• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿಯಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ರಾಜಧಾನಿ ಕನ್ನಡಿಗರ ಆಗ್ರಹ

By Staff
|

Basava Jayanthi celebrations in Delhiನವದೆಹಲಿ : 12 ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ಪ್ರತಿಮೆಯನ್ನು ದೆಹಲಿಯಲ್ಲಿ ಸ್ಥಾಪಿಸಬೇಕೆಂದು ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ.ಸಾಮಗ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ದೆಹಲಿ ಕನ್ನಡಿಗರು ಮಂಗಳವಾರ ಆಚರಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾಮಗ ಮಾತನಾಡುತ್ತಿದ್ದರು. ಬೆಂಗಳೂರು- ದೆಹಲಿ ನಡುವೆ ಪ್ರತಿದಿನ ಇನ್ನೊಂದು ವೇಗದೂತ ರೈಲನ್ನು ಓಡಿಸಬೇಕು ಹಾಗೂ ಆ ರೈಲಿಗೆ ಬಸವೇಶ್ವರ ಎಕ್ಸ್‌ಪ್ರೆಸ್‌ ಎಂದು ಹೆಸರಿಡಬೇಕು ಎಂದು ಅವರು ಒತ್ತಾಯಿಸಿದರು.

ಜಾತಿ ಮತಿ ಭೇದವಿಲ್ಲದೆ ಕನ್ನಡಿಗರು ಬಸವ ಪಂಥವನ್ನು ಬೆಂಬಲಿಸುವ ಮೂಲಕ ವಿಶ್ವ ಮಟ್ಟದಲ್ಲಿ ಬಸವ ತತ್ವ ಪ್ರಚಾರ ಮಾಡಬೇಕು. ಕರ್ನಾಟಕ ಸರ್ಕಾರವು ದೆಹಲಿಯಲ್ಲಿ ಬಸವಣ್ಣ ಸ್ಮಾರಕ ಕರ್ನಾಟಕ ಸಂಸ್ಕೃತಿ ಸಂಗ್ರಹಾಲಯ ತೆರೆಯಬೇಕು ಹಾಗೂ ಕರ್ನಾಟಕದಲ್ಲಿ ಬಸವಣ್ಣ ಸ್ಮಾರಕ ವಿಶ್ವ ವಿದ್ಯಾಲಯ ಪ್ರಾರಂಭಿಸಬೇಕೆಂದು ಸಾಮಗ ಒತ್ತಾಯಿಸಿದರು.

ಬಸವಣ್ಣ ಮಹಿಳೆಯರಿಗೆ ಪುರುಷರ ಸರಿಸಮ ಸ್ಥಾನ ನೀಡಿದುದನ್ನು ಸ್ಮರಿಸಿಕೊಂಡ ಲೇಖಕಿ ಡಾ।ಶಕುಂತಲಾ ದವೇಸರ್‌, ಕರ್ನಾಟಕದ ಮಹಿಳೆಯರ ಮುನ್ನಡೆಯ ಇತಿಹಾಸದಲ್ಲಿ ಬಸವಣ್ಣ ನೂತನ ಅಧ್ಯಾಯ ಆರಂಭಿಸಿದರು ಎಂದು ಅಭಿಪ್ರಾಯಪಟ್ಟರು. ಬ್ರಿಟಿಷ್‌ ಹೈಕಮಿಷನ್ನಿನ ಗ್ರಂಥಪಾಲಕ ಈಶ್ವರ ಭಟ್‌, ವಿಶ್ವದ ಎಲ್ಲ ಭಾಷೆಗಳಿಗೂ ಬಸವ ಸಾಹಿತ್ಯವನ್ನು ಅನುವಾದಿಸಿ ಪ್ರಕಟಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬಸವ ಪೀಠ ಸ್ಥಾಪಿಸುವ ಮೂಲಕ ಬಸವಣ್ಣನವರ ಕುರಿತು ವ್ಯಾಪಕ ಅಧ್ಯಯನಕ್ಕೆ ವ್ಯವಸ್ಥಿತ ಕಾರ್ಯಕ್ರಮ ರೂಪಿಸಬೇಕು ಎಂದ ಕಲಾವಿದೆ ವಸಂತಿ ಗಾಂಧಿ, ಕಲಾ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಮೂಲಕ ಬಸವಣ್ಣನವರನ್ನು ದೇಶದ ಎಲ್ಲ ವರ್ಗದವರಿಗೂ ತಲುಪಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಪಿ.ವಿ.ಇಂದಿರೇಶನ್‌ ಅವರು, ಬಸವಣ್ಣನವರ ಕಾಯಕವೇ ಕೈಲಾಸ ಆದರ್ಶ ಕನ್ನಡಿಗರ ಪ್ರಗತಿಯ ಬೀಜಮಂತ್ರವಾಗಬೇಕು ಎಂದು ಹೇಳಿದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more