ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್‌ನಲ್ಲಿ ಒಂದಾಗದ ನಾಗರೀಕರು, ಶನಿವಾರವೂ ಬಿಸಿಲಿನದೇ ಬಿಸಿ!

By Staff
|
Google Oneindia Kannada News

ಜನ ಸಾಮಾನ್ಯರ ಪಾಲಿಗೆ ಮಾರಕವಾಗಿರುವ ವಿದ್ಯುತ್‌ ದರ ಏರಿಕೆಯನ್ನು ಪ್ರತಿಭಟಿಸಿ ಭಾರತೀಯ ಜನತಾ ಪಕ್ಷ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಜನ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ .

ಕೆಲವೆಡೆ ಬಸ್‌ ತಡೆ, ಸಣ್ಣ ಪುಟ್ಟ ಕಲ್ಲು ತೂರಾಟ, ಪ್ರತಿಭಟನಾ ಮೆರವಣಿಗೆಗಳನ್ನು ಹೊರತು ಪಡಿಸಿದರೆ ಬಂದ್‌ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರತಿಶತ 16.20 ರಷ್ಟು ವಿದ್ಯುತ್‌ ದರ ಏರಿಕೆಗೆ ವಿದ್ಯುತ್‌ ನಿಯಂತ್ರಣ ಆಯೋಗ, ಕೆಪಿಟಿಸಿಎಲ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಈ ಬಂದ್‌ಗೆ ಕರೆ ನೀಡಿತ್ತು .

ತಿಂಗಳ ಎರಡನೇ ಶನಿವಾರ ಆದುದರಿಂದ ರಾಜ್ಯ ಸರ್ಕಾರಿ ಕಚೇರಿಗಳಿಗೆ ರಜೆಯಿದೆ. ಸಾಫ್ಟ್‌ವೇರ್‌ ಕಂಪೆನಿಗಳಿಗೂ ವೀಕೆಂಡ್‌ ರಜಾ. ಉಳಿದಂತೆ ಎಲ್ಲ ಬ್ಯಾಂಕುಗಳು ಹಾಗೂ ಖಾಸಗಿ ಕಚೇರಿಗಳು ಕಾರ್ಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ . ಶಾಂತಿಪಾಲನೆಗೆ ರಾಜ್ಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದು , ಶಾಂತಿ ರಕ್ಷಣೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಗೃಹ ರಕ್ಷಣಾ ದಳವನ್ನು ನಿಯೋಜಿಸಲಾಗಿದೆ.

ಬೆಂಗಳೂರಿನ ಕೆಲವೆಡೆಗಳಲ್ಲಿ ಬಸ್‌ ಸಂಚಾರಕ್ಕೆ ತಡೆಯಾಡ್ಡಲು ಪ್ರಯತ್ನಿಸಿದ ಕೆಲವರು, ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಬೆಂಗಳೂರಿನಲ್ಲಿ ಬಸ್‌, ಆಟೋ ಸಂಚಾರ ಎಂದಿನಂತಿದ್ದು ಸಿನಿಮಾ ಮಂದಿರಗಳಲ್ಲೂ ರಜೆಯ ರಷ್‌ ಕಾಣಿಸಿಕೊಂಡಿದೆ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಬಿಜೆಪಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಬಂದ್‌ಗೆ ಹೇಳಿಕೊಳ್ಳುವ ಪ್ರತಿಕ್ರಿಯೆಯೇನೂ ಕಂಡು ಬಂದಿಲ್ಲ . ಮೈಸೂರು ನಗರದಲ್ಲಿ ಬಂದ್‌ಗೆ ಸ್ವಲ್ಪ ಮಟ್ಟಿಗಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದು - ಬಸ್‌ ಸಂಚಾರ ವಿರಳವಾಗಿದೆ. ವಾಣಿಜ್ಯ ವಹಿವಾಟೂ ಬಿರುಸು ಕಳಕೊಂಡಿದೆ. ದಾವಣಗೆರೆಯಲ್ಲಿ ನಿಷೇದಾಜ್ಞೆ ಉಲ್ಲಂಘಿಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಶಿವಯೋಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
(ಪಿಟಿಐ /ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X