• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಠ ಕಟ್ಟಿ ನೋಡು ! ಇದು ಆದರ್ಶ ಸ್ಕೂಲು ಕಟ್ಟಿದ ಮಠದ ಕಥೆ !

By Staff
|

*ಎಸ್ಕೆ. ಶಾಮಸುಂದರ

Sri Raghaveshwara Swamijiಮಠ ಕಟ್ಟಿ ನೋಡು !

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನುವುದರ ಜೊತೆಗೆ ಸೇರಿಕೊಂಡಿರುವುದು- ಮಠ ಕಟ್ಟಿ ನೋಡು ! ಮಠ ಕಟ್ಟುವುದೆಂದರೆ ಅದೇನು ತಮಾಷೆಯಾ? ತುಸು ಕೊರೆಯಿದ್ದರೂ ಮುಹೂರ್ತಕ್ಕೆ ಸರಿಯಾಗಿ ಮದುವೆ ಮುಗಿಯಬಹುದು. ಮನೆಗೆ ಸುಣ್ಣ ಬಣ್ಣವಿಲ್ಲದಿದ್ದರೂ ಆದೀತು. ಮಠದ ವಿಚಾರ ಹೀಗಲ್ಲ ...

ಮದುವೆ, ಮನೆ ಕೌಟುಂಬಿಕ ಸಂಗತಿಗಳಾದರೆ, ಮಠ ಸಮುದಾಯದ ವಿಚಾರ. ಒಂದು ಜನಾಂಗದ, ಸಮುದಾಯದ ಧಾರ್ಮಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಮಠಗಳಿಗೆ/ ಮಠಾಧಿಪತಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನವಿದೆ. ಮಠಾಧಿಪತಿಗಳದು ಧರ್ಮಕಾರಣವಾದರೂ, ರಾಜಕಾರಣದ ಸೂತ್ರಗಳ ನಿಯಂತ್ರಣ ಪರೋಕ್ಷವಾಗಿ ಅವರ ಕೈಯ್ಯಲ್ಲೇ ಇರುತ್ತವೆ. ರಾಜಕೀಯಕ್ಕಿಂಥ ಧರ್ಮ ದೊಡ್ಡದು. ಹಾಗೆಂದು ಜನ ನಂಬಿದ್ದಾರೆ. ನಂಬಿಕೆಯ ಆಳ ಪಾತಾಳ!

ಇದೆಲ್ಲಾ ಸರಿ, ಮಠಗಳ ಕರ್ತವ್ಯವೇನು?

ಒಂದೇ ಮಾತಿನಲ್ಲಿ ಮಠಗಳ ಕಾರ್ಯ ವೈಖರಿಯನ್ನು ಹೇಳುವುದಾದರೆ- ಧರ್ಮರಕ್ಷಣ ಹಾಗೂ ಜನತೆಗೆ ಆತ್ಮ ಸಾಕ್ಷಾತ್ಕಾರ ದರ್ಶನಕ್ಕೆ ನೆರವು ನೀಡುವುದು. ಕಾಲ ಬದಲಾಗಿದೆ ಸ್ವಾಮಿ ; ಮಠಗಳೂ ಕಾಲಕ್ಕೆ ತಕ್ಕಂತೆ ಬದಲಾಗಿವೆ. ವ್ಯಕ್ತಿಗೆ ಧರ್ಮ ಬೋಧಿಸುವ ಮೊದಲು ಅನ್ನ - ಅರಿವು ನೀಡಬೇಕು ಎನ್ನುವುದು ಮಠಗಳಿಗೂ, ಮಠಾಧಿಪತಿಗಳಿಗೂ ಅರ್ಥವಾಗಿದೆ. ಆ ಕಾರಣದಿಂದಲೇ ಧರ್ಮ ದಾಸೋಹದ ಜೊತೆಗೆ ವಿದ್ಯಾ ದಾಸೋಹವನ್ನೂ ಮಠಗಳು ತಮ್ಮ ಕಾರ್ಯ ಚಟುವಟಿಕೆಯ ಒಂದಂಗವಾಗಿ ಸ್ವೀಕರಿಸಿವೆ.

ಕರ್ನಾಟಕದಲ್ಲಿನ ಮಠಗಳನ್ನೇ ನೋಡಿ. ಇವತ್ತು ರಾಜ್ಯದಲ್ಲಿನ ಬಹುತೇಕ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಮಠಗಳೇ. ರಾಜ್ಯದ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ದೊಡ್ಡದು ಎಂದು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ, ಮಠಗಳ ವಿದ್ಯಾ ದಾಸೋಹ ಎಷ್ಟರ ಮಟ್ಟಿಗೆ ಜನ ಸಾಮಾನ್ಯರನ್ನು ಮುಟ್ಟುತ್ತಿದೆ?

Bharathi Vidyalaya under construction in Vijayanagarಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಯೆಂದರೆ- ಇಂಜಿನಿಯರಿಂಗ್‌ ಅಥವಾ ಮೆಡಿಕಲ್‌ ಕಾಲೇಜು ನಡೆಸುವುದು ಎನ್ನುವ ಭಾವನೆ ಅದು ಹೇಗೋ ಜನತೆಯಲ್ಲಿ ಮನೆ ಮಾಡಿದೆ. ನಮ್ಮ ಮಠಗಳ ವಿದ್ಯಾ ದಾಸೋಹದ ಪರಿ ಕೂಡ ಈ ಭಾವನೆಯನ್ನು ಸಮರ್ಥಿಸುವಂತೆಯೇ ಇದೆ. ಇಂಜಿನಿಯರಿಂಗ್‌/ ಮೆಡಿಕಲ್‌ ಕಾಲೇಜುಗಳು ಮಠಗಳ ಪ್ರತಿಷ್ಠೆಯ ಸಂಕೇತವಾಗಿ ರೂಪುಗೊಂಡಿದ್ದು , ಮಠದ ಪಾಲಿಗೆ ಚಿನ್ನದ ಗಣಿಗಳೂ ಆಗಿವೆ. ಅರ್ಥಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಉಮೇದಿ ಯಾವ ಮಠಕ್ಕೂ ಇದ್ದಂತಿಲ್ಲ . ಈ ಪರಿಸ್ಥಿತಿಯಲ್ಲಿ ಮಠಗಳ ಕುರಿತು ಗುಮಾನಿಯೂ, ವಿದ್ಯಾ ದಾಸೋಹ ಎನ್ನುವ ಪರಿಕಲ್ಪನೆಯ ಕುರಿತು ಗೇಲಿಯೂ ಉಂಟಾಗುವುದರಲ್ಲಿ ಏನಾಶ್ಚರ್ಯ?

ಮಠಗಳು ವಿದ್ಯಾ ವ್ಯಾಪಾರ ಮಾಡುತ್ತಿವೆ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ- ಕೆಲವು ಮಠಗಳಿಂದ ವಿದ್ಯಾ ದಾಸೋಹ ನಡೆಯುತ್ತಿದೆ ಎನ್ನುವುದು. ಅಂಥ ಮಠಗಳಲ್ಲಿ ಒಂದು-
ಶ್ರೀ ರಾಮಚಂದ್ರಾಪುರ ಮಠ.

ಬೆಂಗಳೂರಿನ ವಿಜಯನಗರದ ಆರ್‌ಪಿಸಿ ಬಡಾವಣೆಯಲ್ಲಿ ಆರಂಭಗೊಳ್ಳಲಿರುವ ‘ಶ್ರೀ ಭಾರತೀ ವಿದ್ಯಾಲಯ’ ರಾಮಚಂದ್ರಾಪುರ ಮಠದ ವಿದ್ಯಾ ದಾಸೋಹದ ಬಗೆಗಿನ ಕಾಳಜಿಗೆ ಸಾಕ್ಷಿ. ಬೆಂಗಳೂರಿನಲ್ಲಿ ಬಡಾವಣೆಗೆ ಮೂರ್ನಾಲ್ಕರಂತೆ ಶಾಲೆಗಳಿವೆ. ಮಠದ ಶಾಲೆ ಈ ಶಾಲೆಗಳಂತಲ್ಲ ; ಇಲ್ಲಿ ಮಕ್ಕಿ ಕಾ ಮಕ್ಕಿ ಪಾಠ ಮಾತ್ರ ಹೇಳಿಕೊಡುವುದಿಲ್ಲ . ಆಧುನಿಕ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಶಿಕ್ಷಣವನ್ನು ನೀಡುವುದು ಭಾರತೀ ವಿದ್ಯಾಲಯದ ಗುರಿ. ಸೃಜನಾತ್ಮಕ ಚಿಂತನೆ, ಆತ್ಮ ಸ್ಥೈರ್ಯವನ್ನು ಉದ್ದೀಪಿಸುವ ಉದ್ದೇಶದ ಈ ಶಾಲೆ, ಆಟದ ಮೂಲಕ ಪಾಠ ಕಲಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಮನೆ ಪಾಠದ ಚಿಂತೆಯಿಲ್ಲ , ಕಲಿಕೆಯ ಹೆಸರಿನಲ್ಲಿ ಮಕ್ಕಳಿಂದ ಬಾಲ್ಯವನ್ನು ಕಸಿಯುವುದಿಲ್ಲ - ಇದು ಭಾರತೀ ವಿದ್ಯಾಲಯದ ಧ್ಯೇಯ ವಾಕ್ಯ! ನಮಗೆ ಬೇಕಾಗಿರುವ ಶಿಕ್ಷಣ ಇದೇ ಅಲ್ಲವೇ!

Ramalaya, Girinagaraಮೇ 15 ರ ಬುಧವಾರ ಅಕ್ಷತ ತದಿಗೆಯಂದು ಭಾರತೀ ವಿದ್ಯಾಲಯ ಪ್ರಾರಂಭ. ಶ್ರೀ ಮದ್ರಾಘವೇಶ್ವರ ಭಾರತೀ ಸ್ವಾಮೀಜಿ ಶಾಲೆಯನ್ನು ಆರಂಭಿಸಲಿದ್ದಾರೆ. ಜೂನ್‌ ತಿಂಗಳ ಎರಡನೇ ವಾರದಿಂದ ವಿದ್ಯಾ ದಾಸೋಹ ಆರಂಭ. ಇಂಗ್ಲೀಷ್‌ ಕಳೆಗಳೇ ತುಂಬಿರುವ ಬೆಂಗಳೂರಿನಲ್ಲಿ ಹಳೇಬೇರು- ಹೊಸ ಚಿಗುರಿನ ಶಾಲೆ ಸದ್ದಿಲ್ಲದೆ ಮೊಳೆಯುತ್ತಿದೆ. ಒಂದನೆ ತರಗತಿಯಿಂದ 12 ನೇ ಇಯತ್ತೆವರೆಗೆ ಭಾರತೀ ವಿದ್ಯಾಲಯ ಕಲಿಸುತ್ತದೆ. ಪಿಯುಸಿ ಕಲಿತು ಶಾಲೆಯಿಂದ ಹೊರಬೀಳುವ ಪ್ರತಿ ವಿದ್ಯಾರ್ಥಿಯಲ್ಲೂ ಒಬ್ಬ ಸುಸಂಸ್ಕೃತ ಭಾರತೀಯನಿರುತ್ತಾನೆ ಎಂದು ಆಶಿಸುವುದರಲ್ಲಿ ತಪ್ಪೇನಿದೆ? ಶಾಲೆಯ ವಾತಾವರಣ ಹಾಗಿದೆ.

ಶ್ರೀ ರಾಮಾಲಯ ಪ್ರತಿಷ್ಠಾಪನಾ ಮಹೋತ್ಸವ
ಮೇ 15 ರಂದೇ ಮಠ ಹಮ್ಮಿಕೊಂಡಿರುವ ಇನ್ನೊಂದು ಶುಭ ಮುಹೂರ್ತ- ಸುಮಾರು 75 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಬೆಂಗಳೂರಿನ ಗಿರಿ ನಗರದಲ್ಲಿ ನಿರ್ಮಿಸುತ್ತಿರುವ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ. ಆರು ದಿನಗಳ ಕಾಲ ನಡೆಯಲಿರುವ ಈ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಮಾಜದ ಎಲ್ಲ ವರ್ಗಗಳೂ ಭಾಗವಹಿಸಬೇಕೆಂದು ಸ್ವಾಮೀಜಿ ಅಪೇಕ್ಷಿಸಿದ್ದಾರೆ. ರಾಮ ಭಜನೆಗೆ ಒಟ್ಟುಗೂಡುತ್ತೀರಲ್ಲಾ ?

1200 ವರ್ಷಗಳ ಮಠದ ಪರಂಪರೆ
ಹವ್ಯಕ ಶಿಷ್ಯವೃಂದವನ್ನುಳ್ಳ ರಾಮಚಂದ್ರಾಪುರ ಮಠಕ್ಕೆ ಭಂಡಾರಿಗಳು, ಪಡಸಾಲಿಗಳು, ಅಮ್ಮು ಕೊಡವರು, ಪಡಿಯಾರರು, ಹಾಲಕ್ಕಿಗಳು, ಬೋವಿಗಳು, ಗುಡಿಗಾರರು ಸೇರಿದಂತೆ 18 ಪಂಗಡಗಳ ಮಂದಿ ನಡೆದುಕೊಳ್ಳುತ್ತಾರೆ. ಮಠದ ಭಕ್ತವೃಂದ ವಿಶ್ವಾದ್ಯಂತ ನೆಲೆಸಿದೆ. ಶಂಕರಾಚಾರ್ಯರು 9 ನೇ ಶತಮಾನದಲ್ಲಿ ಗೋಕರ್ಣದಲ್ಲಿ ಸ್ಥಾಪಿಸಿದ ರಘೂತ್ತಮ ಮಠವೇ ಇವತ್ತಿನ ರಾಮಚಂದ್ರಾಪುರ ಮಠದ ಬೇರು. ಹೊನ್ನಾವರದ ಕೆಕ್ಕಾರಿ, ದಕ್ಷಿಣಕನ್ನಡದ ಮಾಣಿ, ಸಿದ್ಧಾಪುರ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಮಠದ ಶಾಖೆಗಳಿವೆ.

ಪ್ರಸ್ತುತ ಮಠದ ಪೀಠಾಧೀಶರಾಗಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠದ 36 ನೇ ಪೀಠಾಧೀಶ. ಇವರಿಗೂ ಮುನ್ನ ಮಠದ ಪೀಠಾಧೀಶರಾಗಿದ್ದ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿ ಹಲವಾರು ವೇದ ಪಾಠಶಾಲೆಗಳನ್ನು ಸ್ಥಾಪಿಸಿದ್ದರು. ಬೆಂಗಳೂರಿನಲ್ಲಿ ರಾಮ ಮಂದಿರವೊಂದನ್ನು ನಿರ್ಮಿಸಬೇಕೆನ್ನುವುದು ಅವರ ಕನಸು. ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮೂಲಕ ಆ ಕನಸೀಗ ಜೀವಗೊಳ್ಳುತ್ತಿದೆ.

ಸಾಗೋಣ ಬೆಳಕಿನೆಡೆಗೆ ಎನ್ನುವ ಧ್ಯೇಯ ವಾಕ್ಯ ಹೊಂದಿರುವ ರಾಘವೇಶ್ವರ ಸ್ವಾಮೀಜಿ- ಭಾರತೀಯ ಪದ್ಧತಿಯ ಶಿಕ್ಷಣ, ಆರ್ತರಿಗೆ ಸಹಾಯ ನಿಧಿ, ಮುಷ್ಠಿ ಭಿಕ್ಷಾ, ದೇವಾಲಯಗಳ ಜೀರ್ಣೋದ್ಧಾರ ಮುಂತಾದ ಸಮಾಜಮುಖಿ- ಧರ್ಮಮುಖಿ ಯೋಜನೆಗಳ ಪೋಷಿಸುತ್ತಿದ್ದಾರೆ. ಮುಷ್ಠಿ ಭಿಕ್ಷಾ ಯೋಜನೆಯಡಿ ದೇಶದ ಗೃಹಿಣಿಯಿರಿಂದ ಸಂಗ್ರಹಿಸಿದ ಹಿಡಿ ಹಿಡಿ ಅಕ್ಕಿ ಸೇರಿ- ಒಟ್ಟು 100 ಕ್ವಿಂಟಾಲ್‌ ಅಕ್ಕಿಯನ್ನು ಗುಜರಾತ್‌ನ ಭೂಕಂಪ ಸಂತ್ರಸ್ತರಿಗೆ ಒದಗಿಸಲಾಗಿದೆ. ಭೂಕಂಪ ಗ್ರಸ್ತ ಗ್ರಾಮವೊಂದನ್ನು ಪುನರ್‌ ನಿರ್ಮಿಸಲು ಮಠ ದತ್ತು ತೆಗೆದುಕೊಂಡಿದೆ.

ಮಠಗಳೆಲ್ಲಾ ಸ್ಥಾವರಗಳಾಗುತ್ತಿರುವ ಸಂದರ್ಭದಲ್ಲಿ ರಾಮಚಂದ್ರಾಪುರದ ಮಠ ವಿದ್ಯಾ ದಾಸೋಹ, ಅನ್ನ ದಾಸೋಹದ ಮೂಲಕ ಸಮಾಜ ಮುಖಿಯಾಗಿದೆ. ಮಠ ಕಟ್ಟಿ ನೋಡು ಎನ್ನಲು ಪ್ರಜ್ಞಾವಂತ ನಾಗರಿಕ ಹಿಂಜರಿಯಬೇಕಾದ ಸಮಯದಲ್ಲಿ - ರಾಮಚಂದ್ರಾಪುರದ ಮಠ ತೀರಾ ಭಿನ್ನವಾಗಿ, ನಾವೆಲ್ಲ ಹೆಮ್ಮೆ ಪಡುವಂತಿದೆ. ಈ ಮಠ ನಮ್ಮ ಸಂಸ್ಕೃತಿ ಉದಾತ್ತತೆಯ ಕನ್ನಡಿ ಇದ್ದಂತಿದೆ, ಅಲ್ಲವೇ?

ಭಾರತೀ ವಿದ್ಯಾಲಯ / ಶ್ರೀ ರಾಮಾಲಯಕ್ಕೆ ದೇಣಿಗೆ ನೀಡಲು ಬಯಸುವವರು :
ವಿದ್ಯಾ ಮಂದಿರ, 2 ಎ, ಜೆ.ಪಿ. ರಸ್ತೆ , ಗಿರಿ ನಗರ, ಬೆಂಗಳೂರು- 560085 ಅಥವಾ ದೂರವಾಣಿ ಸಂಖ್ಯೆ 080- 6721510 ಸಂಪರ್ಕಿಸಬಹುದು.

Post your views

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more