• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರ ಪ್ರದೇಶದ ಬಡವರಿಗೆ 2003 ರ ಮಾರ್ಚ್‌ 31 ರೊಳಗೆ 10,312 ಮನೆ

By Staff
|

ಬೆಂಗಳೂರು : 2003 ನೇ ಇಸವಿಯ ಮಾರ್ಚ್‌ 31 ರೊಳಗೆ ನಗರ ಪ್ರದೇಶದ ಬಡವರು ಹಾಗೂ ಕೊಳಚೆ ನಿವಾಸಿಗಳಿಗಾಗಿ 10 ಸಾವಿರದ 312 ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿದೆ.

ಕೇಂದ್ರ ಸರ್ಕಾರ ಪ್ರಾಯೋಜಿತ ವಾಲ್ಮೀಕಿ ಅಂಬೇಡ್ಕರ್‌ ಆವಾಸ್‌ ಯೋಜನೆಯಡಿ 58 ಕೋಟಿ ರುಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ವಸತಿ ಸಚಿವ ಕಮರುಲ್‌ ಇಸ್ಲಾಂ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಕಳೆದ ತಿಂಗಳಷ್ಟೇ ಯೋಜನೆಗೆ ಚಾಲನೆ ದೊರೆತಿದ್ದು , ಕೇಂದ್ರ ಸರ್ಕಾರ ಈವರೆಗೆ 16 ಕೋಟಿ ರುಪಾಯಿಗಳನ್ನು ಹುಡ್ಕೋಗೆ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಹೆಚ್ಚು ಮನೆಗಳನ್ನು ನಿರ್ಮಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಕಮರುಲ್‌ ಹೇಳಿದರು.

ಮನೆಗಳ ನಿರ್ಮಾಣಕ್ಕೆ ಖರ್ಚಾಗುವ ಹಣದಲ್ಲಿ ಪ್ರತಿಶತ 50 ರಷ್ಟನ್ನು ಕೇಂದ್ರ ಸರ್ಕಾರ ಭರಿಸುವುದು. ಉಳಿದ ಹಣವನ್ನು ರಾಜ್ಯ ಸರ್ಕಾರ ಪೂರೈಸಬೇಕಾಗಿದೆ ಎಂದ ಸಚಿವರು, ಲಕ್ಷ್ಮಣ್‌ ರಾವ್‌ ನಗರದಲ್ಲಿ ಕೊಳಚೆ ನಿವಾಸಿಗಳಿಗಾಗಿ 1 ಸಾವಿರ ಮನೆಗಳ ನಿರ್ಮಾಣದ ವಿಶೇಷ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ್‌ಕುಮಾರ್‌ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ನೂತನ ಏಳು ಜಿಲ್ಲೆಗಳಲ್ಲಿನ ಬಡವರಿಗೆ ವಾಲ್ಮೀಕಿ ಆವಾಸ್‌ ಯೋಜನೆಯಡಿ ಮನೆಗಳನ್ನು ಕಲ್ಪಿಸುವ ಕುರಿತು ಪರಿಶೀಲಿಸುವಂತೆಯೂ ಅನಂತ್‌ಕುಮಾರ್‌ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದ ಕಮರುಲ್‌, ರಾಜೀವ್‌ಗಾಂಧಿ ವಸತಿ ನಿಗಮ 2001-02 ನೇ ಇಸವಿಯಲ್ಲಿ 3.15 ಲಕ್ಷ ಮನೆಗಳ ನಿರ್ಮಾಣ ಪೂರೈಸಿದೆ ಎಂದರು. ನಿಗಮವು 4 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಬಾಕಿಯಿರುವ 85 ಲಕ್ಷ ಮನೆಗಳ ಕಾಮಗಾರಿ ವಿವಿಧ ಹಂತಗಳಲ್ಲಿದೆ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X