ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್‌ ಮಾಫಿಯಾ ಕರಾಳ ಹಸ್ತದಲ್ಲಿ ನಲುಗುತ್ತಿರುವ ಬೀದರ್‌ ಯುವ ಜನಾಂಗ!

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಬೇಕಾದ ಔಷಧಿ ಸಿಗುವುದು ಕಷ್ಟ , ಮಾದಕ ವಸ್ತು ಮಾತ್ರ ಧಾರಾಳ...

ಮಾದಕ ಪದಾರ್ಥಗಳ ನಿಯಂತ್ರಣ ಮಂಡಳಿಯೂ ಕೂಡ ಜಿಲ್ಲೆ ಮಾದಕ ವಸ್ತುಗಳ ಮಾಫಿಯಾಕ್ಕೆ ಬಲಿಯಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಇಲ್ಲಿನ ಎಲ್ಲ ಮೆಡಿಕಲ್‌ ಸ್ಟೋರ್ಸ್‌ಗಳಲ್ಲಿ ದುಪ್ಪಟ್ಟು ಹಣ ಕೊಟ್ಟರೆ, ಬೇಕಾದ ಮಾದಕ ಪದಾರ್ಥಗಳು ಸಾಕಷ್ಟು ದೊರೆಯುತ್ತವೆ. ವಿದ್ಯಾರ್ಥಿಗಳು ಈ ಮಾದಕ ವಸ್ತುಗಳ ದಾಸರಾಗುತ್ತಿರುವುದಲ್ಲದೆ, ಮಾದಕ ವಸ್ತುಗಳ ಮಾಫಿಯಾದತ್ತಲೂ ಅವರು ತೆರಳುತ್ತಿದ್ದಾರೆ.

ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯ ಪ್ರಕಾರ ಈಗಾಗಲೇ ಜಿಲ್ಲೆಯಲ್ಲಿ 300 ಮೆಡಿಕಲ್‌ ಸ್ಟೋರ್‌ಗಳಿವೆ. ಅವುಗಳಲ್ಲಿ ಬಹುತೇಕ ಅಂಗಡಿಗಳು ಮಾದಕ ಪದಾರ್ಥಗಳ ಮಾಫಿಯಾ ಜಾಲದಲ್ಲಿವೆ. ಶಂಕೆಗೊಳಗಾದ ಅಂಗಡಿಗಳಿಗೆ ಶೋಕಾಸ್‌ ನೋಟೀಸ್‌ ನೀಡಲಾಗಿದೆ.

ಮೆಡಿಕಲ್‌ ಸ್ಟೋರ್ಸ್‌ನ ಮಾಲಿಕರೊಬ್ಬರ ಪ್ರಕಾರ, ಶಿಕ್ಷಣ ಸಂಸ್ಥೆಗಳ ಪ್ರಮುಖರ ನಿರ್ಲಕ್ಷ್ಯವೇ ಈ ಸಮಸ್ಯೆ ಬೆಳೆಯಲು ಕಾರಣ. ಹಾಸ್ಟೆಲ್‌ ವಾರ್ಡನ್‌ಗಳು, ಕಾಲೇಜು ಪ್ರಾಂಶುಪಾಲರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಲ್ಲಿ ಈ ಸಮಸ್ಯೆ ಬೆಳೆಯುವುದಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಯ ಪ್ರಮುಖರ ವಿರುದ್ಧವೇ ಮೊದಲ ಹಂತದ ಕ್ರಮ ಕೈಗೊಳ್ಳಬೇಕು.

ಸೂಚನೆಗಳು , ಸುತ್ತೋಲೆಗಳು...

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾದಕ ಪದಾರ್ಥ ವ್ಯಸನಿಗಳ ಮತ್ತು ಮಾದಕ ಪದಾರ್ಥಗಳ ಮಾರಾಟಗಾರರ ವಿರದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಎಸ್‌. ಪ್ರಭಾಕರ್‌ ಹೇಳಿದ್ದಾರೆ.

ವಿಷಕಾರಿ ಅಲ್ಲವೆಂದು ಘೋಷಿಸಲ್ಪಟ್ಟಿರುವ ಕೆಲವು ಸಿರಪ್‌ಗಳು ಮತ್ತು ಗುಳಿಗೆಗಳನ್ನು ಮಾರಬಾರದು ಎಂದು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ. ಆದರೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ಇವುಗಳ ಕಳ್ಳ ಮಾರಾಟ ಮುಂದುವರೆದೇ ಇದೆ.

ಜಿಲ್ಲೆಯಲ್ಲಿ ಫಾರ್ಮಸಿ ಮಾಲಿಕರ ಸಂಘವೊಂದಿದೆ. ಈ ಸಂಘವೂ ಮಾದಕ ಪದಾರ್ಥ ಮಾರಾಟದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸುತ್ತೋಲೆಯನ್ನು ಹೊರಡಿಸಿದೆ. ಡಾಕ್ಟರ್‌ ಶಿಫಾರಸು ಮಾಡಿದ ಚೀಟಿಯಿಲ್ಲದೇ ಗ್ರಾಹಕರು ಕೇಳುವ ಔಷಧಿಯನ್ನು ನೀಡಬಾರದು ಎಂದು ಮೆಡಿಕಲ್‌ ಸ್ಟೋರ್‌ ಮಾಲಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಆದರೂ ಕಳ್ಳ ಮಾಲು ಸರಬರಾಜು ನಡೆದೇ ಇದೆ. ಡ್ರಗ್‌ ಮಾಫಿಯಾ ರಂಗೋಲಿಯಡಿ ತೂರುತ್ತಿದೆ. ಯುವ ಜನತೆಯ ಭವಿಷ್ಯವೇನು?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X