಿಸಿದ್ದು , ಆನಂತರ ಮಧ್ಯರಾತ್ರಿಯ ಸುಮಾರಿಗೆ ಮನೆಗೆ ಆಗಮಿಸಿದ ರೈನನ್ನು ಬಂಧಿಸಿದ್ದಾರೆ. ಅನೇಕ ಅಪಹರಣ ಹಾಗೂ ಕೊಲೆ ಪ್ರಕರಣಗಳಲ್ಲಿ ಮುತ್ತಪ್ಪ ರೈ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X