ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ಮೇ ತಿಂಗಳಂತ್ಯಕ್ಕೆ ಉಚಿತ ಹೃದಯ ತಪಾಸಣಾ ಶಿಬಿರ

By Staff
|
Google Oneindia Kannada News

ಬೆಂಗಳೂರು: ನಗರದ ಪ್ರಮುಖ ಹೃದ್ರೋಗ ಆಸ್ಪತ್ರೆ ನಾರಾಯಣ ಹೃದಯಾಲಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಮೇ ತಿಂಗಳಂತ್ಯದಲ್ಲಿ ಆಯೋಜಿಸಲಾಗಿದೆ.

ಹಿರಿಯ ನಾಗರಿಕರ ಸಂಘಟನೆಯ ಜೀವಾವಧಿ ಅಧ್ಯಕ್ಷ ಕೆ. ಎಂ. ಜಾರ್ಜ್‌ ಈ ವಿಷಯವನ್ನು ತಿಳಿಸಿದ್ದು, ಹೃದಯ ತಪಾಸಣೆ ಮಾಡಿಕೊಳ್ಳಬಯಸುವ ಹಿರಿಯ ನಾಗರಿಕರು ಮೇ 20ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.

ಈ ಹಿಂದೆಯೂ ಹಿರಿಯರ ನಾಗರಿಕರ ಸಂಘದ ವತಿಯಿಂದ ಮಣಿಪಾಲ್‌ ಹಾರ್ಟ್‌ ಫೌಂಡೇಶನ್‌ನಲ್ಲಿ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣು ತಪಾಸಣಾ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು. ಇದೇ ಮಾದರಿಯಲ್ಲಿ ನಡೆಯುವ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಸಂಘದ ಕಾರ್ಯಾಲಯವನ್ನು ಸಂಪರ್ಕಿಸಬಹುದು. ಹಿರಿಯ ನಾಗರಿಕರ ಸಂಘ, 9, ಹಿರೇಚಂದರ್‌ ರಸ್ತೆ, ಕಾಕ್ಸ್‌ ಟೌನ್‌, ಬೆಂಗಳೂರು- 560 005. ದೂರವಾಣಿ : 080- 548 8612.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X