ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 24ರಿಂದ ಇತಿಹಾಸ ಪ್ರಸಿದ್ಧ ಅವ್ವೇರ ಹಳ್ಳಿ ರೇವಣಸಿದ್ಧೇಶ್ವರ ಜಾತ್ರೆ

By Staff
|
Google Oneindia Kannada News

ರಾಮನಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಅವ್ವೇರ ಹಳ್ಳಿ ರೇವಣಸಿದ್ಧೇಶ್ವರ ಬೆಟ್ಟದ ಜಾತ್ರೋತ್ಸವವು ಮೇ 24ರಿಂದ 28ರತನಕ ನಡೆಯಲಿದೆ.

ರಾಮನಗರ ತಾಲ್ಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ರೇವಣಸಿದ್ಧೇಶ್ವರ ಸ್ವಾಮಿಯ ಆರಾಧನಾ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಭಕ್ತರ ಉದ್ಧಾರಕ್ಕಾಗಿ ಕಲ್ಲಿಪ್ಪಾಡಿ ಸೋಮನಾಥ ಲಿಂಗದಿಂದ ಶ್ರೀ ರೇಣುಕಾಚಾರ್ಯರು ಉದ್ಭವಿಸಿದರು ಎಂಬ ನಂಬಿಕೆ ಇಲ್ಲಿದೆ.

ಶ್ರೀ ಸ್ವಾಮಿಗಳ ಸಂಭ್ರಮದ ಜಾತ್ರೋತ್ಸವ ಮೇ 24ರಂದು ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ. ಜಾತ್ರೆಯ ಅಂಗವಾಗಿ 24ರ ಶುಕ್ರವಾರ ಗಣಪತಿ ಪೂಜೆ, ಸ್ವಸ್ತಿ ವಾಚನ, ಅಂಕುರಾರ್ಪಣೆ, ಮೇ 25ರಂದು ಗಿರಿಜಾ ಕಲ್ಯಾಣ ಮತ್ತು ಬಸವೇಶ್ವರ ಅಗ್ನಿ ಕುಂಡ, ಮೇ 26ರಂದು ಮಹಾ ರಥೋತ್ಸವ 27ರಂದು ಗಿರಿ ಪ್ರದಕ್ಷಿಣೆ, ರಾವಣಾಸುರ ವಾಹನೋತ್ಸವ, 28ರ ಭಾನುವಾರ ರುದ್ರಾಕ್ಷಿ ಮಂಟಪೋತ್ಸವ, ಅಡ್ಡ ಪಲ್ಲಕಿ ಉತ್ಸವ ಮತ್ತು ಶಯನೋತ್ಸವಗಳು ನಡೆಯಲಿವೆ.

(ಇನೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X